ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವಿರುದ್ಧ ಹೋರಾಟಕ್ಕೆ ಭಾರತಕ್ಕೆ ನೆರವಿನ ಹಸ್ತ ಚಾಚಲು ಮುಂದಾದ ಚೀನಾ

|
Google Oneindia Kannada News

ಬೀಜಿಂಗ್, ಏಪ್ರಿಲ್ 23: ಗಡಿ ವಿಚಾರದಲ್ಲಿ ಚೀನಾ ದಿನನಿತ್ಯ ಒಂದಲ್ಲಾ ಒಂದು ಕ್ಯಾತೆಯನ್ನು ತೆಗೆಯುತ್ತಲೇ ಇದೆ. ಇದರ ನಡುವೆ ಕೊರೊನಾ ಸೋಂಕು ನಿವಾರಣೆಗೆ ಭಾರತಕ್ಕೆ ನೆರವಿನ ಹಸ್ತ ಚಾಚಲು ಮುಂದಾಗಿದೆ.

ಸಾಂಕ್ರಾಮಿಕ ವಿರುದ್ಧದ ವೈದ್ಯಕೀಯ ಸರಬರಾಜುಗಳ ತಾತ್ಕಾಲಿಕ ಕೊರತೆಯೊಂದಿಗೆ ಭಾರತದಲ್ಲಿನ ಇತ್ತೀಚಿನ ಗಂಭೀರ ಪರಿಸ್ಥಿತಿಯನ್ನು ಚೀನಾ ಗಮನಿಸುತ್ತದೆ. ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಭಾರತಕ್ಕೆ ಅಗತ್ಯವಾದ ಬೆಂಬಲ ಮತ್ತು ಸಹಾಯವನ್ನು ಒದಗಿಸಲು ನಾವು ಸಿದ್ಧರಿದ್ದೇವೆ ಎಂದು ಅವರು ಹೇಳಿದರು.

ದೀರ್ಘಾವಧಿಯ ಸಂಬಂಧಗಳತ್ತ ಗಮನಹರಿಸಲು ಭಾರತಕ್ಕೆ ಚೀನಾ ಸೂಚನೆದೀರ್ಘಾವಧಿಯ ಸಂಬಂಧಗಳತ್ತ ಗಮನಹರಿಸಲು ಭಾರತಕ್ಕೆ ಚೀನಾ ಸೂಚನೆ

2019ರಲ್ಲಿ ಚೀನಾದಲ್ಲಿ ಮೊದಲ ಬಾರಿಗೆ ಕೊರೋನಾ ವೈರಸ್ ಕಾಣಿಸಿಕೊಂಡಾಗ ವುಹಾನ್ ಪ್ರಾಂತ್ಯಕ್ಕೆ ವೈದ್ಯಕೀಯ ಸಲಕರಣೆಗಳನ್ನು ಕಳುಹಿಸಿ ಭಾರತ ನೆರವು ನೀಡಿತ್ತು. ಇದೀಗ ಭಾರತಕ್ಕೆ ನೆರವು ನೀಡಲು ಸಿದ್ಧ ಎಂದು ಚೀನಾ ಹೇಳಿದೆ.

 China Willing To Help India In COVID-19 fight

ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಚೀನಾದ ಅಧಿಕೃತ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್ ಅವರು, ಕೋವಿಡ್-19 ಸಾಂಕ್ರಾಮಿಕ ಮಾನವಕುಲದ ಸಾಮಾನ್ಯ ಶತ್ರುವಾಗಿದ್ದು, ಅದರ ವಿರುದ್ಧ ಹೋರಾಡಲು ಅಂತಾರಾಷ್ಟ್ರೀಯ ಒಗ್ಗಟ್ಟು ಮತ್ತು ಪರಸ್ಪರ ಸಹಾಯದ ಅವಶ್ಯಕತೆಯಿದೆ ಎಂದಿದ್ದಾರೆ.

English summary
China is willing to help India as it fights a surge in coronavirus cases, the Chinese foreign ministry said on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X