ಅಮೆರಿಕ ವಿರುದ್ಧ ಚೀನಾ ಬಿಟ್ಟಿದೆ ನೋಡಿ ಹೊಸ ಅಸ್ತ್ರ!
ಜಾಗತಿಕವಾಗಿ ವಾತಾವರಣ ಸರಿ ಇಲ್ಲ, ಎಲ್ಲ ಕಡೆ ಯುದ್ಧದ ಭಯಾನಕ ಸ್ಥಿತಿ ಆವರಿಸಿದೆ. ಉಕ್ರೇನ್ & ರಷ್ಯಾ ಯುದ್ಧದ ನಡುವೆ ಇಸ್ರೇಲ್ & ಹಮಾಸ್ ಉಗ್ರರ ಯುದ್ಧ ಕೂಡ ಇದೀಗ ಭಯ ಹುಟ್ಟಿಸಿದೆ. ಪರಿಸ್ಥಿತಿ ಹೀಗೆ ಕೈಮೀರಿ ಹೋಗಿರುವಾಗಲೇ, ಅಮೆರಿಕ ವಿರುದ್ಧ ಚೀನಾ ಈಗ ಪರೋಕ್ಷವಾಗಿ ಹೊಸ ಅಸ್ತ್ರ ಪ್ರಯೋಗ ಮಾಡಿದೆ. ಅದು ಉತ್ತರ ಕೊರಿಯಾ ಮೂಲಕ ಅನ್ನೋದೆ ಈಗಿನ ವಿಶೇಷ.
ಉತ್ತರ ಕೊರಿಯಾ ಎಲ್ಲರ ವಿರೋಧ ಕಟ್ಟಿಕೊಂಡಿದೆ, ಆದ್ರೆ ಚೀನಾ & ರಷ್ಯಾ ಜೊತೆ ಮಾತ್ರ ಉತ್ತರ ಕೊರಿಯಾ ಉತ್ತಮ ಸಂಬಂಧ ಉಳಿಸಿಕೊಂಡಿದೆ. ಹೀಗಾಗಿ ಚೀನಾ ಕೂಡ ಸಿಕ್ಕಾಪಟ್ಟೆ ಸಹಾಯ ಮಾಡುತ್ತಾ, ಉತ್ತರ ಕೊರಿಯಾಗೆ ಬೆನ್ನೆಲುಬಾಗಿ ನಿಂತಿದೆ. ಇದೇ ರೀತಿ ಈಗ ಮತ್ತೆ ಉತ್ತರ ಕೊರಿಯಾಗೆ ಹೊಸ ಆಫರ್ ಕೊಟ್ಟಿದೆ ಚೀನಾ. ಈ ಮೂಲಕ ಅಮೆರಿಕ ವಿರುದ್ಧ ಚೀನಾ ಹೊಸ ಅಸ್ತ್ರ ಪ್ರಯೋಗ ಮಾಡುತ್ತಿದೆಯಾ? ಎಂಬ ಡೌಟ್ ಕಾಡುತ್ತಿದೆ. ಯಾಕಂದ್ರೆ, ಇದೇ ಅಮೆರಿಕಗೆ ಉತ್ತರ ಕೊರಿಯಾ ದೊಡ್ಡ ಶತ್ರುವಾಗಿದೆ. ಹೀಗಿದ್ದಾಗ ಉತ್ತರ ಕೊರಿಯಾ ಜೊತೆ ಸಂಬಂಧವನ್ನು ಮತ್ತಷ್ಟು ಗಟ್ಟಿ ಮಾಡಲು ಚೀನಾ ಮುಂದಾಗಿದೆ.

ಉ.ಕೊರಿಯಾ & ಚೀನಾ ಮಾತುಕತೆ
ಅಷ್ಟಕ್ಕೂ ಉತ್ತರ ಕೊರಿಯಾ & ಚೀನಾ ನಡುವೆ, ಮಹತ್ವದ ಮಾತುಕತೆ ನಡೆದಿದೆ. ಎಲ್ಲಾ ಹಂತದಲ್ಲಿ ಕಾರ್ಯತಂತ್ರ ಸಂವಹನ ಬಲಪಡಿಸಲು ಎರಡೂ ದೇಶಗಳು ಒಪ್ಪಿಗೆ ಸೂಚಿಸಿವೆ ಎನ್ನಲಾಗಿದೆ. ಹಾಗೇ ಎರಡೂ ದೇಶಗಳ ನಡುವೆ ಸಂಬಂಧ ಮತ್ತಷ್ಟು ಬಲಪಡಿಸಲು ಈಗ ಚೀನಾ ಮುಂದಾಗಿದೆ. ಹೀಗಾಗಿ ಉತ್ತರ ಕೊರಿಯಾಗೆ ದೊಡ್ಡ ಮಟ್ಟದಲ್ಲಿ ಸಹಾಯ ಸಿಗುವ ನಿರೀಕ್ಷೆ ಮೂಡಿದೆ. ಆದ್ರೆ ಹೀಗೆ ಚೀನಾ & ಉತ್ತರ ಕೊರಿಯಾ ಮತ್ತಷ್ಟು ಹತ್ತಿರವಾದ ಹಿನ್ನೆಲೆ ಅಮೆರಿಕ ತೀವ್ರ ಆತಂಕ ಎದುರಿಸುವಂತಾಗಿದೆ. ಹಾಗೇ ದಕ್ಷಿಣ ಕೊರಿಯಾ ಮತ್ತು ಜಪಾನ್ ಕೂಡ ಆತಂಕದ ಪರಿಸ್ಥಿತಿಯಲ್ಲಿ ಬದುಕುವಂತಾಗಿದೆ.
ಮಿಸೈಲ್ ಬಿಡ್ತಾನೆ ಸರ್ವಾಧಿಕಾರಿ!
ಪದೇ ಪದೇ ತನ್ನ ಕ್ಷಿಪಣಿಗಳ ಮೂಲಕ ಉತ್ತರ ಕೊರಿಯಾ ಜಗತ್ತಿನ ಗಮನ ಸೆಳೆಯುತ್ತಿದ್ದು, ಪ್ರಮುಖವಾಗಿ ಪರಮಾಣು ಕ್ಷಿಪಣಿಗಳನ್ನೇ ಅಭಿವೃದ್ಧಿ ಮಾಡುತ್ತಿದೆ ಈ ಉತ್ತರ ಕೊರಿಯಾ. ಹೀಗಾಗಿ ಜಗತ್ತು 2 ಮಹಾಯುದ್ಧ ನೋಡಿ ಬೆಚ್ಚಿಬಿದ್ದಿತ್ತು, ಮುಂದೆ ಎಂದೂ ಮಹಾಯುದ್ಧವು ನಡೆಯಲ್ಲ ಎನ್ನಲಾಗಿತ್ತು. ಆದರೆ ಸತ್ಯವಾಗಿಯೂ ಆ ಮಾತು ಸುಳ್ಳು ಎನ್ನುವ ಕಾಲ ಹತ್ತಿರ ಬರುತ್ತಿದೆ. ರಷ್ಯಾ VS ಉಕ್ರೇನ್ ಮಧ್ಯೆ ನಡೆಯುತ್ತಿರುವ ಯುದ್ಧ ಇದೀಗ 3ನೇ ಮಹಾಯುದ್ಧಕ್ಕೆ ದಾರಿ ಮಾಡಿಕೊಟ್ಟಿದೆ. ಇದರ ಜೊತೆಗೆ ಉತ್ತರ ಕೊರಿಯಾ ಕೂಡ ತನ್ನ ಹಠ ಮುಂದುವರಿಸಿ ಪರಮಾಣು ಅಸ್ತ್ರಗಳನ್ನು ಹೆಚ್ಚಿಸಿಕೊಳ್ಳುತ್ತಿದೆ.
ದಕ್ಷಿಣ ಕೊರಿಯಾಗೆ ಖಡಕ್ ವಾರ್ನಿಂಗ್!
ಕೆಲ ದಿನಗಳ ಹಿಂದಷ್ಟೇ ಇದೇ ಉತ್ತರ ಕೊರಿಯಾ, ತನ್ನ ಆಜನ್ಮ ವೈರಿ ದಕ್ಷಿಣ ಕೊರಿಯಾ ವಿರುದ್ಧ ಗುಡುಗಿತ್ತು. ಹೀಗೆ ಇಬ್ಬರ ನಡುವೆ ಮತ್ತೆ ಸಂಬಂಧ ಹಾಳಾಗಿ ಹೋಗುತ್ತಿದೆ. ಇದೇ ಸಮಯದಲ್ಲಿ ಚೀನಾ ಕೂಡ ಉತ್ತರ ಕೊರಿಯಾ ಜೊತೆಗೆ ಸಂಬಂಧ ಬಲಪಡಿಸಲು ಹೊಸ, ಹೊಸ ಯೋಜನೆ ರೂಪಿಸುತ್ತಿದೆ. ಹೀಗಿದ್ದಾಗ ಸಹಜವಾಗಿ ಅಮೆರಿಕ ಜೊತೆಗೆ ಗುರಿಸಿಕೊಂಡ ದಕ್ಷಿಣ ಕೊರಿಯಾ ಮತ್ತು ಜಪಾನ್ ದೇಶಗಳಿಗೆ ಭಯ ಶುರುವಾಗಿದೆ. ಯಾಕಂದ್ರೆ ಈ ಎರಡು ದೇಶಗಳು ಉತ್ತರ ಕೊರಿಯಾಗೆ ಹತ್ತಿರದಲ್ಲೇ ಇವೆ.

ಜಗತ್ತು ವಿನಾಶದ ಅಂಚಿಗೆ ಸಾಗುತ್ತಿದ್ದು, ಉತ್ತರ ಕೊರಿಯಾ ದಿನದಿಂದ ದಿನಕ್ಕೆ ಅಮೆರಿಕದ ವಿರುದ್ಧ ಯುದ್ಧ ಸಿದ್ಧತೆ ನಡೆಸುತ್ತಿದೆ. ಹೀಗಾಗಿ ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದು, ಇದೀಗ ಅಮೆರಿಕ ಕೂಡ ಉತ್ತರ ಕೊರಿಯಾ ವಿರುದ್ಧ ಹೊಸ ಹೊಸ ರಣತಂತ್ರ ಹೆಣೆಯುತ್ತಿದೆ. ಆದ್ರೆ ಈ ತಂತ್ರ & ರಣತಂತ್ರಗಳು ಮತ್ತೊಂದು ಮಹಾಯುದ್ಧಕ್ಕೆ ದಾರಿ ಮಾಡಿಕೊಡುತ್ತಿವೆ.












Click it and Unblock the Notifications