ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ-ಚೀನಾ ಮುಖಾಮುಖಿ: ಸೇನಾಧಿಕಾರಿ, ಮೂವರು ಸೈನಿಕರು ಹುತಾತ್ಮ

|
Google Oneindia Kannada News

ಲಡಾಖ್, ಜೂನ್ 16: ಭಾರತ -ಹಾಗೂ ಚೀನಾ ನಡುವಿನ ಸುದೀರ್ಘ ಗಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗಿದೆ ಎಂದು ಹೇಳುವ ಹೊತ್ತಲ್ಲೇ ಚೀನಾದ ಸೇನೆಯು ಭಾರತ ಸೈನಿಕರ ಮೇಲೆ ದಾಳಿ ನಡೆಸಿದೆ.

Recommended Video

IPL might start from 26th September | IPL 2020 | Oneindia Kannada

ಸೋಮವಾರ ರಾತ್ರಿ ನಡೆದ ಭಾರತ-ಚೀನಾ ಸೇನೆ ನಡುವಿನ ಮುಖಾಮುಖಿಯಲ್ಲಿ ಭಾರತೀಯ ಸೇನಾಧಿಕಾರಿ, ಇಬ್ಬರು ಸೈನಿಕರು ಸೇರಿ ಮೂರು ಮಂದಿ ಹುತಾತ್ಮರಾಗಿದ್ದಾರೆ.

China Killed Indian Soldiers: Indian Army Colonel and 2 Army Jawans Killed in Galwan Valley, Ladakh

ಚೀನಾ ಜೊತೆಗಿನ ಸಂಘರ್ಷದಲ್ಲಿ ಭಾರತೀಯ ಸೇನೆಗೆ ತೊಂದರೆಯಾಗಿದೆ, ಮೂವರನ್ನು ಸೇನೆ ಕಳೆದುಕೊಂಡಿರುವುದಾಗಿ ಹೇಳಿಕೊಂಡಿದೆ.

India-China standoff LIVE : ಭಾರತ ಹಾಗೂ ಚೀನಾ ಗಡಿಭಾಗ ಉದ್ವಿಗ್ನIndia-China standoff LIVE : ಭಾರತ ಹಾಗೂ ಚೀನಾ ಗಡಿಭಾಗ ಉದ್ವಿಗ್ನ

ಇದಕ್ಕೆ ಚೀನಾ ಪ್ರತಿಕ್ರಿಸಿದ್ದು ಯಾವುದೇ ಕಾರಣಕ್ಕೂ ಏಕಪಕ್ಷೀಯವಾಗಿ ಕ್ರಮಗಳನ್ನು ತೆಗೆದುಕೊಳ್ಳಬೇಡಿ ಇದರಿಂದ ಸಾಕಷ್ಟು ತೊಂದರೆಯಾಗಲಿದೆ ಎಂದು ಹೇಳಿದೆ.

ಭಾರತ-ಚೀನಾ ನಡುವಿನ ಸುದೀರ್ಘ ಗಡಿ ಸಮಸ್ಯೆಗೆ ಶಾಂತಿಯುತ ಪರಿಹಾರ ಕಂಡುಕೊಳ್ಳಲಾಗಿದೆ. ಚೀನಾದೊಂದಿಗಿನ ಭಾರತದ ಮಿಲಿಟರಿ ಮತ್ತ ರಾಜತಾಂತ್ರಿಕ ಶಾಂತಿ ಮಾತುಕತೆಗಳು ಫಲಪ್ರದವಾಗಿವೆ ಎಂದು ಹೇಳಲಾಗಿತ್ತು.

ಜೂನ್ 6ನಡೆದ ಉಭಯ ದೇಶಗಳ ಉನ್ನತ ಸೇನಾ ಕಮಾಂಡರ್‌ಗಳ ಸಭೆಯಲ್ಲಿ ಗಡಿ ಉದ್ವಿಗ್ನತೆ ಕಡಿಮೆ ಮಾಡಿ ಶಾಂತಿ ಮಾತುಕತೆ ನಡೆಸುವ ನಿರ್ಧಾರಕ್ಕೆ ಬರಲಾಗಿತ್ತು.

1975ರ ಬಳಿಕ ಮೊದಲ ಬಾರಿ ಚೀನಾ ಗಡಿಯಲ್ಲಿ ಭಾರತೀಯ ಸೈನಿಕರ ಹತ್ಯೆ1975ರ ಬಳಿಕ ಮೊದಲ ಬಾರಿ ಚೀನಾ ಗಡಿಯಲ್ಲಿ ಭಾರತೀಯ ಸೈನಿಕರ ಹತ್ಯೆ

ಅದರಂತೆ ಪೂರ್ವ ಲಡಾಖ್‌ ಗಡಿಯಿಂದ ಉಭಯ ದೇಶಗಳ ಸೇನಾ ಪಡೆಗಳೂ ಹಿಂದಕ್ಕೆ ಸರಿಯುತ್ತಿದ್ದು, ಪೆಟ್ರೋಲಿಂಗ್ ಪಾಯಿಂಟ್(ಗಸ್ತು ಪ್ರದೇಶ) 14, 15 ಹಾಗೂ 17 ಸ್ಥಳಗಳಿಂದ ಸುಮಾರು 2 ರಿಂದ 2.5 ಕಿ.ಮೀ ಹಿಂದಕ್ಕೆ ಸರಿಯಲಾಗಿದೆ ಎಂದು ಹೇಳಲಾಗಿತ್ತು.

ಅದಾಗ್ಯೂ ಉಭಯ ಸೇನೆಗಳ ನಡುವೆ ಮಾತುಕತೆಗಳು ಮುಂದುವರೆದಿದ್ದು, ಇದೀಗ ಭಾರತ-ಚೀನಾ ಸೇನೆಯ ಮೇಜರ್ ಜನರಲ್‌ ಹುದ್ದೆಯ ಅಧಿಕಾರಿಗಳ ನಡುವೆ ಮಾತುಕತೆ ನಡೆದಿದೆ.

ಗಡಿಯಿಂದ ಸೇನಾ ಪಡೆಗಳನ್ನು ಮತ್ತಷ್ಟು ಹಿಂದಕ್ಕೆ ಸರಿಸುವ ಹಾಗೂ ಗಡಿಯಲ್ಲಿ ಜಮಾವಣೆ ಮಾಡಿರುವ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಖಾಲಿ ಮಾಡಿಸುವ ಕುರಿತು ಮೇಜರ್ ಜನರಲ್ ಮಟ್ಟದ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ. ಇದೀಗ ಭಾರತ ಹಾಗೂ ಚೀನಾ ಸೇನೆಯ ಮುಖ್ಯಸ್ಥರು ಮತ್ತೆ ಮಾತುಕತೆ ನಡೆಸುತ್ತಿದ್ದಾರೆ.

English summary
Three Indian soldiers, including a commanding officer, have been killed in a "violent face-off" with Chinese soldiers in the Galwan Valley in Ladakh, where the two sides have been ranged against each other over the past few weeks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X