• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೊದಲ ಬಾರಿಗೆ ಕೊರೊನಾವೈರಸ್ ಲಸಿಕೆಯನ್ನು ಪ್ರದರ್ಶಿಸಿದ ಚೀನಾ

|

ಬೀಜಿಂಗ್, ಸೆಪ್ಟೆಂಬರ್ 07: ಚೀನಾವು ಇದೇ ಮೊದಲ ಬಾರಿಗೆ ಕೊರೊನಾ ಲಸಿಕೆಯನ್ನು ಎಲ್ಲರಿಗೂ ಪರಿಚಯಿಸಿದೆ.

   Corona ಅಂಕಿ ಅಂಶಗಳಲ್ಲಿ ಕಂಡ ಏಕೈಕ ಪಾಸಿಟಿವ್ ಸುದ್ದಿ | Oneindia Kannada

   ಗಡಿಯಲ್ಲಿ ಚೀನಾದ ರಸ್ತೆ: ಭಾರತದ ಆತಂಕಕ್ಕೆ ಕಾರಣವೇನು?

   ಚೀನಾ ತಮ್ಮ ಸ್ವದೇಶಿ ಕೊರೊನಾವೈರಸ್ ಲಸಿಕೆಯನ್ನು ಮೊದಲ ಬಾರಿಗೆ ಪ್ರದರ್ಶನಕ್ಕಿಟ್ಟಿದೆ. ಸಾಂಕ್ರಾಮಿಕ ರೋಗ ಪತ್ತೆಯಾದ ದೇಶದಲ್ಲಿ ಅದನ್ನು ಹೋಗಲಾಡಿಸಲು ಔಷಧವನ್ನೂ ಕೂಡ ಹೊಂದಿದ್ದೇವೆ ಎಂದು ಹೇಳಿಕೊಂಡಿದೆ.

   ಬೀಜಿಂಗ್‌ನಲ್ಲಿ ಈ ಲಸಿಕೆಯನ್ನು ಪ್ರದರ್ಶಿಸಲಾಯಿತು. ಚೀನಾದ ಕಂಪನಿಗಳಾದ ಸಿನೋವಾಕ್ ಬಯೋಟೆಕ್, ಸಿನೋಫಾರ್ಮ್ ಲಸಿಕೆಯನ್ನು ತಯಾರಿಸಿದ ಅಭ್ಯರ್ಥಿಗಳಾಗಿವೆ.

   China Displays Contrys Covid 19 Vaccines For First Time

   ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

   ಇವರೆಡೂ ಇನ್ನೂ ಮಾರುಕಟ್ಟೆಯನ್ನು ತಲುಪಿಲ್ಲ. ವರ್ಷಾಂತ್ಯದಲ್ಲಿ ಎಲ್ಲಾ ಪ್ರಮುಖ ಮೂರು ಹಂತಗಳ ಪ್ರಯೋಗ ಮುಗಿದ ಬಳಿಕ ಅನುಮೋದನೆ ನೀಡಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.

   ಸಿನೋವಾಕ್ ಲಸಿಕೆ ಕಾರ್ಖಾನೆ ಕಾರ್ಯವನ್ನು ಪೂರ್ಣಗೊಳಿಸಿದೆ. ಈಗಾಗಲೇ 300ಮಿಲಿಯನ್ ಡೋಸ್ ಉತ್ಪಾದಿಸುವ ಗುರಿ ಹೊಂದಿದೆ.

   ವಿಶ್ವದಾದ್ಯಂತ 10 ಕೊರೊನಾ ಲಸಿಕೆಗಳು ಮೂರನೇ ಹಂತದ ಪ್ರಯೋಗವನ್ನು ತಲುಪಿದೆ. ಪ್ರತಿ ಡೋಸ್‌ಗೆ 1 ಸಾವಿರ ಯುಆನ್ ನೀಡಬೇಕಾಗುತ್ತದೆ. 5.7 ಬಿಲಿಯನ್ ಲಸಿಕೆಗೆ ಈಗಾಗಲೇ ಆರ್ಡರ್ ಬಂದಿದೆ.ಚೀನಾದ ಕೊವಿಡ್ 19 ಲಸಿಕೆ ವರ್ಷಾಂತ್ಯಕ್ಕೆ ಲಭ್ಯವಾಗಲಿದೆ ಎಂದು ಚೀನಾದ ಔಷಧೀಯ ಕಂಪನಿ ಸಿನೋಫಾರ್ಮ್ ತಿಳಿಸಿದೆ.

   ಸಿನೋಫಾರ್ಮ್ ಮುಖ್ಯಸ್ಥ ಲಿಯು ಜಿಂಗ್‌ಸೆನ್ ಈ ಕುರಿತು ಮಾಹಿತಿ ನೀಡಿದ್ದಾರೆ. ಒಂದು ಲಸಿಕೆಗೆ 1 ಸಾವಿರ ಯುವಾನ್‌ ಅಷ್ಟು ವೆಚ್ಚ ತಗುಲಲಿದೆ, ಎರಡು ಶಾಟ್ಸ್ ನೀಡಲಾಗುತ್ತದೆ. 28 ದಿನಗಳಲ್ಲಿ ಎರಡು ಡೋಸ್ ನೀಡಲಾಗುತ್ತೆ.

   ಪ್ರಮುಖನಗರಗಳಲ್ಲಿರುವ ಮಕ್ಕಳು ಹಾಗೂ ನೌಕರರು ಲಸಿಕೆ ಪಡೆಯುತ್ತಾರೆ, ಆದರೆ ಹಳ್ಳಿ ಪ್ರದೇಶಗಳಿಗೆ ತಲುಪುವುದು ಕಷ್ಟ ಎಂದಿದ್ದಾರೆ.

   ಚೀನಾ ನ್ಯಾಷನಲ್ ಫಾರ್ಮಾಸ್ಯುಟಿಕಲ್ ಗ್ರೂಪ್ (ಸಿನೊಫಾರ್ಮ್) ಯ ಘಟಕವು ಅಭಿವೃದ್ಧಿಪಡಿಸಿದ ಕೊರೊನಾವೈರಸ್ ಲಸಿಕೆ ಸುರಕ್ಷಿತ ಎಂದು ಸಂಶೋಧಕರು ತಿಳಿಸಿದ್ದಾರೆ. ಆ ಲಸಿಕೆಯಲ್ಲಿ ರೋಗ ನಿರೋಧಕ ಲಕ್ಷಣ ಕಂಡುಬಂದಿದೆ.

   English summary
   China has put its homegrown coronavirus vaccines on display for the first time, as the country where the contagion was discovered looks to shape the narrative surrounding the pandemic.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X