• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಾಲ ಬಿಚ್ಚಿದ ‘ಡ್ರ್ಯಾಗನ್’, ಹಾಂಕಾಂಗ್ ಪ್ರಜೆಗಳಿಗೆ ಜೈಲು ಶಿಕ್ಷೆ

|

ಹಾಂಕಾಂಗ್‌ನ ನಾಯಕರನ್ನು ಹೆದರಿಸಿ, ಬೆದರಿಸಿ ಬುಟ್ಟಿಗೆ ಹಾಕಿಕೊಂಡಿರುವ ಚೀನಾ, ಈಗ ಅಲ್ಲಿನ ಪ್ರಜೆಗಳ ವಿರುದ್ಧವೇ ಸಮರ ಸಾರಿದೆ. 1 ವರ್ಷದ ಹಿಂದೆ ಹಾಂಕಾಂಗ್‌ನಲ್ಲಿ ನಡೆದಿದ್ದ ಚೀನಾ ವಿರೋಧಿ ಹೋರಾಟದಲ್ಲಿ ಭಾಗಿಯಾದವರನ್ನೇ ಚೀನಾ ಟಾರ್ಗೆಟ್ ಮಾಡಿತ್ತಿದೆ. ಹೀಗಾಗಿ ಚೀನಾ ಕೈಗೆ ಸಿಗದೆ ಓಡಿ ಹೋಗುತ್ತಿದ್ದವರನ್ನೂ ಚೀನಾ ಬಿಡುತ್ತಿಲ್ಲ.

ಸಾಕಪ್ಪಾ ಸಾಕು ಚೀನಾ ಸಹವಾಸ ಅಂತಾ ತೈವಾನ್‌ಗೆ ಪಲಾಯನ ಮಾಡುತ್ತಿದ್ದ ಸುಮಾರು 10 ಜನರನ್ನು ಚೀನಿ ಗ್ಯಾಂಗ್ ತೈವಾನ್ ಸಮುದ್ರದ ಬಳಿ ಸೆರೆ ಹಿಡಿದಿತ್ತು. ಹೀಗೆ ಸೆರೆ ಹಿಡಿದ 10 ಜನರಿಗೆ 3 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ ಕುತಂತ್ರಿ ಚೀನಾ.

ಹಾಂಕಾಂಗ್‌ ಜಾಗಕ್ಕಾಗಿ ಬಡಿದಾಟ: ಚೀನಾ ವಿರುದ್ಧ ಅಮೆರಿಕ ಯುದ್ಧ..?

ಅಲ್ಲದೆ ಬಂಧಿತ ಹಾಂಕಾಂಗ್ ಪ್ರಜೆಗಳಿಗೆ 3000 ಡಾಲರ್ ದಂಡವನ್ನೂ ವಿಧಿಸಲಾಗಿದೆ. ಅಕ್ರಮವಾಗಿ ಗಡಿದಾಟಿದ ಆರೋಪವನ್ನ ಚೀನಾ ಹಾಂಕಾಂಗ್ ಪ್ರಜೆಗಳ ವಿರುದ್ಧ ಹೊರಿಸಲಾಗಿದೆ. ಈ ಮೂಲಕ ಹಾಂಕಾಂಗ್ ತನ್ನದೇ ನೆಲ ಎಂದು ಮತ್ತೊಮ್ಮೆ ಚೀನಿ ಗ್ಯಾಂಗ್ ತನ್ನ ಬಾಯಿ ಬಡಿದುಕೊಳ್ಳುತ್ತಿದೆ. ಇದು ಹಾಂಕಾಂಗ್ ಜನರನ್ನು ರೊಚ್ಚಿಗೇಳುವಂತೆ ಮಾಡಿದೆ. ಆದರೆ ಹಾಂಕಾಂಗ್‌ ದೇಶದ ರಾಜಕೀಯ ನಾಯಕರು ಮಾತ್ರ ಚೀನಾಗೆ ಬಕೇಟ್ ಹಿಡಿದು ಬದಕುತ್ತಿದ್ದಾರೆ.

ಹಾಂಕಾಂಗ್‌ ಮೇಲೇಕೆ ಚೀನಾ ಕಣ್ಣು..?

ಹಾಂಕಾಂಗ್‌ ಮೇಲೇಕೆ ಚೀನಾ ಕಣ್ಣು..?

ಹೌದು, ಇಂತಹದ್ದೊಂದು ಪ್ರಶ್ನೆ ಸಾಕಷ್ಟು ಜನರನ್ನು ಕಾಡುತ್ತಿರುತ್ತದೆ. ಅಂದಹಾಗೆ ಚೀನಾಗೆ ಅದೆಷ್ಟೇ ಭೂಮಿ ಇದ್ದರೂ ಮತ್ತಷ್ಟು ಜಾಗ ನನ್ನದಾಗಬೇಕು ಎಂಬ ದುರಾಸೆ. ಚೀನಿ ಗ್ಯಾಂಗ್‌ಗೆ ಮತ್ತೊಂದು ದೇಶದ ಜಾಗ ಕೊಳ್ಳೆ ಹೊಡೆಯುವುದೇ ಕೆಲಸ. ಇದೇ ರೀತಿ ರಷ್ಯಾ ಮೇಲೂ ಜಗಳಕ್ಕೆ ಹೋಗಿ ಒಮ್ಮೆ ಸರಿಯಾಗೇ ಏಟು ತಿಂದು ಬಂದಿದೆ ಚೀನಾ.

ಮತ್ತೊಂದ್ಕಡೆ ಹಾಂಕಾಂಗ್ ಮೇಲೆ ಚೀನಾ ಕಣ್ಣಿಡಲು ಬಲವಾದ ಕಾರಣವೂ ಇದೆ. ಆಯಕಟ್ಟಿನ ಜಾಗದಲ್ಲಿರುವ ಹಾಗೂ ಚೀನಾ ಗಡಿಯಿಂದ ಕೂಗಳತೆ ದೂರದಲ್ಲಿರುವ ಶ್ರೀಮಂತ ದೇಶ ಈ ಹಾಂಕಾಂಗ್. ಹೀಗಾಗಿ ಹಾಂಕಾಂಗ್ ತನ್ನ ವೈರಿ ದೇಶಗಳ ವಶವಾಗಿ, ತನ್ನ ವಿರುದ್ಧವೇ ಮಸಲತ್ತು ಮಾಡಲು ನಿಂತರೆ ಕಷ್ಟ ಎಂಬುದು ಚೀನಾಗೆ ಎದುರಾಗಿರುವ ಭಯ. ಈ ಕಾರಣಕ್ಕೆ ಹಾಂಕಾಂಗ್ ದೇಶವನ್ನ ಕಂಟ್ರೋಲ್ ಮಾಡಲು ಚೀನಿ ಗ್ಯಾಂಗ್ ಏನು ಬೇಕಾದರೂ ಮಾಡಲು ಸಿದ್ಧವಿದೆ.

ನೆಮ್ಮದಿಯೇ ಇಲ್ಲದ ದೇಶ ಹಾಂಕಾಂಗ್

ನೆಮ್ಮದಿಯೇ ಇಲ್ಲದ ದೇಶ ಹಾಂಕಾಂಗ್

ಹಲವು ವರ್ಷಗಳ ಕಾಲ ಬ್ರಿಟಿಷರ ಅಡಿಯಾಳಾಗಿದ್ದ ಹಾಂಕಾಂಗ್ ಸ್ವತಂತ್ರಗೊಂಡರೂ ನೆಮ್ಮದಿಯೇ ಇಲ್ಲ. ಏಕೆಂದರೆ ಅಲ್ಲಿ ಚೀನಾ ಎಂಟ್ರಿ ಕೊಟ್ಟಿತ್ತು. ಸ್ವತಂತ್ರ ದೇಶದಂತೆ ಬಾಳಿದ್ದ ಹಾಂಕಾಂಗ್ ಮೇಲೆ ಚೀನಾ ಮೆಲ್ಲಗೆ ಹಿಡಿತ ಸಾಧಿಸಿತ್ತು. ಹಾಂಕಾಂಗ್‌ ರಾಜಕಾರಣಿಗಳ ಬ್ರೈನ್ ವಾಶ್ ಮಾಡಿ ಹೈಜಾಕ್ ಮಾಡಿದೆ. ಪರಿಣಾಮ ಜನರಿಗೆ ನೆಮ್ಮದಿ ಇಲ್ಲವಾಗಿದೆ. ಅಷ್ಟೊಂದು ಅಭಿವೃದ್ಧಿ ಹೊಂದಿದ್ದರೂ ಬೇರೆ ಯಾವುದೋ ದೇಶ ಹಾಂಕಾಂಗ್ ಜನರನ್ನ ಕಂಟ್ರೋಲ್ ಮಾಡುತ್ತಿದೆ. ಅತ್ತ ತೈವಾನ್ ಮೇಲೂ ಕಣ್ಣಿಟ್ಟು ಕೂತಿರುವ ಚೀನಾಗೆ ಹಾಂಕಾಂಗ್ ಕೂಡ ಬೇಕಾಗಿದೆ. ಇದು ನನಸಾಗದಂತೆ ತಡೆಯಲು ಅಮೆರಿಕ ಶತಾಯಗತಾಯ ದಾಳ ಉರುಳಿಸುತ್ತಿದೆ.

ಚೀನಾಗೆ ಕಪಾಳಮೋಕ್ಷ: ಡ್ರ್ಯಾಗನ್ ಶತ್ರು ಬಿಡುಗಡೆ

 ಜನರು ಉಸಿರಾಡಲು ಭಯಪಡಬೇಕು

ಜನರು ಉಸಿರಾಡಲು ಭಯಪಡಬೇಕು

ಚೀನಾ ಎಂಬ ಭಸ್ಮಾಸುರನ ಕರಿನೆರಳು ಬಿದ್ದಕಡೆ ಒಂದಲ್ಲ ಒಂದು ಸಮಸ್ಯೆ ಇದ್ದೇ ಇರುತ್ತದೆ. ಹಾಂಕಾಂಗ್‌ನಲ್ಲಿ ಆಗಿರುವುದು ಕೂಡ ಅದೇ. ಹಾಂಕಾಂಗ್ ತನ್ನಿಂದ ದೂರ ಹೋಯಿತು ಎನ್ನುವಷ್ಟರಲ್ಲಿ ರಾಜಕಾರಣಿಗಳನ್ನೆಲ್ಲಾ ಬುಟ್ಟಿಗೆ ಹಾಕಿಕೊಂಡ ಕುತಂತ್ರಿ ಚೀನಾ, ಹಾಂಕಾಂಗ್‌ನಲ್ಲಿ ಪ್ರತಿಭಟನೆ ಹತ್ತಿಕ್ಕಲು ಕಾನೂನು ಜಾರಿಗೆ ತಂದಿತ್ತು. ಹೊಸ ಕಾನೂನಿನಲ್ಲಿ ಹೋರಾಟ ಹತ್ತಿಕ್ಕುವುದರಿಂದ ಹಿಡಿದು, ಹೋರಾಟಗಾರರ ನೆಮ್ಮದಿ ಕೆಡಿಸುವ ತನಕ ಎಲ್ಲವನ್ನೂ ಚೀನಾ ಪ್ಲಾನ್ ಮಾಡಿ ಕೊಟ್ಟಿತ್ತು.

ಅದರಂತೆ ಹಾಂಕಾಂಗ್ ನಾಯಕರು ಹೊಸ ಕಾನೂನು ಜಾರಿಗೆ ತಂದಿದ್ದು, ಹಾಂಕಾಂಗ್‌ನಲ್ಲಿ ಖಾಸಗಿ ಮಾಹಿತಿಗಳನ್ನೂ ಸರ್ಕಾರ ಕದಿಯುತ್ತಿದೆ. ಜಿಮ್ಮಿ ಲಾಯಿ ಅವರಂತಹ ಮಾಧ್ಯಮ ದಿಗ್ಗಜರನ್ನು ಕೂಡ ಹಿಡಿದು, ಹಿಡಿದು ಒಳಗೆ ಹಾಕುತ್ತಿದ್ದಾರೆ. ಆದರೆ ಕೋರ್ಟ್‌ನಲ್ಲಿ ಗೆಲುವು ಕಂಡ ಜಿಮ್ಮಿ ಲಾಯಿ ಬಿಡುಗಡೆಗೆ ಏನೂ ಆಗಿದ್ದಾರೆ. ಆದರೂ ಅವರ ಮೇಲೆ ಚೀನಾ ಸರ್ಕಾರ ಇನ್ನೂ ಕಣ್ಣಿಟ್ಟಿದೆ.

ತೈವಾನ್ ಇಟ್ಟಿತ್ತು ಗುನ್ನಾ..!

ತೈವಾನ್ ಇಟ್ಟಿತ್ತು ಗುನ್ನಾ..!

ಹಾಂಕಾಂಗ್ ರೀತಿಯಲ್ಲಿ ತೈವಾನ್ ವಿರುದ್ಧ ಚೀನಾ ಕುತಂತ್ರ ಬುದ್ಧಿ ಅನುಸರಿಸಿ ಅತಿಕ್ರಮಣಕ್ಕೆ ಮುಂದಾಗಿತ್ತು. ಆದರೆ ತೈವಾನ್ ಬಿಡಬೇಕಲ್ಲ. ಪುಟಾಣಿ ದ್ವೀಪರಾಷ್ಟ್ರ ತೈವಾನ್ ತನ್ನ ಶಕ್ತಿಶಾಲಿ ಮಿಲಿಟರಿ ಹಾಗೂ ವೆಪನ್‌ಗಳ ಮೂಲಕ ಚೀನಾಗೆ ಸರಿಯಾಗಿ ತಿರುಗೇಟು ನೀಡಿದೆ. ತೈವಾನ್ ಕೊಟ್ಟ ತಿರುಗೇಟಿಗೆ ಚೀನಾ ತೆಪ್ಪಗಾಗಿದೆ. ಆದರೆ ಈಗಲೂ ಸಮಯ ಬಂದಾಗೆಲ್ಲಾ ತೈವಾನ್ ಮೇಲೆ ತನಗೆ ಹಕ್ಕಿದೆ ಎಂದು ಚೀನಾ ಗೋಳಾಡುತ್ತಿರುತ್ತದೆ. ಇದು ಕನಸು ಎಂದು ಅಮೆರಿಕ ಕೂಡ ಹಲವಾರು ಬಾರಿ ತಿರುಗೇಟು ನೀಡಿದೆ. ಒಟ್ನಲ್ಲಿ ಚೀನಿಯರ ಹುಟ್ಟುಗುಣವಾದ ಅತಿಕ್ರಮಣ ಬುದ್ಧಿ ಸುಲಭಕ್ಕೆ ತೊಲಗುವ ಲಕ್ಷಣ ಕಾಣುತ್ತಿಲ್ಲ. ಇದು ಜಗತ್ತಲ್ಲಿ ಮತ್ತೊಂದು ಮಹಾ ಯುದ್ಧದ ಭೀತಿಯನ್ನು ಸೃಷ್ಟಿಸುತ್ತಿದೆ.

ಚೀನಾ ವಿರುದ್ಧ ಚೀನಿಯರಿಂದಲೇ 'ಭಾಷೆ' ಯುದ್ಧ..!

English summary
China targets Hong kongers who tried to flee to Taiwan. China jailed 10 Hong kongers up to 3 years and fined 1,500 to 3,000 US Dollars.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X