ತೈವಾನ್ ಜೊತೆ ವ್ಯಾಪಾರ ಮಾಡುವಾಗ ಎಚ್ಚರ: ಚೀನಾ ವಾರ್ನಿಂಗ್!
ಬೀಜಿಂಗ್: ತೈವಾನ್ & ಅಮೆರಿಕ ದಿನದಿಂದ ದಿನಕ್ಕೆ ಹತ್ತಿರವಾಗುತ್ತಿವೆ. ಅದರಲ್ಲೂ ಅಮೆರಿಕದ ನಾಯಕರು ತೈವಾನ್‌ಗೆ ಸಹಾಯ ಮಾಡುವ ನೆಪದಲ್ಲಿ ಚೀನಾಗೆ ಕಂಟಕ ತಂದೊಡ್ಡುತ್ತಿದ್ದಾರೆ ಎಂದು ಆರೋಪಿಸಿ ಚೀನಾ ರೊಚ್ಚಿಗೆದ್ದಿದೆ. ಹೀಗಿದ್ದಾಗಲೇ ತೈವಾನ್ ನಮ್ಮ ಆತ್ಮೀಯ ವ್ಯಾಪಾರಿ ಪಾಲುದಾರ ಎಂದಿತ್ತು ಅಮೆರಿಕ, ಈಗ ಅಮೆರಿಕದ ಇಂತಹ ಹೇಳಿಕೆಗೆ ಚೀನಾ ಖಡಕ್ ವಾರ್ನ್ ಮಾಡಿದೆ.
ತೈವಾನ್ ತನ್ನದೇ ದೇಶದ ಭಾಗ ಎಂದು ಚೀನಾ ಪ್ರತಿಪಾದನೆ ಮಾಡುತ್ತಲೇ ಬಂದಿದೆ. ಅದರಲ್ಲೂ ತೈವಾನ್ ನಾಯಕರು ಅಮೆರಿಕ ಜೊತೆ ಸಂಬಂಧ ಬೆಸೆಯಲು ಹೋದರೆ ಚೀನಾ ತನ್ನ ಸೇನೆಯನ್ನೇ ನುಗ್ಗಿಸಿ ವಾರ್ನಿಂಗ್ ಕೊಡುತ್ತಿದೆ. ಈ ಹೊತ್ತಲ್ಲಿ ಅಮೆರಿಕ ಕೂಡ ಚೀನಾ ಸೇನೆಯನ್ನ ಇನ್ನಷ್ಟು ರೊಚ್ಚಿಗೆಬ್ಬಿಸಿದ ಆರೋಪ ಇದೆ. ಈ ನಡುವೆ ತೈವಾನ್ ನಮ್ಮ ಪಾಲುದಾರ ರಾಷ್ಟ್ರ ಎಂದು ಅಮೆರಿಕ ಹೇಳಿಕೆ ನೀಡಿರುವುದು ಹಾವಿನ ಬಾಲ ತುಳಿದಂತಾಗಿದೆ. ತೈವಾನ್ (Taiwan China War) ಜೊತೆ ವ್ಯಾಪಾರ ಮಾಡುವಾಗ ಎಚ್ಚರ ಎಂದಿದೆ ಚೀನಾ.

ತೈವಾನ್ & ಅಮೆರಿಕದ ಬಗ್ಗೆ ಚೀನಾ ಹೇಳಿದ್ದೇನು?
ಕಳೆದ ವಾರವಷ್ಟೇ ಅಮೆರಿಕ ಮತ್ತು ತೈವಾನ್ ಒಪ್ಪಂದ ಒಂದನ್ನ ಮಾಡಿಕೊಂಡಿದ್ದವು, ಒಪ್ಪಂದದ ಪ್ರಕಾರ ಸಾವಿರಾರು ಕೋಟಿ ವ್ಯಾಪಾರ ನಡೆಯುವುದಿತ್ತು. ಆದರೆ ಚೀನಾ ದಿಢೀರ್ ಅಲರ್ಟ್ ಆಗಿ ಅಮೆರಿಕಗೆ ವಾರ್ನ್ ಮಾಡಿದೆ. ತೈವಾನ್ ಜೊತೆ ಆರ್ಥಿಕ ಮತ್ತು ವ್ಯಾಪಾರ ಸಂಬಂಧ ಹೊಂದುವಾಗ ಎಚ್ಚರಿಕೆಯಿಂದ ಇರಿ ಎಂದಿದೆ ಚೀನಾ. ಇದು ಅಮೆರಿಕ ನಾಯಕರಿಗೆ ಎಚ್ಚರಿಕೆ ಕೊಟ್ಟಂತೆಯೂ ಇದೆ, ಮತ್ತೊಂದ್ಕಡೆ ತೈವಾನ್ ಲೀಡರ್ಸ್‌ಗು ಖಡಕ್ ಸಂದೇಶ ರವಾನಿಸಿದಂತೆಯೂ ಆಗಿದೆ.
ಯುದ್ಧ ಭೀತಿಯಲ್ಲಿ ತೈವಾನ್ ನರಳಾಟ!
ಅತ್ತ ಅಮೆರಿಕ ಸೇನೆ ತೈವಾನ್ ಪರ ನಿಂತಿದೆ. ಇತ್ತ ಚೀನಾ ಅದೇ ವಿಚಾರ ಹಿಡಿದು ತೈವಾನ್ ನಾಯಕರಿಗೆ ಎಚ್ಚರಿಕೆ ನೀಡುತ್ತಿದೆ. ಬೀಜಿಂಗ್ (Beijing) ಪದೇ ಪದೆ ತೈವಾನ್‌ಗೆ ಎಚ್ಚರಿಕೆ ನೀಡುತ್ತಲೇ ಬಂದಿದೆ. ಇದೇ ಸಂದರ್ಭದಲ್ಲಿ ತೈವಾನ್‌ಗೆ ಅಮೆರಿಕ 4 ಸಾವಿರ ಕೋಟಿ ರೂಪಾಯಿ ಮೌಲ್ಯದ ಶಸ್ತ್ರಾಸ್ತ್ರ ಪೂರೈಕೆಗೆ ಮುಂದಾಗಿದೆ ಎಂಬ ಮಾತು ಓಡಾಡ್ತಿದೆ. ಆದರೆ 3-4 ದಿನದ ಹಿಂದಷ್ಟೇ ತೈವಾನ್ ಅಧ್ಯಕ್ಷೆ ನಮಗೆ ಯುದ್ಧ ಬೇಡ ಶಾಂತಿ ಸಾಕು ಎಂದಿದ್ದರು. ತೈವಾನ್ ಅಧ್ಯಕ್ಷೆ ಈ ಹೇಳಿಕೆ ನೀಡಿದ 4 ದಿನದಲ್ಲಿ ಚೀನಾ ಎಚ್ಚರಿಕೆಯ ಸಂದೇಶ ರವಾನಿಸಿದೆ.

ಸಮಸ್ಯೆಯ ಮೂಲಕ ಅಮೆರಿಕ?
ತೈವಾನ್ ವಿರುದ್ಧ ಚೀನಾ ಯುದ್ಧ ಸಾರುವ ಸ್ಥಿತಿ ನಿರ್ಮಿಸಿದ್ದ ಅಮೆರಿಕ ಈಗಲೂ ಕಿತಾಪತಿ ಮಾಡುತ್ತಿದೆ. ಚೀನಾ ಕೆರಳಿಸುವ ಕೆಲಸ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಕೆಲ ದಿನಗಳ ಹಿಂದಷ್ಟೇ ತೈವಾನ್ ಜಲಸಂಧಿ ಮೂಲಕ ಸೇನಾ ಹಡಗನ್ನ ಪ್ರಯಾಣಿಸಿಕೊಂಡು ಹೋಗಿತ್ತು ಅಮೆರಿಕ. ಬಳಿಕ ಚೀನಾ ತನ್ನ ಶಕ್ತಿ ಏನು ಅಂತಾ ಶತ್ರು ರಾಷ್ಟ್ರ ತೈವಾನ್‌ಗೆ ತೋರಿಸುತ್ತಲೇ ಇದೆ. ತೈವಾನ್ ವಿರುದ್ಧ ನೇರವಾಗಿ ತೊಡೆತಟ್ಟಿ, ರಣವೀಳ್ಯ ನೀಡಿದೆ ಚೀನಾ. ಹೀಗಾಗಿ ತೈವಾನ್ ಮತ್ತು ಚೀನಾ ಗಡಿಯಲ್ಲಿ ಯಾರೂ ಊಹಿಸದ ಸ್ಥಿತಿ ನಿರ್ಮಾಣವಾಗಿದೆ.
ಅಮೆರಿಕದ ಸಹವಾಸದಿಂದ ಕಂಟಕ?
ಅಷ್ಟಕ್ಕೂ ತೈವಾನ್ ನಾಯಕರು ಅಮೆರಿಕದ ಸಹವಾಸ ಮಾಡಿ ಪರದಾಡುತ್ತಿದ್ದಾರೆ. ಯಾಕಂದ್ರೆ ಅಮೆರಿಕ ಬೃಹತ್ ಮೊತ್ತದ ಸಹಾಯ ಮಾಡಲು ಮುಂದೆ ಬಂದಿದ್ದು ತೈವಾನ್ ಸೇನೆಗೆ ಚೀನಾ ವಿರುದ್ಧ ಹೋರಾಡಲು ಶಸ್ತ್ರಾಸ್ತ್ರವನ್ನ ಪೂರೈಕೆ ಮಾಡುತ್ತಿದೆ. ಇದು ಚೀನಾ ಸೇನೆ ಕೆರಳಿಸಿದ್ದು, ತೈವಾನ್ ಸರ್ಕಾರವನ್ನ ಹೊಸಕಿ ಹಾಕುವ ಎಚ್ಚರಿಕೆ ನೀಡಿತ್ತು. ಈ ರೀತಿ ಚೀನಾ ಉಗ್ರವಾದ ಹೇಳಿಕೆ ನೀಡಿ ಕೆಲವೇ ದಿನದಲ್ಲಿ ತೈವಾನ್ ಶಾಂತಿ ಮಂತ್ರ ಜಪಿಸುವ ಮೂಲಕ ಇಡೀ ಜಗತ್ತಿನ ಗಮನ ಸೆಳೆದಿದೆ.

3ನೇ ಮಹಾಯುದ್ಧದ ಆತಂಕ ಏಕೆ?
ಚೀನಾ ರೊಚ್ಚಿಗೆದ್ದಿದೆ ಅಮೆರಿಕ ವಿರುದ್ಧದ ಸಿಟ್ಟಲ್ಲಿ ಏನೇನೋ ಮಾಡಲು ಹೋಗುತ್ತಿದೆ. ಭೀಕರ ಸಮರಕ್ಕೆ ಚೀನಾ ಸೇನೆ ಸಿದ್ಧತೆ ನಡೆಸಿದೆ. ಇದರ ಮೊದಲ ಭಾಗವಾಗಿ ತೈವಾನ್ (Taiwan) ಗಡಿ ಆಕ್ರಮಿಸಿಕೊಳ್ತಿದೆ. ದ್ವೀಪರಾಷ್ಟ್ರದ ಸುತ್ತಲೂ ನೌಕಾಪಡೆಯ ಯುದ್ಧನೌಕೆ ಹಾಗೂ ಯುದ್ಧ ವಿಮಾನಗಳನ್ನ ರವಾನಿಸಿರುವ ಚೀನಾ, ಮತ್ತಷ್ಟು ಭೀಕರ ಅಸ್ತ್ರಗಳನ್ನ ತೈವಾನ್ ಗಡಿಗೆ ಸಾಗಿಸುತ್ತಿದೆ. ಇದೇ ಹೊತ್ತಲ್ಲಿ ತೈವಾನ್‌ಗೆ ಅಮೆರಿಕ ಬೆಂಬಲ ನೀಡಿ, ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿದೆ. ಇದು 3ನೇ ಮಹಾಯುದ್ಧದ ಆತಂಕ ಮೂಡುವಂತೆ ಮಾಡಿದೆ.












Click it and Unblock the Notifications