ಭಾರತ ವಿರೋಧಿ ಮಾಲ್ಡೀವ್ಸ್ ಬೆನ್ನಿಗೆ ನಿಂತ ಚೀನಾ!
ಮಾಲ್ಡೀವ್ಸ್ ವಿಚಾರವಾಗಿ ಚೀನಾ & ಭಾರತದ ನಡುವೆ ಮುಸುಕಿನ ಗುದ್ದಾಟ ಮುಂದುವರಿದ ಈ ಸಂದರ್ಭದಲ್ಲೇ, ಚೀನಾ ಕೂಡ ಮಹತ್ವದ ಹೇಳಿಕೆ ನೀಡಿದೆ. ಮಾಲ್ದೀವ್ಸ್ ಸಾರ್ವಭೌಮತ್ವ ರಕ್ಷಿಸಿಕೊಳ್ಳಲು ಬೆಂಬಲ ನೀಡುತ್ತೇವೆ ಅಂತಾ ಇದೀಗ ಮತ್ತೊಮ್ಮೆ ಚೀನಾ ಹೇಳಿದೆ. ಹೀಗಾಗಿ ಭಾರತ & ಮಾಲ್ಡೀವ್ಸ್ ನಡುವೆ ಏರ್ಪಟ್ಟಿರುವ ಮಾತಿನ ಯುದ್ಧ ಮತ್ತಷ್ಟು ಕುತೂಹಲವನ್ನು ಕೂಡ ಕೆರಳಿಸುತ್ತಿದೆ.
ಮಾಲ್ದೀವ್ಸ್‌ನಿಂದ ಭಾರತೀಯ ಸೇನಾ ಸಿಬ್ಬಂದಿಯ ಮೊದಲನೇ ತಂಡದ ವಾಪಸಾತಿಯ ಕುರಿತು ಚೀನಾ ಈ ರೀತಿಯ ಉತ್ತರವನ್ನು ನೀಡಿದೆ. ಮಾಧ್ಯಮಗಳಿಗೆ ಈ ಬಗ್ಗೆ ಉತ್ತರ ನೀಡಿರುವ, ಚೀನಾದ ವಿದೇಶಾಂಗ ಸಚಿವಾಲಯ ವಕ್ತಾರ ವಾಂಗ್ ವೆನ್‌ಬಿನ್, ಈ ಕುರಿತು ಪಕ್ಕಾ ಮಾಹಿತಿ ನಮಗೆ ತಿಳಿದಿಲ್ಲ ಅಂತಾ ಹೇಳಿದ್ದಾರೆ. ಆದರೆ ಮಾಲ್ದೀವ್ಸ್‌ಗೆ ತನ್ನ ಸಾರ್ವಭೌಮತ್ವ ರಕ್ಷಣೆಗೆ ಚೀನಾ ಬೆಂಬಲ ನೀಡಲಿದೆ ಎಂದಿದ್ದಾರೆ. ಈ ಮೂಲಕ ಭಾರತ ಮತ್ತು ಮಾಲ್ಡೀವ್ಸ್ ನಡುವೆ ತಿಕ್ಕಾಟ ನಡೆಯುವ ಸಮಯದಲ್ಲೇ ಚೀನಾದ ಈ ಹೇಳಿಕೆ ಭಾರಿ ಮಹತ್ವ ಪಡೆದುಕೊಂಡಿದೆ.

ಚೀನಾಗೆ ಮಾಲ್ಡೀವ್ಸ್ ಅಧ್ಯಕ್ಷನ ಬೆಂಬಲ
ಮಾಲ್ಡೀವ್ಸ್ ಪ್ರವಾಸಿಗರ ಪಾಲಿನ ಸ್ವರ್ಗ, ಹಿಂದೆ ಅಧಿಕಾರದಲ್ಲಿ ಇದ್ದ ಮಾಲ್ಡೀವ್ಸ್ ಅಧ್ಯಕ್ಷ ಭಾರತದ ಪರ ನಿಲುವನ್ನು ಹೊಂದಿದ್ದರು. ಆದರೆ ಕೆಲವು ತಿಂಗಳ ಹಿಂದೆ ಮಾಲ್ಡೀವ್ಸ್‌ನಲ್ಲಿ ಅಧಿಕಾರಕ್ಕೆ ಬಂದಿರುವ ಮೊಹಮ್ಮದ್ ಮುಯಿಝ, ಭಾರತದ ವಿರೋಧಿ ಎಂಬುದನ್ನ ಈಗ ಜಗತ್ತಿಗೆ ಸಾರುವಂತೆ ಹೇಳುತ್ತಿದ್ದಾರೆ. ಅದರಲ್ಲೂ ಮುಯಿಝು ಸರ್ಕಾರವು ಚೀನಾಗೆ ಸೇರಿದ ಅತ್ಯಾಧುನಿಕ 'ಸಂಶೋಧನಾ ಹಡಗು' ಒಂದನ್ನ ಮಾಲೆಯಲ್ಲಿ ಉಳಿಸಿಕೊಂಡಿದೆ. ಕಳೆದ ವಾರ ಮಾಲ್ದೀವ್ಸ್ ರಾಷ್ಟ್ರೀಯ ರಕ್ಷಣಾ ಪಡೆ ಚೀನಾ ಸೇನೆಯ ಜೊತೆಗೆ ಒಪ್ಪಂದಕ್ಕೂ ಸಹಿ ಹಾಕಿತ್ತು.
ಭಾರತದ ಪ್ರವಾಸಿಗರಿಂದ ಗುನ್ನಾ!
ಒಂದ್ಕಡೆ ಮಾಲ್ಡೀವ್ಸ್ ಭಾರತದ ಜೊತೆ ನಡೆದುಕೊಳ್ಳುತ್ತಿರುವ ರೀತಿಗೆ ಭಾರತದ ಪ್ರವಾಸಿಗರು ಸರಿಯಾಗಿ ಉತ್ತರ ನೀಡುತ್ತಿದ್ದಾರೆ. ಮಾಲ್ಡೀವ್ಸ್‌ನಲ್ಲಿ ಇದೀಗ ಪ್ರವಾಸಿಗರ ಸಂಖ್ಯೆ ಕುಸಿದಿದೆ. ಈಗಿನ ಪರಿಸ್ಥಿತಿ ನೋಡುತ್ತಿದ್ರೆ ಜೀವನ ನಡೆಸಲು ಕೂಡ ಮಾಲ್ಡೀವ್ಸ್ ಜನರಿಗೆ ಈಗ ಕಷ್ಟವಾಗಿದೆ. ಹೀಗಾಗಿ ಭಾರತದ ಪ್ರವಾಸಿಗರು ಕಡಿಮೆ ಆಗುತ್ತಿರುವ ಕಾರಣಕ್ಕೆ, ಚೀನಾಗೆ ಮನವಿ ಮಾಡುತ್ತಿದೆ ಮಾಲ್ಡೀವ್ಸ್. ನಿಮ್ಮ ದೇಶದಿಂದ ಪ್ರವಾಸಿಗರನ್ನ ಕಳುಹಿಸಿಕೊಡಿ ಅಂತಾ ಚೀನಾ ಕಾಲು ಹಿಡಿದಿದೆ ಮಾಲ್ಡೀವ್ಸ್. ಪರಿಸ್ಥಿತಿ ಹೀಗಿದ್ರೂ ಭಾರತದ ಜೊತೆ ಚರ್ಚೆ ನಡೆಸಿ, ಪರಿಸ್ಥಿತಿ ಸರಿ ಮಾಡಿಕೊಳ್ಳಲು ಮಾಲ್ಡೀವ್ಸ್ ಮುಂದಾಗುತ್ತಿಲ್ಲ.

ಬುದ್ಧಿ ಬರುತ್ತಾ? ಬುದ್ಧಿ ಬರಲ್ವಾ?
ಒಟ್ನಲ್ಲಿ ಭಾರತ ವಿರೋಧಿ ಎಂಬ ಹಣೆಪಟ್ಟಿ ಕಟ್ಟಿಕೊಂಡ ಈ ಮಾಲ್ಡೀವ್ಸ್ ಎಂಬ ಬುದ್ಧಿ ಇಲ್ಲದೆ ದೇಶಕ್ಕೆ, ಸಾಲು ಸಾಲು ಸಂಕಷ್ಟಗಳು ಎದುರಾಗುತ್ತಿವೆ. ಇಷ್ಟಾದರೂ ಅಲ್ಲಿನ ಹೊಸ ಅಧ್ಯಕ್ಷನಿಗೆ ತಲೆಯಲ್ಲಿ ಮಣ್ಣು ತುಂಬಿದೆ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಈ ತಿಕ್ಕಾಟ ಹಿಂಗೆ ಮುಂದುವರಿದರೆ, ಪರಿಸ್ಥಿತಿ ಕೈಮೀರಿ & ಎರಡೂ ದೇಶಗಳ ನಡುವಿನ ಸ್ನೇಹ ಸಂಬಂಧ ಮತ್ತಷ್ಟು ಹಾಳಾಗುವ ಆತಂಕ ಕೂಡ ಇದೆ. ಹೀಗೆ ಸ್ವತಃ ಮಾಲ್ಡೀವ್ಸ್ ಜನರಿಗು ತಮ್ಮ ಸರ್ಕಾರದ ವರ್ತನೆ ಬಗ್ಗೆ ಸಾಕಷ್ಟು ಸಿಟ್ಟು ಬಂದಿದೆ. ಇಷ್ಟೆಲ್ಲಾ ನಡೆದರೂ ಮಾಲ್ಡೀವ್ಸ್ ಅಧ್ಯಕ್ಷ ಮಾತ್ರ ತನ್ನ ಚೀನಾ ಪರ ನಿಲುವನ್ನ ಮುಂದುವರಿಸಿ ಭಾರತದ ಜೊತೆ ಸಂಬಂಧವನ್ನ ಮತ್ತಷ್ಟು ಹಾಳು ಮಾಡಿಕೊಳ್ಳುತ್ತಿದ್ದಾನೆ.












Click it and Unblock the Notifications