• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸುದ್ದಿ ಮನೆಗೆ ಕಾಲಿಟ್ಟಿತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಕೆಲಸ ಹೇಗೆ?

|

ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿ ಮತ್ತೆ) ಕಾಲಿಡದ ಕ್ಷೇತ್ರವಾದರೂ ಇದೆಯಾ ಎಂಬ ಪ್ರಶ್ನೆ ಉದ್ಭವಿಸುವಂಥ ಸುದ್ದಿಯೊಂದು ಇಲ್ಲಿದೆ. ಅಂದ ಹಾಗೆ ಸುದ್ದಿ ಮನೆಗೂ 'ಕೃತಕ ಬುದ್ಧಿ ಮತ್ತೆ' ಅಂಬೆಗಾಲಿಟ್ಟಿದೆ. ಜಗತ್ತಿನ ಮೊದಲ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇರುವ ಸುದ್ದಿ ನಿರೂಪಕ ಸಿದ್ಧವಾಗಿದ್ದು, ಇಂಗ್ಲಿಷ್ ಹಾಗೂ ಚೀನಿ ಭಾಷೆಯಲ್ಲಿ ಸುದ್ದಿ ಓದಲಾಗುತ್ತದೆ.

ಸರ್ಚ್ ಎಂಜಿನ್ ಆಪರೇಟರ್ ಸೊಗೊವ್ ಸಹಯೋಗದ ಜೊತೆಗೆ ಕ್ಸಿನುವಾ ಈ ತಂತ್ರಜ್ಞಾನವನ್ನು ಚೀನಾದ ವುಜೆನ್ ನಲ್ಲಿನ ವಿಶ್ವ ಅಂತರ್ಜಾಲ ಸಮಾವೇಶದಲ್ಲಿ ಪ್ರದರ್ಶಿಸಲಾಗಿದೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಎಐ) ಮನುಷ್ಯ ರೂಪದಲ್ಲಿ ಹಾಗೂ ರೀತಿಯಲ್ಲಿ ಕಾಣಿಸಿಕೊಳ್ಳಲಿದ್ದು, ಸುದ್ದಿಯನ್ನು ಓದಲಾಗುತ್ತದೆ.

ಚೀನಾದಲ್ಲಿ ವಿಶ್ವದ ಎತ್ತರದ ವಾಯು ಮಾಲಿನ್ಯ ಶುದ್ಧೀಕರಣ ಘಟಕ

ಅವುಗಳ ಮುಖ ಭಾವ ಹಾಗೂ ತುಟಿ ಚಲನೆ ಬಹಳ ಕಡಿಮೆ ಇರುವುದರಿಂದ ಸಹಜ ಮನುಷ್ಯರಂತೆ ಕಾಣಿಸುತ್ತದೆ. ಕ್ಸಿನುವಾದ ಮೊದಲ ಇಂಗ್ಲಿಷ್ 'ಎಐ' ಹೇಗೆ ಕೆಲಸ ಮಾಡುತ್ತದೆ ಮತ್ತು ಸಾಮರ್ಥ್ಯ ಏನು ಇತ್ಯಾದಿ ವಿಚಾರಗಳನ್ನು ಹೇಳಿಕೊಂಡಿತು. ಏಜೆನ್ಸಿಯ ಸುದ್ದಿ ನಿರೂಪಕ ಝಾಂಗ್ ಝೋ ರೀತಿ ಕಾಣುವಂತೆ ರೂಪಿಸಲಾಗಿದೆ. ಟೆಲಿಪ್ರಿಂಟರ್ ನಲ್ಲಿ ಏನು ಅಚ್ಚಾಗಿರುತ್ತದೋ ಅದನ್ನು 'ಎಐ' ನಿರೂಪಕ ಓದಬಲ್ಲದು.

ಇದಕ್ಕೆ ದಣಿವು ಕೂಡ ಆಗುವುದಿಲ್ಲ. ಯಾವುದೇ ಅಡೆತಡೆ ಇಲ್ಲದೆ ನಿರಂತರವಾಗಿ ಸುದ್ದಿ ಓದಬಲ್ಲದು. 'ಎಐ' ಸುದ್ದಿ ನಿರೂಪಕ ತಾನಾಗಿಯೇ ದತ್ತಾಂಶ ಸಂಗ್ರಹಿಸಿ, ಕಲಿತು ತಾನಾಗಿಯೇ ಅಭಿವೃದ್ಧಿ ಪಡಿಸುತ್ತದೆ. ನೇರ ಪ್ರಸಾರದ ಕಾರ್ಯಕ್ರಮಗಳ ವಿಡಿಯೋ ನೋಡುತ್ತಾ ಸುದ್ದಿಯನ್ನು ವೃತ್ತಿಪರ ಸುದ್ದಿ ನಿರೂಪಕರಂತೆಯೇ ಓದಬಲ್ಲದು ಎಂದು ಕ್ಸಿನುವಾ ವರದಿ ಮಾಡಿದೆ.

ಪಾಕ್ ಗೆ ನೀಡುತ್ತಿರುವ ನೆರವೇನು ಎಂದು ಬಹಿರಂಗ ಪಡಿಸಲು ಚೀನಾ ನಕಾರ

'ಎಐ' ಸುದ್ದಿ ನಿರೂಪಕ ಅದಾಗಲೇ ಸುದ್ದಿ ಸಂಸ್ಥೆಯ ವರದಿಗಾರಿಕೆ ತಂಡದ ಸದಸ್ಯ ಆಗಿದೆ. ಅದು ನಿರಂತರ ಇಪ್ಪತ್ನಾಲ್ಕು ಗಂಟೆ ಕೆಲಸ ಮಾಡಬಲ್ಲದು. ವೆಬ್ ಸೈಟ್ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲೂ ಕಾರ್ಯ ನಿರ್ವಹಿಸಬಲ್ಲದು. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನಿಂದ ವೆಚ್ಚ ಕಡಿಮೆ ಆಗಿ, ಸಾಮರ್ಥ್ಯ ವೃದ್ಧಿ ಆಗುತ್ತದೆ ಎನ್ನಲಾಗಿದೆ.

ಈಗಾಗಲೇ ವರದಿಗಾರಿಕೆಯನ್ನೂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆರಂಭಿಸಿದೆ. ಇದು 'ಎಐ' ಸುದ್ದಿ ನಿರೂಪಕ ಆದ್ದರಿಂದ ಯಾವುದೇ ಮುಖಭಾವ ವ್ಯಕ್ತವಾಗದೆ ಒಂದೇ ರೀತಿಯಲ್ಲಿ ಸುದ್ದಿ ವಾಚನ ಮಾಡುತ್ತದೆ. ಈಗಿನ್ನೂ ತಂತ್ರಜ್ಞಾನ ಅಭಿವೃದ್ಧಿ ಆಗುತ್ತಿದೆ. ಇನ್ನೂ ಸಾಕಷ್ಟು ಅಭಿವೃದ್ಧಿ ಆಗಬೇಕಿದೆ.

English summary
China’s Xinhua news agency on Thursday unveiled the world’s first AI anchor that can read news in English and Chinese.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X