• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚೀನಾದಲ್ಲಿ ಡೆಲ್ಟಾ ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚಳ

|
Google Oneindia Kannada News

ಬೀಜಿಂಗ್, ನವೆಂಬರ್ 15: ಚೀನಾದಲ್ಲಿ ದಿನದಿಂದ ದಿನಕ್ಕೆ ಡೆಲ್ಟಾ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಡೆಲ್ಟಾ ರೂಪಾಂತರಿ ಬಹುಬೇಗ ಹಬ್ಬುತ್ತಿದೆ, ಕಳೆದ ಕೆಲವು ವಾರಗಳಿಂದ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟು ಕಡೆಗಳಲ್ಲಿ ನಿರ್ಬಂಧಗಳನ್ನು ಹೇರಲಾಗಿದೆ.

 ಬೀಜಿಂಗ್ ಹೊಸ ಕೋವಿಡ್ ಪ್ರಕರಣ ಪತ್ತೆ; ಮಾಲ್‌ಗಳು ಬಂದ್ ಬೀಜಿಂಗ್ ಹೊಸ ಕೋವಿಡ್ ಪ್ರಕರಣ ಪತ್ತೆ; ಮಾಲ್‌ಗಳು ಬಂದ್

ಅಕ್ಟೋಬರ್ 17 ರಿಂದ ನವೆಂಬರ್ 14ರವರೆಗೆ ಮೈನ್‌ಲ್ಯಾಂಡ್‌ನಲ್ಲಿ 1308 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಚೀನಾದ 21 ಪ್ರಾಂತ್ಯಗಳಿಗೆ ಡೆಲ್ಟಾ ರೂಪಾಂತರಿ ಹಬ್ಬಿದೆ.

ಡಾಲಿಯನ್, ಡ್ಯಾನ್‌ಡಾಂಗ್, ಆನ್ಷನ್, ಶೇನ್‌ಯಾಂಗ್‌ನಿಂದ ಬರುವವರು 14 ದಿನಗಳ ಕ್ವಾರಂಟೈನ್‌ಗೆ ಒಳಗಾಗಬೇಕು ಎಂದು ಹೇಳಲಾಗಿದೆ.
ನವೆಂಬರ್ 14 ವರೆಗೆ ಚೀನಾದಲ್ಲಿ 98,315 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. 4636 ಮಂದಿ ಮೃತಪಟ್ಟಿದ್ದಾರೆ.

ಚೀನಾ ದೇಶದಲ್ಲಿ ಕೊರೊನಾ ಹಾವಳಿ ತೀವ್ರಗೊಂಡಿದೆ. ಚೀನಾ ರಾಜಧಾನಿ ಬೀಜಿಂಗ್‌ನಲ್ಲಿ ಸೋಂಕಿನ ಅಬ್ಬರ ಹೆಚ್ಚಾದ ಹಿನ್ನೆಲೆಯಲ್ಲಿ ಮಾಲ್‌ಗಳನ್ನು ಸೀಲ್‌ ಮಾಡಲಾಗಿದೆ. ಬೀಜಿಂಗ್ ನಗರದ ಹಲವೆಡೆ ಜನವಸತಿ ಪ್ರದೇಶಗಳನ್ನು ಸೀಲ್‌ ಡೌನ್ ಮಾಡಲಾಗಿದೆ.

ಚೀನಾ ದೇಶದ ಹಲವೆಡೆ ಲಾಕ್‌ಡೌನ್ ಹೇರಲಾಗಿದ್ದರೂ ಕೊರೊನಾ ಸೋಂಕಿನ ಹರಡುವಿಕೆ ವೇಗವಾಗಿಯೇ ಸಾಗಿದೆ. ಚೀನಾದಾದ್ಯಂತ ಸಾಮೂಹಿಕವಾಗಿ ಕೊರೊನಾ ಪರೀಕ್ಷೆ ಹಾಗೂ ಪ್ರವಾಸ ನಿರ್ಬಂಧಗಳನ್ನೂ ಹೇರಲಾಗಿದೆ. ಹಾಗಿದ್ದರೂ ಕೂಡಾ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ.

ಸದ್ಯ ಚೀನಾದಲ್ಲಿ ದೇಶಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದ್ದು, ದೇಶದ ಒಳಗೆ ವಿಮಾನ ಯಾನ ಹೆಚ್ಚಾದ ಕಾರಣಕ್ಕಾಗಿ ಕೊರೊನಾ ಸೋಂಕು ಅತಿ ವೇಗವಾಗಿ ಹರಡಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಹೀಗಾಗಿ, ದೇಶೀಯ ವಿಮಾನ ಯಾನವನ್ನೂ ಹಲವೆಡೆ ಸ್ಥಗಿತಗೊಳಿಸಲಾಗಿದೆ.

ಬೀಜಿಂಗ್‌ನ ರಾಫಲ್ಸ್ ಸಿಟಿ ಮಾಲ್‌ನಲ್ಲಿ ಕೊರೊನಾ ಸೋಂಕಿತ ವ್ಯಕ್ತಿ ಇರೋದು ದೃಢಪಟ್ಟ ಕೂಡಲೇ ಅಧಿಕಾರಿಗಳು ಅಲ್ಲಿನ ಎಲ್ಲ ಸಿಬ್ಬಂದಿ ಹಾಗೂ ಗ್ರಾಹಕರನ್ನು ಪರೀಕ್ಷೆಗೆ ಒಳಪಡಿಸಿದ ಬಳಿಕವೇ ಎಲ್ಲರನ್ನೂ ಹೊರಗೆ ಹೋಗಲು ಬಿಟ್ಟರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಚೀನಾದ ಸ್ಥಳೀಯ ಸಾಮಾಜಿಕ ಜಾಲತಾಣ ವಿಬೋನಲ್ಲೂ ಈ ಕುರಿತಾದ ವಿಡಿಯೋಗಳನ್ನು ಶೇರ್‌ ಮಾಡಲಾಗಿದೆ. ಮಾಸ್ಕ್ ಧರಿಸಿದ್ದ ಮಾಲ್ ಸಿಬ್ಬಂದಿ ಹಾಗೂ ಗ್ರಾಹಕರನ್ನು ಸಾಲಾಗಿ ನಿಲ್ಲಿಸಿ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಿದ ದೃಶ್ಯ ವೈರಲ್ ಆಗಿದೆ.

ಚೀನಾದ ಈಶಾನ್ಯ ಭಾಗದಲ್ಲಿ ಇರುವ ಜಿಲಿನ್ ಎಂಬ ಪ್ರಾಂತ್ಯದಿಂದ ರಾಜಧಾನಿ ಬೀಜಿಂಗ್‌ಗೆ ಬಂದ ಹಲವರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಬೀಜಿಂಗ್ ಕೇಂದ್ರ ಪ್ರದೇಶದಲ್ಲೇ 6 ಹೊಸ ಸೋಂಕಿತರು ಪತ್ತೆಯಾಗಿದ್ದು, ಇಲ್ಲಿನ ಚೆಯಾಂಗ್ ಹಾಗೂ ಹೈದಿನ್ ಎಂಬ ಪ್ರಾಂತ್ಯಗಳಲ್ಲಿ ಕೊರೊನಾ ಆರ್ಭಟ ಹೆಚ್ಚಾಗಿದೆ.

ಬೀಜಿಂಗ್‌ನ ಡಾಂಗ್ಚೆಂಗ್ ಎಂಬಲ್ಲಿ ಇರುವ ರಾಫಲ್ಸ್ ಸಿಟಿ ಮಾಲ್‌ ಸೇರಿದಂತೆ ಹಲವು ಮಾಲ್‌ಗಳು, ವಾಣಿಜ್ಯ ಕೇಂದ್ರಗಳನ್ನು ಬುಧವಾರದಿಂದಲೇ ಬಂದ್ ಮಾಡಲಾಗಿದೆ. ಮಾಲ್‌ಗೆ ಕೊರೊನಾ ಪಾಸಿಟಿವ್ ಇದ್ದ ವ್ಯಕ್ತಿ ಬಂದಿದ್ದ ಹಿನ್ನೆಲೆಯಲ್ಲಿ ಆತನೊಂದಿಗೆ ಪ್ರಾಥಮಿಕ ಸಂಪರ್ಕ ಇರಬಹುದಾದ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗಿದೆ.

English summary
China is battling its biggest COVID-19 outbreak caused by the highly transmissible Delta variant, with some areas restricting entry by people from a northeastern city where infections have grown faster than elsewhere in the country in the past week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X