ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದೇಶಗಳಿಗೆ ಚೀನಾದಿಂದ 10 ಮಿಲಿಯನ್ ಕೊರೊನಾ ಲಸಿಕೆ ರಫ್ತು

|
Google Oneindia Kannada News

ಬೀಜಿಂಗ್,ಫೆಬ್ರವರಿ 03: ಚೀನಾವು ಬೇರೆ ದೇಶಗಳಿಗೆ 10 ಮಿಲಿಯನ್ ಕೊರೊನಾ ಲಸಿಕೆಯನ್ನು ಕಳುಹಿಸುವುದಾಗಿ ತಿಳಿಸಿದೆ.

ಸಾಂಕ್ರಾಮಿಕ ವಿರುದ್ಧ ಅಂತಾರಾಷ್ಟ್ರೀಯ ಸಹಕಾರವನ್ನು ಉತ್ತೇಜಿಸುವುದಕ್ಕಾಗಿ ಹಾಗೂ ಲಸಿಕೆಗಳ ಸಮಾನ ವಿತರಣೆಗಳನ್ನು ಖಾತ್ರಿಪಡಿಸಿಕೊಳ್ಳುವುದಕ್ಕೆ ಚೀನಾ ಕೈಗೊಂಡಿರುವ ನಿರ್ಧಾರ ಇದಾಗಿದೆ ಎಂದು ವಾಂಗ್ ವೆನ್ ಬಿನ್ ಹೇಳಿದ್ದಾರೆ.

ಕೊರೊನಾ ಭೀತಿ ಮತ್ತೆ ಗಡಿ ಬಂದ್ ಮಾಡಿದ ಸೌದಿ ಅರೇಬಿಯಾಕೊರೊನಾ ಭೀತಿ ಮತ್ತೆ ಗಡಿ ಬಂದ್ ಮಾಡಿದ ಸೌದಿ ಅರೇಬಿಯಾ

ಜಾಗತಿಕ ಕೋವ್ಯಾಕ್ಸ್ ಉಪಕ್ರಮದ ಭಾಗವಾಗಿ ಚೀನಾ ಈ ನಿರ್ಧಾರವನ್ನು ಘೋಷಿಸಿದೆ. ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ ಬಿನ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮಾರ್ಚ್ ವೇಳೆಗೆ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಎದುರಾಗುವ ಕೊರತೆಯನ್ನು ನಿವಾರಿಸಲು ವಿಶ್ವ ಆರೋಗ್ಯ ಸಂಸ್ಥೆಯ ಮನವಿಗೆ ಚೀನಾ ಸ್ಪಂದಿಸುತ್ತಿದೆ ಎಂದು ಹೇಳಿದ್ದಾರೆ.

 China To Send 10 Million Coronavirus Vaccine Doses Abroad

ವುಹಾನ್ ನಲ್ಲಿ ಕೊರೋನಾ ಪ್ರಕರಣಗಳು ವರದಿಯಾದಾಗ ಚೀನಾ ಆ ಬಗ್ಗೆ ಜಾಗತಿಕ ಸಮುದಾಯಕ್ಕೆ ಸರಿಯಾದ ಮಾಹಿತಿ ನೀಡಲಿಲ್ಲ ಎಂಬ ಆರೋಪವೂ ಇದೆ. ವುಹಾನ್ ನ ಪ್ರಯೋಗಾಲಯದಲ್ಲಿ ಕೊರೋನಾ ವೈರಸ್ ನ್ನು ಸೃಷ್ಟಿ ಮಾಡಲಾಗಿತ್ತೇ? ಎಂಬ ಬಗ್ಗೆ ತನಿಖೆ ನಡೆಸಲು ಇತ್ತೀಚೆಗಷ್ಟೇ ಡಬ್ಲ್ಯುಹೆಚ್ ಒ ತಂಡ ಚೀನಾಗೆ ಭೇಟಿ ನೀಡಿತ್ತು.

ಕೊರೊನಾ ವೈರಸ್ ನ್ನು ಸೃಷ್ಟಿಸಿದ್ದು ಚೀನಾ ಎಂಬ ಆರೋಪ ಆಸ್ಟ್ರೇಲಿಯಾ, ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳಿಂದ ಕೇಳಿಬಂದಿದ್ದು, ಚೀನಾದ ವಿರುದ್ಧ ಅಸಮಾಧಾನ ಹೊರ ಹಾಕಿದ್ದವು. ಇದೇ ಕಾರಣದಿಂದಾಗಿ ಕೊರೊನೋತ್ತರ ಜಗತ್ತಿನಲ್ಲಿ ಚೀನಾದ ಬಗ್ಗೆ ಇದ್ದ ನಂಬಿಕೆಯೂ ಕುಸಿದಿತ್ತು.

English summary
China on Wednesday announced a plan to provide 10 million coronavirus vaccine doses to developing nations through the global COVAX initiative.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X