ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದಲ್ಲಿ ಇನ್ಮುಂದೆ ಆರತಿಗೊಂದು, ಕಿರುತಿಗೊಂದು

|
Google Oneindia Kannada News

ಬೀಜಿಂಗ್, ಡಿಸೆಂಬರ್, 28: ಚೀನಾ ತನ್ನ ಜನಸಂಖ್ಯಾ ನಿಯಂತ್ರಣ ನೀತಿಯಲ್ಲಿ ಮಹತ್ತರ ಬದಲಾವಣೆಯನ್ನು ಮಾಡಿಕೊಂಡಿದೆ. ದಶಕಗಳಷ್ಟು ಹಿಂದಿನ ಒಂದೇ ಮಗು ನೀತಿ ಕೈಬಿಟ್ಟು ಎರಡು ಮಗು ಹೊಂದಲು ಓಕೆ ಎಂದಿದೆ.

ವಯೋಮಾನದ ಅಂತರದಲ್ಲಿ ಭಾರೀ ವ್ಯತ್ಯಯ. ಯುವಕರ ಸಂಖ್ಯೆ ಇಳಿಮುಖ ಮುಂತಾದ ಅಂಶಗಳನ್ನು ಗಂಭೀರವಾಗಿ ತೆಗೆದುಕೊಂಡ ಚೀನಾ ಅಂತಿಮವಾಗಿ ಎರಡು ಮಗು ಹೊಂದುವುದನ್ನು ಅಧಿಕೃತ ಮಾಡಿದೆ. ಮೂರೂವರೆ ದಶಕಗಳ ನೀತಿಯನ್ನು ಬದಲಾವಣೆ ಮಾಡಿದೆ.[ಪುಟ್ಟ ಬಾಲಕನಿಗೆ ಹಿರಿಯ ಪೊಲೀಸ್ ಅಧಿಕಾರಿಗಳ ಸೆಲ್ಯೂಟ್]

China officially ends three-decade-old one child policy

ಆದರೆ ಹೆಚ್ಚಿರುವ ಜೀವನ ವೆಚ್ಚದಿಂದ ದಂಪತಿ ಎರಡು ಮಗು ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಹಿಂದೆ ಬಲವಂತದ ಗರ್ಭಪಾತ ಸಹ ಮಾಡಿಸಲಾಗಿತ್ತು. ಆದರೆ ನಿಜವಾದ ಮಾನವ ಸಂಪನ್ಮೂಲದ ಅಗತ್ಯವನ್ನು ,ಮನಗಂಡ ಚೀನಾ ಅಂತಿಮವಾಗಿ ಈ ನಿರ್ಧಾರಕ್ಕೆ ಬಂದಿದೆ. ಸಾಮಾಜಿಕ ತಾಣದಲ್ಲಿ ಈ ಕ್ರಮವನ್ನು ಭಾರತಕ್ಕೆ ಹೋಲಿಕಕೆ ಮಾಡಿ ಬಗೆ ಬಗೆಯ ಕಮೆಂಟ್ ಗಳನ್ನು ಹಾಕಲಾಗುತ್ತಿದೆ.[ಮಕ್ಕಳ ಜೀವ ಹಿಂಡುತ್ತಿರುವ ಎಂಡೋಸಲ್ಫಾನ್]

ಒಂದಕ್ಕಿಂತ ಹೆಚ್ಚು ಮಗು ಪಡೆದರೆ ಸರ್ಕಾರದ ಉಗ್ರ ಶಿಕ್ಷೆಗೆ ಗುರಿಯಾಗುವ ಭೀತಿಯಿಂದ ಚೀನಾ ಪ್ರಜೆಗಳು ಮುಕ್ತರಾಗಿದ್ದಾರೆ. 1980ರಲ್ಲಿ ಒಂದೇ ಮಗು ನೀತಿ ಚೀನಾದಲ್ಲಿ ಜಾರಿಗೆ ಬಂದಿತ್ತು. ಸಾಮೂಹಿಕ ಜನನ ನಿಯಂತ್ರಣ ಯೋಜನೆಯನ್ನೂ ಜಾರಿಗೆ ತರಲಾಗಿತ್ತು.

English summary
China on Sunday officially junked its controversial one child policy, allowing couples to have a second child amid deepening demographic crisis of shrinking workforce and ageing population in the world's second largest economy. Chinese lawmakers passed a historic decision allowing all couples to have two children from January 1, ending its over three and half decades old policy that prevented over 400 million births in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X