ಬೀಜಿಂಗ್: ಕಡಲ ಆಹಾರ, ಮಾಂಸ ಮಾರುಕಟ್ಟೆಯಲ್ಲಿ ಹೆಚ್ಚು ಕೊರೊನಾ ಸೋಂಕು
ಬೀಜಿಂಗ್, ಜೂನ್ 19: ಬೀಜಿಂಗ್‌ನ ಮಾರುಕಟ್ಟೆಯ ಕಡಲ ಆಹಾರ ಹಾಗೂ ಮಾಂಸದ ಮಾರುಕಟ್ಟೆಯಲ್ಲೇ ಹೆಚ್ಚು ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ ಎಂದು ಚೀನಾ ಹೇಳಿದೆ.
ಚೀನಾದಲ್ಲಿ ಕೊರೊನಾ ವೈರಸ್ ಎರಡನೇ ಪರ್ವ ಆರಂಭವಾಗಿದೆ. ಕೊರೊನಾ ಪ್ರಕರಣಗಳೆಲ್ಲವೂ ಕಡಿಮೆ ಉಷ್ಣಾಂಶ, ಹೆಚ್ಚು ತೇವಾಂಶವಿರುವ ಪ್ರದೇಶದಲ್ಲೇ ಪತ್ತೆಯಾಗಿದೆ.
ಕೊರೊನಾ ಸೋಂಕು ಹೆಚ್ಚಳ: ಬೀಜಿಂಗ್‌ನಲ್ಲಿ ಮತ್ತೆ ಲಾಕ್‌ಡೌನ್
ಬೀಜಿಂಗ್‌ನ ಅತಿ ದೊಡ್ಡ ಮಾರುಕಟ್ಟೆ ಕ್ಸಿನ್‌ಫದಿ ಆಹಾರ ಕೇಂದ್ರದಲ್ಲಿ ಎರಡನೇ ಹಂತದಲ್ಲಿ ಮೊದಲ ಬಾರಿಗೆ ಸೋಂಕು ಕಂಡುಬಂದಿತ್ತು. ಆ ಪ್ರದೇಶದಲ್ಲಿ 100ಕ್ಕಿಂತಲೂ ಹೆಚ್ಚು ಮಂದಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ.
ಕ್ಸಿನ್‌ಫದಿ ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದ ಹಾಗಯೇ ಅಲ್ಲಿನ ಕಡಲ ಆಹಾರ ಮತ್ತು ಮಾಂಸ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದವರಿಗೆ ಸೋಂಕು ತಗುಲಿದೆ. ಕಡಲ ಆಹಾರ ಮಾರುಕಟ್ಟೆಯಲ್ಲಿ ಪ್ರದೇಶದವನ್ನು ತಂಪಾಗಿರಿಸುವ ಅಗತ್ಯವಿರುತ್ತದೆ.
ರಾ ಸಾಲ್‌ಮನ್(ಒಂದು ರೀತಿಯ ಮೀನು) ತಿನ್ನುವುದನ್ನು ನಿಷೇಧಿಸಲಾಗಿದೆ. ಸಾಲ್ಮನ್ ಆಮದುಮಾಡಿಕೊಳ್ಳುವಾಗಲೇ ಸೋಂಕು ತಗುಲಿದೆ ಎಂದು ಅಂದಾಜಿಸಲಾಗಿದೆ. ಹೋಲ್‌ಸೇಲ್ ಮಾರುಕಟ್ಟೆಯಲ್ಲಿ ಶುಚಿತ್ವದ ಕೊರತೆ ಇದೆ, ಸ್ಯಾನಿಟೈಸರ್, ಮಾಸ್ಕ್ ಬಳಕೆ ಸೇರಿದಂತೆ ಶುಚಿತ್ವವನ್ನೂ ಕಾಪಾಡಿಕೊಳ್ಳಬೇಕಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.