ಚೀನಾ ನೆಲದಲ್ಲಿ ಮಿಲಿಟರಿ ಪರೇಡ್, ಭಾರತ ವಿರೋಧಿ ಅಮೆರಿಕಗೆ ಹೊಸ ಸಂದೇಶ?
ಭಾರತ ಸೇರಿ ಚೀನಾ, ರಷ್ಯಾ, ಬ್ರೆಜಿಲ್... ಹೀಗೆ ಜಗತ್ತಿನ ಹಲವು ದೇಶಗಳ ಜೊತೆಗೆ ದ್ವೇಷ ಕಟ್ಟಿಕೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮದೇ ದೇಶಕ್ಕೆ ಅಪಾಯ ಮಾಡುತ್ತಿದ್ದಾರೆ. ಅದರಲ್ಲೂ ಭಾರತ ಎಂಬ ದೈತ್ಯ & ಬಲಶಾಲಿ ದೇಶವನ್ನು ಎದುರು ಹಾಕಿಕೊಂಡ ಕಾರಣಕ್ಕೆ ಇದೀಗ ಅಮೆರಿಕ ಹಲವು ರೀತಿ ಸಮಸ್ಯೆ ಸುಳಿಗೆ ಸಿಲುಕಿದೆ. ಇಂತಹ ಸಮಯದಲ್ಲೇ ಅಮೆರಿಕದ ಬದ್ಧ ಶತ್ರು ಚೀನಾ ತನ್ನ ಸೇನಾ ಸಾಮರ್ಥ್ಯ ಪ್ರದರ್ಶನ ಮಾಡಿದೆ. ಚೀನಾ ರಾಜಧಾನಿಯಲ್ಲಿ ನಡೆದ ಮಿಲಿಟರಿ ಪರೇಡ್ ಸಂಚಲನ ಸೃಷ್ಟಿ ಮಾಡಿದೆ.
ಅಂದಹಾಗೆ ಚೀನಾ ಬಲಿಷ್ಠವಾದ ಸೇನೆ ಹೊಂದಿರುವ ದೇಶವಾಗಿದ್ದು, ಜಗತ್ತಿನ ದೊಡ್ಡಣ್ಣ ಅಂತಾ ಬಿರುದು ಪಡೆದಿರುವ ಅಮೆರಿಕ ರೀತಿಯ ದೊಡ್ಡ ದೊಡ್ಡ ದೇಶಗಳನ್ನು ಎದರಿಸುವ ಸಾಮರ್ಥ್ಯ ಹೊಂದಿದೆ. ಹೀಗೆ ತನ್ನ ಶಕ್ತಿ & ಸಾಮರ್ಥ್ಯದ ಮೂಲಕವೇ ತೊಡೆತಟ್ಟಿ ನಿಂತಿರುವ ಚೀನಾ ಇದೀಗ ಮಿಲಿಟರಿ ಪರೇಡ್ ಕೂಡ ಮಾಡಿದೆ. ಆಧುನಿಕ ಬಾಂಬರ್ ಜೆಟ್, ಮಿಸೈಲ್, ಗನ್... ಹೀಗೆ ತನ್ನ ಬಳಿ ಇರುವ ಆಧುನಿಕ ಹತ್ಯಾರ ಹೊರಗೆ ತೆಗೆದು ಎಚ್ಚರಿಕೆ ಸಂದೇಶ ಕೂಡ ರವಾನೆ ಮಾಡಿದೆ. ಅದರಲ್ಲೂ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ & ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಕೂಡ ಚೀನಾ ಸೇನಾ ಪರೇಡ್ ವೇಳೆ ಹಾಜರ್ ಇದ್ದಿದ್ದು ಮತ್ತಷ್ಟು ತಲ್ಲಣ ಸೃಷ್ಟಿ ಮಾಡಿದೆ ಅಮೆರಿಕದ ಎದೆಯಲ್ಲಿ.

ಡೊನಾಲ್ಡ್ ಟ್ರಂಪ್ ಸುಮ್ಮನೆ ಇರೋದಿಲ್ವಾ?
ಹೌದು, ಇದೀಗ ಡೊನಾಲ್ಡ್ ಟ್ರಂಪ್ ವಿರುದ್ಧ ಸ್ವತಃ ಅಮೆರಿಕದ ನೆಲದಲ್ಲೇ ಆಕ್ರೋಶದ ಕಹಳೆ ಮೊಳಗಿ ತಲ್ಲಣ ಎದ್ದಿದೆ. ಡೊನಾಲ್ಡ್ ಟ್ರಂಪ್ ಮಾಡಿಕೊಳ್ಳುತ್ತಿರುವ ಎಡವಟ್ಟುಗಳು ಹೇಗೆ ಅಮೆರಿಕದ ಭವಿಷ್ಯ & ಆರ್ಥಿಕತೆಗೆ ದೊಡ್ಡ ಪೆಟ್ಟ ನೀಡುತ್ತಿದೆ? ಅಂತಾ ಕೂಡ ಅಲ್ಲಿನ ಪ್ರಜೆಗಳು ಚರ್ಚೆ ಮಾಡುತ್ತಿದ್ದಾರೆ. ಎಲ್ಲಾ ಚರ್ಚೆಗಳ ನಡುವೆ ಇದೀಗ ಡೊನಾಲ್ಡ್ ಟ್ರಂಪ್ ತಮ್ಮ ತಪ್ಪು ಸರಿ ಮಾಡಿಕೊಳ್ಳುತ್ತಾರಾ? ಅನ್ನೋದನ್ನೂ ಕಾದು ನೋಡಬೇಕಿದೆ.












Click it and Unblock the Notifications