ಪಾಕಿಸ್ತಾನದ ಸಹಾಯಕ್ಕೆ ಧಾವಿಸಿದ ಚೀನಾದಿಂದ ಟ್ರಂಪ್ ಟೀಕೆ

ನವದೆಹಲಿ, ಆಗಸ್ಟ್ 23: ಪಾಕಿಸ್ತಾನ ಉಗ್ರರನ್ನು ಪೋಷಣೆ ಮಾಡುತ್ತಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ ಬೆನ್ನಿಗೆ ಪಾಕಿಸ್ತಾನದ ಮಿತ್ರ ಚೀನಾ ಸಹಾಯಕ್ಕೆ ಧಾವಿಸಿದೆ.

ಪಾಕಿಸ್ತಾನ ಉಗ್ರ ನಿಗ್ರಹದಲ್ಲಿ ಮುಂಚೂಣಿಯಲ್ಲಿದೆ ಎಂಬ ಹಾಸ್ಯಾಸ್ಪದ ಹೇಳಿಕೆ ನೀಡುರುವ ಚೀನಾ ಡೊನಾಲ್ಡ್ ಟ್ರಂಪ್ ಹೇಳಿಕೆಯನ್ನು ಖಂಡಿಸಿದೆ.

China rushes to rescue Pakistan, slams Trump for his comments

ಮಂಗಳವಾರವಷ್ಟೇ ಟಿವಿ ಮಾಧ್ಯಮದಲ್ಲಿ ಮಾತನಾಡಿದ್ದ ಡೊನಾಲ್ಡ್ ಟ್ರಂಪ್ ಉಗ್ರರ ಪಾಲಿಗೆ ಪಾಕಿಸ್ತಾನ ಸ್ವರ್ಗವಾಗಿದೆ ಎಂದು ಕಿಡಿಕಾರಿದ್ದರು. ಉಗ್ರರಿಗೆ ಆಶ್ರಯ ನೀಡುವ ಮೂಲಕ ಪಾಕಿಸ್ತಾನ ಬಹಳಷ್ಟನ್ನು ಕಳೆದುಕೊಳ್ಳಲಿದೆ ಎಂದು ಟ್ರಂಪ್ ಗಂಭೀರ ಎಚ್ಚರಿಕೆಯನ್ನೂ ನೀಡಿದ್ದರು.

ಈ ಕುರಿತು ಹೇಳಿಕೆ ನೀಡಿರುವ ಚೀನಾ ವಿದೇಶಾಂಗ ಇಲಾಖೆ ವಕ್ತಾರ ಹುವಾ ಚುನ್ಯಿನ್, "ಪಾಕಿಸ್ತಾನ ಉಗ್ರರ ವಿರೋಧಿ ಹೋರಾಟದಲ್ಲಿ ಮುಂಚೂಣಿಯಲ್ಲಿದೆ. ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಟಲು ಪಾಕಿಸ್ತಾನ ಶ್ರಮಿಸುತ್ತಿದ್ದು, ಉಗ್ರರ ವಿರೋಧಿ ಹೋರಾಟದಲ್ಲಿ ಬಹಳಷ್ಟನ್ನು ಕಳೆದುಕೊಂಡಿದೆ," ಎಂದು ಹೇಳಿದ್ದಾರೆ.

"ನಾವು ಪಾಕಿಸ್ತಾನ ಮತ್ತು ಅಮೆರಿಕಾ ಪರಸ್ಪರ ಗೌರವ ಸಹಕಾರದಿಂದ ಉಗ್ರರ ವಿರುದ್ಧ ಹೋರಾಡಬೇಕು ಎಂದು ಕೇಳಿಕೊಳ್ಳುತ್ತೇವೆ. ಈ ಮೂಲಕ ಜಾಗತಿಕ ಶಾಂತಿ ಮತ್ತು ಸ್ಥಿರತೆಗೆ ಕೊಡುಗೆ ನೀಡಬೇಕು," ಎಂದು ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+