ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ಯುದ್ಧದಲ್ಲಿ ಸಮಯ ವ್ಯರ್ಥ ಮಾಡಬೇಡಿ ಅಮೆರಿಕಕ್ಕೆ ಚೀನಾ ಎಚ್ಚರಿಕೆ

|
Google Oneindia Kannada News

ಬೀಜಿಂಗ್, ಮೇ 25: ಕೊರೊನಾ ವಿಚಾರವಾಗಿ ಸುಳ್ಳು ಹೇಳುತ್ತಾ ಚೀನಾದ ಮೇಲೆ ಆಕ್ರಮಣ ಮಾಡುವುದನ್ನು ಅಮೆರಿಕ ನಿಲ್ಲಿಸಬೇಕು. ಬದಲಾಗಿ ಲಸಿಕೆ ಕಂಡುಹಿಡಿಯಲು ಚೀನಾದ ಜೊತೆ ಕೈ ಜೋಡಿಸಿ ಎಂದು ಚೀನಾ ಸಚಿವ ವಾಂಗ್ ಯಿ ಹೇಳಿದ್ದಾರೆ.

ಚೀನಾ ಮತ್ತು ಅಮೆರಿಕ ದೇಶಗಳು ತಮ್ಮ ಶಾಂತಿಯುತ ಸಹಬಾಳ್ವೆಗೆ ಮಾರ್ಗಗಳನ್ನು ಕಂಡುಕೊಳ್ಳಬೇಕು ಮತ್ತು ವಿಭಿನ್ನ ರಾಜಕೀಯ ವ್ಯವಸ್ಥೆಗಳು ಮತ್ತು ಸಂಸ್ಕೃತಿಗಳ ನಡುವೆಯೂ ಈ ಸಹಬಾಳ್ವೆ ಸಾಧ್ಯ ಎಂಬುದನ್ನು ಸಾಬೀತುಪಡಿಸಬೇಕು ಎಂದು ಚೀನಾ ವಿದೇಶಿ ಸಚಿವರಾದ ವಾಂಗ್ ಯಿ ಹೇಳಿದ್ದಾರೆ.

ಅಮೆರಿಕಾ ವಿರುದ್ಧ 'ಪೊಲಿಟಿಕಲ್ ವೈರಸ್' ಹರಿಬಿಟ್ಟಿತಾ ಚೀನಾ? ಅಮೆರಿಕಾ ವಿರುದ್ಧ 'ಪೊಲಿಟಿಕಲ್ ವೈರಸ್' ಹರಿಬಿಟ್ಟಿತಾ ಚೀನಾ?

ಅಮೆರಿಕವನ್ನು ಬದಲಿಸುವ ಇಲ್ಲವೇ ಪರಿವರ್ತಿಸುವ ಯಾವುದೇ ಉದ್ದೇಶಗಳು ಚೀನಾಕ್ಕಿಲ್ಲ. ಅಮೆರಿಕ ಚೀನಾವನ್ನು ಬದಲಿಸುವ ಪ್ರಯತ್ನವನ್ನು ನಿಲ್ಲಿಸಬೇಕು ಎಂದರು. ಒಂದು ಬೃಹತ್ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿ ಚೀನಾ ಮತ್ತು ಬೃಹತ್ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಅಮೆರಿಕಕ್ಕೆ ಜಾಗತಿಕ ಶಾಂತಿ ಮತ್ತು ಅಭಿವೃದ್ಧಿಯಲ್ಲಿ ಮಹತ್ವದ ಹೊಣೆಗಾರಿಕೆಯಿದೆ ಎಂದರು.

ಹೊಸ ಶೀತಲ ಸಮರ

ಹೊಸ ಶೀತಲ ಸಮರ

ಚೀನಾ ಜೊತೆಗಿನ ಸಂಬಂಧವನ್ನು ಅಮೆರಿಕವು ಹೊಸ ಶೀತಲ ಸಮರದತ್ತ ತಳ್ಳುತ್ತಿದೆ. ಕೊರೊನಾವೈರಸ್ ನಡುವೆಯೇ ಚೀನಾದ ಮೇಲೆ ರಾಜಕೀಯ ವೈರಸ್ ದಾಳಿ ಆರಂಭವಾಗಿದೆ ಎಂದು ವಾಂಗ್ ಯಿ ಹೇಳಿದ್ದಾರೆ.

ಚೀನಾ ಇಕ್ಕಟ್ಟಿಗೆ ಸಿಲುಕಿದೆ

ಚೀನಾ ಇಕ್ಕಟ್ಟಿಗೆ ಸಿಲುಕಿದೆ

ಕೊರೊನಾ ಬಿಕ್ಕಟ್ಟಿನ ವಿಷಯದಲ್ಲಿ ಚೀನಾ ವಿರುದ್ಧ ರೂಪುಗೊಳ್ಳುತ್ತಿರುವ ಅಂತಾರಾಷ್ಟ್ರೀಯ ಅಭಿಪ್ರಾಯಗಳು, ಹಾಂಗ್‌ಕಾಂಗ್‌ನ್ನು ನಿಯಂತ್ರಿಸಲು ಚೀನಾ ಹೊಸ ಕಾಯ್ದೆ ಜಾರಿಗೆ ತರುತ್ತಿರುವುದು, ವಾಣಿಜ್ಯ ಸಮರ ಇತ್ಯಾದಿ ವಿಷಯಗಳಲ್ಲಿ ಇತ್ತೀಚೆಗೆ ಚೀನಾ ಇಕ್ಕಟ್ಟಿಗೆ ಸಿಲುಕಿದೆ.

ಚೀನಾದ ವಿರುದ್ಧ ಅಮೆರಿಕ ಆಕ್ರೋಶ

ಚೀನಾದ ವಿರುದ್ಧ ಅಮೆರಿಕ ಆಕ್ರೋಶ

ಅಮೆರಿಕವಂತೂ ಚೀನಾ ವಿರುದ್ಧ ಪದೇ ಪದೇ ಆಕ್ರೋಶ ವ್ಯಕ್ತಪಡಿಸುತ್ತಿದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಖಾರ ಪ್ರತಿಕ್ರಿಯೆ ನೀಡಿರುವ ಚೀನಾ ಸರ್ಕಾರ , ಅಮೆರಿಕದಲ್ಲಿನ ಕೆಲ ರಾಜಕೀಯ ಶಕ್ತಿಗಳು ನಮ್ಮನ್ನು ಶೀತಲ ಸಮರದತ್ತ ನೂಕುತ್ತಿವೆ ಎಂದು ಹೇಳಿದೆ.

ಚೀನಾದ ವಿರುದ್ಧ ಅಮೆರಿಕ ಅಪಪ್ರಚಾರ

ಚೀನಾದ ವಿರುದ್ಧ ಅಮೆರಿಕ ಅಪಪ್ರಚಾರ

ಚೀನಾದ ಮೇಲೆ ದಾಳಿ ನಡೆಸಲು ಹಾಗೂ ಚೀನಾ ವಿರುದ್ಧ ಅಪಪ್ರಚಾರ ನಡೆಸಲು ವಾಷಿಂಗ್ಟನ್ ನಿಂದ ಪದೇ ಪದೇ ಪ್ರಯತ್ನ ನಡೆಯುತ್ತಿದೆ. ಕೊರೊನಾವೈರಸ್‌ನಿಂದ ಆಗಿರುವ ಹಾನಿಯ ಜೊತೆಗೆ ಅಮೆರಿಕ ಈಗ ರಾಜಕೀಯ ವೈರಸ್ಸನ್ನು ಹರಡುತ್ತಿದೆ. ಚೀನಾಕ್ಕೆ ಕೆಟ್ಟ ಹೆಸರು ತರಲು ಹಾಗೂ ಚೀನಾವನ್ನು ಇಕ್ಕಟ್ಟಿಗೆ ಸಿಲುಕಿಸುವ ಲಭಿಸುವ ಯಾವುದೇ ಅವಕಾಶವನ್ನು ಅಮೆರಿಕ ವ್ಯರ್ಥ ಮಾಡುತ್ತಿಲ್ಲ. ಚೀನಾ ವಿರುದ್ಧ ಕೆಲ ರಾಜಕಾರಣಿಗಳು ಕಟ್ಟುಕತೆ ಹಾಗೂ ಸುಳ್ಳುಗಳನ್ನು ಹರಡುತ್ತಿದ್ದಾರೆ. ಚೀನಾ ವಿರುದ್ಧ ಸಾಕಷ್ಟು ಷಡ್ಯಂತ್ರಗಳನ್ನು ರೂಪಿಸಿದ್ದಾರೆ ಎಂದು ಹೇಳಿದ್ದಾರೆ.

English summary
The United States should stop wasting time in its fight against the coronavirus and work with China to combat it, rather than spreading lies and attacking the country, the Chinese government’s top diplomat Wang Yi said on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X