ಹಿಂದೂ ಮಹಾಸಾಗರದಲ್ಲಿ ಚೀನಾದಿಂದ ಜಲಾಂತರ್ಗಾಮಿ ಗ್ಲೈಡರ್ ಡ್ರೋನ್‌ಗಳ ನಿಯೋಜನೆ

ಬೀಜಿಂಗ್, ಡಿಸೆಂಬರ್ 31: ಹಿಂದೂ ಮಹಾಸಾಗರದಲ್ಲಿ ಚೀನಾವು ಸೀ ವಿಂಗ್ (ಹೈಯಿ) ಎಂಬ ಹೆಸರಿನ ಜಲಾಂತರ್ಗಾಮಿ ಗ್ಲೈಡರ್ ಡ್ರೋನ್‌ಗಳನ್ನು ನಿಯೋಜಿಸಿದೆ ಎಂದು ರಕ್ಷಣಾ ವಿಶ್ಲೇಷಕ ಎಚ್‌ಐ ಸುಟ್ಟಾನ್ ಹೇಳಿದ್ದಾರೆ. ಈ ಡ್ರೋನ್‌ಗಳು ಹಲವು ತಿಂಗಳವರೆಗೆ ಕಾರ್ಯಾಚರಣೆ ನಡೆಸಬಲ್ಲವಾಗಿದ್ದು, ನೌಕಾ ಬೇಹುಗಾರಿಕೆ ಉದ್ದೇಶದ ಚಟುವಟಿಕೆಗಳಿಗೆ ಬಳಕೆಯಾಗಲಿದೆ.

'ಚೀನೀಯರು ಸಾಮೂಹಿಕವಾಗಿ ನಿಯೋಜಿಸಿರುವ ಈ ಸಮುದ್ರ ಗ್ಲೈಡರ್‌ಗಳು ಸಿಬ್ಬಂದಿ ರಹಿತ ಜಲಾಂತರ್ಗಾಮಿ ವಾಹನಗಳ (ಯುಯುವಿ) ಮಾದರಿಯದ್ದಾಗಿವೆ. 2019ರ ಡಿಸೆಂಬರ್ ಮಧ್ಯಭಾಗದಲ್ಲಿ ಅವುಗಳನ್ನು ನಿಯೋಜಿಸಲಾಗಿತ್ತು. 3,400ಕ್ಕೂ ಅಧಿಕ ಗ್ರಹಿಕೆಗಳನ್ನು ಪಡೆದುಕೊಂಡ ಬಳಿಕ ಫೆಬ್ರವರಿಯಲ್ಲಿ ಅವುಗಳನ್ನು ಮರಳಿ ಪಡೆದುಕೊಳ್ಳಲಾಗಿತ್ತು' ಎಂದು ಅವರು ಫೋರ್ಬ್ಸ್‌ ನಿಯತಕಾಲಿಕೆಯಲ್ಲಿ ಬರೆದಿದ್ದಾರೆ.

ಈ ಗ್ಲೈಡರ್‌ಗಳು ಅಮೆರಿಕದ ನೌಕಾಪಡೆ ನಿಯೋಜಿಸಿದ ಗ್ಲೈಡರ್‌ಗಳನ್ನೇ ಹೋಲುತ್ತವೆ. ಹಡಗುಗಳ ಸಾಗಣೆಗೆ ಸುರಕ್ಷಿತ ದಿಕ್ಸೂಚಿಯನ್ನಾಗಿ ಬಳಸಿಕೊಂಡಿದ್ದ ಅಮೆರಿಕದ ಈ ಗ್ಲೈಡರ್ ಅನ್ನು 2016ರಲ್ಲಿ ಬೀಜಿಂಗ್ ವಶಪಡಿಸಿಕೊಂಡಿತ್ತು. ಗ್ಲೈಡರ್‌ಗಳ ಮುಖಬೆಲೆಯನ್ನು ಗಮನಿಸಿದಾಗ ಹಿಂದೂ ಮಹಾಸಾಗರದಲ್ಲಿ ಸಾಮೂಹಿಕವಾಗಿ ಇಂತಹ ಯುಯುವಿಗಳನ್ನು ಚೀನಾ ನಿಯೋಜಿಸುತ್ತಿರುವುದು ಅಚ್ಚರಿ ಮೂಡಿಸುತ್ತಿದೆ. ಆರ್ಕ್‌ಟಿಕ್‌ನಲ್ಲಿ ಕೂಡ ಸೀ ವಿಂಗ್‌ಗಳನ್ನು ಚೀನಾ ನಿಯೋಜಿಸಿದೆ ಎಂದು ಅವರು ಹೇಳಿದ್ದಾರೆ.

China Deploying Sea Wing Underwater Glider Drones In Indian Ocean

ಕಳೆದ ವರ್ಷದ ಡಿಸೆಂಬರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಂದೂ ಮಹಾಸಾಗರದಲ್ಲಿ 14 ಯುಯುವಿಗಳನ್ನು ನಿಯೋಜಿಸಲಾಗುವುದು ಎನ್ನಲಾಗಿತ್ತು. ಆದರೆ 12ನ್ನು ಬಳಸಲಾಗಿತ್ತು. ಈ ಗ್ಲೈಡರ್‌ಗಳು ಸುದೀರ್ಘ ಅವಧಿಯವರೆಗೆ ಸಾಗಲು ನೆರವಾಗುವ ಬೃಹತ್ ರೆಕ್ಕೆಗಳನ್ನು ಹೊಂದಿವೆ. ಇವು ಅತ್ಯಂತ ವೇಗವಾಗಿ ಚಲಿಸದೆ ಹೋದರೂ ಹೆಚ್ಚಿನ ವ್ಯಾಪ್ತಿಯನ್ನು ಸಾಗುವ ಸಾಮರ್ಥ್ಯ ಹೊಂದಿವೆ.

ಸೀ ವಿಂಗ್‌ಗಳು ವಾಹಕತೆ, ಉಷ್ಣತೆ ಮತ್ತು ಆಳದ (ಸಿಡಿಟಿ) ಸೆನ್ಸಾರ್‌ಗಳನ್ನಲ್ಲದೆ, ಟರ್ಬ್ಯುಲೆನ್ಸ್ ಮೀಟರ್, ಟರ್ಬಿಮೀಟರ್, ಕ್ಲೋರೊಫಿಲ್ ಸೆನ್ಸಾರ್, ಡಿಸಾಲ್ವಡ್ ಆಕ್ಸಿಜನ್ ಸೆನ್ಸಾರ್, ನೈಟ್ರೇಟ್ ಮತ್ತು ಇತರೆ ಜೀವ ರಾಸಾಯನಿಕ ಸೆನ್ಸಾರ್‌ಗಳನ್ನು ಕೊಂಡೊಯ್ಯಬಲ್ಲದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+