ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದ ಕೊರೊನಾ ಲಸಿಕೆ ಈ ವರ್ಷಾಂತ್ಯದಲ್ಲಿ ಲಭ್ಯ: ಸಿನೋಫಾರ್ಮ್

|
Google Oneindia Kannada News

ಚೀನಾದ ಕೊವಿಡ್ 19 ಲಸಿಕೆ ವರ್ಷಾಂತ್ಯಕ್ಕೆ ಲಭ್ಯವಾಗಲಿದೆ ಎಂದು ಚೀನಾದ ಔಷಧೀಯ ಕಂಪನಿ ಸಿನೋಫಾರ್ಮ್ ತಿಳಿಸಿದೆ. ಸಿನೋಫಾರ್ಮ್ ಮುಖ್ಯಸ್ಥ ಲಿಯು ಜಿಂಗ್‌ಸೆನ್ ಈ ಕುರಿತು ಮಾಹಿತಿ ನೀಡಿದ್ದಾರೆ. ಒಂದು ಲಸಿಕೆಗೆ 1 ಸಾವಿರ ಯುವಾನ್‌ ಅಷ್ಟು ವೆಚ್ಚ ತಗುಲಲಿದೆ, ಎರಡು ಶಾಟ್ಸ್ ನೀಡಲಾಗುತ್ತದೆ. 28 ದಿನಗಳಲ್ಲಿ ಎರಡು ಡೋಸ್ ನೀಡಲಾಗುತ್ತೆ.

Recommended Video

Israel ಒಪ್ಪಂದದ ಬಗ್ಗೆ UAE ಮೇಲೆ ದಾಳಿ ಮಾಡುವುದಾಗಿ Iran ಬೆದರಿಕೆ ಹಾಕಿದೆ | Oneindia Kannada

ಪ್ರಮುಖನಗರಗಳಲ್ಲಿರುವ ಮಕ್ಕಳು ಹಾಗೂ ನೌಕರರು ಲಸಿಕೆ ಪಡೆಯುತ್ತಾರೆ, ಆದರೆ ಹಳ್ಳಿ ಪ್ರದೇಶಗಳಿಗೆ ತಲುಪುವುದು ಕಷ್ಟ ಎಂದಿದ್ದಾರೆ.

ಚೀನಾದ ಸಿನೋಫಾರ್ಮ್ ಅಭಿವೃದ್ಧಿಪಡಿಸಿರುವ ಕೊವಿಡ್ ಲಸಿಕೆ ಸುರಕ್ಷಿತಚೀನಾದ ಸಿನೋಫಾರ್ಮ್ ಅಭಿವೃದ್ಧಿಪಡಿಸಿರುವ ಕೊವಿಡ್ ಲಸಿಕೆ ಸುರಕ್ಷಿತ

ಸಿನೋಫಾರ್ಮ್ ಎರಡು ಲಸಿಕೆಗಳ ಮೇಲೆ ಪ್ರಯೋಗ ನಡೆಸುತ್ತಿದೆ. ಪ್ರತಿ ವರ್ಷ 220 ಮಿಲಿಯನ್ ಅಷ್ಟು ಲಸಿಕೆ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ಲಿಯು ಕೂಡ ಈ ಲಸಿಕೆಯನ್ನು ತಮ್ಮ ಮೇಲೆ ಪ್ರಯೋಗಿಸಿಕೊಳ್ಳಲಿದ್ದಾರೆ.

ಚೀನಾ ಕೊರೊನಾ ಲಸಿಕೆ ಸುರಕ್ಷಿತ

ಚೀನಾ ಕೊರೊನಾ ಲಸಿಕೆ ಸುರಕ್ಷಿತ

ಚೀನಾ ನ್ಯಾಷನಲ್ ಫಾರ್ಮಾಸ್ಯುಟಿಕಲ್ ಗ್ರೂಪ್ (ಸಿನೊಫಾರ್ಮ್) ಯ ಘಟಕವು ಅಭಿವೃದ್ಧಿಪಡಿಸಿದ ಕೊರೊನಾವೈರಸ್ ಲಸಿಕೆ ಸುರಕ್ಷಿತ ಎಂದು ಸಂಶೋಧಕರು ತಿಳಿಸಿದ್ದಾರೆ. ಆ ಲಸಿಕೆಯಲ್ಲಿ ರೋಗ ನಿರೋಧಕ ಲಕ್ಷಣ ಕಂಡುಬಂದಿದೆ.

ಕೊನೆಯ ಹಂತದ ಪ್ರಯೋಗ

ಕೊನೆಯ ಹಂತದ ಪ್ರಯೋಗ

ಈಗಾಗಲೇ ಕೊನೆಯ ಹಂತದ ಪ್ರಯೋಗ ನಡೆಯಲಿದೆ. ಸಾವಿರಾರು ಮಂದಿ ಮೇಲೆ ಪ್ರಯೋಗ ನಡೆಸಲಾಗಿದ್ದು, ಉತ್ತಮ ಫಲಿತಾಂಶ ಕೂಡ ಲಭ್ಯವಾಗಿದೆ.ಸಿನೊಫಾರ್ಮ್ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಸಂಭವನೀಯ ಲಸಿಕೆಯ 3 ನೇ ಹಂತದ ಪ್ರಯೋಗವನ್ನು ನಡೆಸುತ್ತಿದೆ, 15,000 ಜನರನ್ನು ನೇಮಕ ಮಾಡುವ ನಿರೀಕ್ಷೆಯಿದೆ.

ಪ್ರಯೋಗ ಒಪ್ಪಂದದ ಪ್ರಕಾರ ಸಾಕಷ್ಟು ಮಂದಿಯನ್ನು ಪಾಕಿಸ್ತಾನಕ್ಕೂ ಕೂಡ ಕಳಿಸುತ್ತಿದೆ. ಈ ಲಸಿಕೆಯು ಯಾವುದೇ ಅಡ್ಡ ಪರಿಣಾಮವನ್ನು ಬೀರುವುದಿಲ್ಲ. ಮೊದಲು ಹಾಗೂ ಎರಡನೇ ಹಂತದಲ್ಲಿ 320 ಮಂದಿ ಮೇಲೆ ಪ್ರಯೋಗ ನಡೆದಿದೆ.

ರೋಗ ನಿರೋಧಕ ಶಕ್ತಿ

ರೋಗ ನಿರೋಧಕ ಶಕ್ತಿ

ಈ ಲಸಿಕೆಯು ಜನರಲ್ಲಿ ರೋಗ ನಿರೋಧಕ ಶಕ್ತಿಯನ್ನು ಉಂಟು ಮಾಡುತ್ತದೆ. ಆದರೆ ಕೊವಿಡ್ ರೋಗವನ್ನು ತಡೆಗಟ್ಟಲು ಅದು ಸಾಕೇ ಎನ್ನುವ ಬಗ್ಗೆ ಸಂಶೋಧಕರು ಹೇಳಿದ್ದಾರೆ.

ಮೂರು ತಿಂಗಳಲ್ಲಿ ಪ್ರಯೋಗ ಮುಗಿಯಲಿದೆ

ಮೂರು ತಿಂಗಳಲ್ಲಿ ಪ್ರಯೋಗ ಮುಗಿಯಲಿದೆ

ಸಿನೋಫಾರ್ಮ್ ಚೇರ್ಮನ್ ಮಾತನಾಡಿ, ಈ ವರ್ಷದ ಅಂತ್ಯದಲ್ಲಿ ಮೂರನೇ ಹಂತದ ಪ್ರಯೋಗವನ್ನು ನಡೆಸಲಿದ್ದು, ಮೂರು ತಿಂಗಳಲ್ಲಿ ಪ್ರಯೋಗ ಮುಗಿಯಲಿದೆ ಎಂದು ಭರವಸೆ ನೀಡಿದ್ದಾರೆ.

ಕೊರೊನಾ ವೈರಸ್ ವಿಶ್ವದಾದ್ಯಂತ 7,50,000 ಮಂದಿಯ ಹತ್ಯೆಗೆ ಕಾರಣವಾಗಿದೆ. 150 ಕ್ಕೂ ಹೆಚ್ಚು ಕಂಪನಿಗಳು ಕೊರೊನಾ ಲಸಿಕೆ ಸಂಶೋಧನೆಯಲ್ಲಿ ತೊಡಗಿವೆ. ವಿಶ್ವದಲ್ಲೇ ಮೊದಲ ಲಸಿಕೆ ಅಭಿವೃದ್ಧಿಪಡಿಸಿದ ರಾಷ್ಟ್ರ ಎಂಬ ಹೆಗ್ಗಳಿಕೆಗೆ ರಷ್ಯಾ ಪಾತ್ರವಾಗಿದೆ.

English summary
The head of a major state-owned Chinese pharmaceutical company said its coronavirus vaccine will be commercially available by the end of the year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X