ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಡಿಯಿಂದ ಪಡೆಗಳನ್ನು ವಾಪಸ್ ಕರೆಸಿ; ಚೀನಾ ಬೇಡಿಕೆ

|
Google Oneindia Kannada News

ಬೀಜಿಂಗ್, ಆಗಸ್ಟ್ 31: ಅಂತರಾಷ್ಟ್ರೀಯ ಗಡಿಯಲ್ಲಿ ಭಾರತ ನಿಯೋಜನೆ ಮಾಡಿರುವ ಪಡೆಗಳನ್ನು ವಾಪಸ್ ಕರೆಸಿಕೊಳ್ಳಬೇಕು ಎಂದು ಚೀನಾ ಬೇಡಿಕೆ ಇಟ್ಟಿದೆ. ಗಡಿಯಲ್ಲಿ ಸೌಹಾರ್ಹತೆ ಕಾಪಾಡಲು ಚೀನಾ ಸಹ ಕ್ರಮ ಕೈಗೊಳ್ಳಲಿದೆ ಎಂದು ಚೀನಾ ಮಿಲಟರಿ ವಕ್ತಾರರು ಹೇಳಿದ್ದಾರೆ.

Recommended Video

China ಗಡಿಗೆ ಎಂಟ್ರಿ ಕೊಟ್ಟ ಭಾರತೀಯ ಸೇನೆ | Oneindia Kannada

ಸೋಮವಾರ ಚೀನಾ ಸೇನಾ ವಕ್ತಾರರು ಭಾರತ ಅಕ್ರಮವಾಗಿ ಗಡಿ ರೇಖೆಯನ್ನು ದಾಟಿ ಬಂದಿದೆ ಎಂದು ಹೇಳಿದ್ದಾರೆ. ಭಾರತ ತಕ್ಷಣ ಪಡೆಯನ್ನು ವಾಪಸ್ ಕರೆಸಿಕೊಳ್ಳಬೇಕು ಎಂದು ಬೇಡಿಕೆ ಇಡಲಾಗಿದೆ.

ಪ್ಯಾಂಗ್ಯಾಂಗ್ ಸರೋವರದ ಬಳಿ ಕ್ಯಾತೆ: ಭಾರತಕ್ಕೆ ಚೀನಾ ನೀಡಿದ ಸ್ಪಷ್ಟನೆ ಪ್ಯಾಂಗ್ಯಾಂಗ್ ಸರೋವರದ ಬಳಿ ಕ್ಯಾತೆ: ಭಾರತಕ್ಕೆ ಚೀನಾ ನೀಡಿದ ಸ್ಪಷ್ಟನೆ

ಪೂರ್ವ ಲಡಾಖ್‌ನ ಪ್ಯಾಂಗೋಂಗ್ ತ್ಸೋ ಪ್ರದೇಶದಲ್ಲಿ ಚೀನಾ ವಾರಾಂತ್ಯದಲ್ಲಿ ಚಟುವಟಿಕೆ ನಡೆಸಿದೆ. ಚೀನಾ ಸೇನೆಯ ಯೋಧರು ಸಂಚಾರ ನಡೆಸಿದ್ದಾರೆ ಎಂದು ಭಾರತ ಹೇಳಿದೆ.

ಗಡಿಯಲ್ಲಿ ಚೀನಾ ಗಾಂಚಾಲಿ: ಶ್ರೀನಗರದ ಗೌಪ್ಯ ರಸ್ತೆಯಲ್ಲಿ ಸಂಚಾರ ಬಂದ್! ಗಡಿಯಲ್ಲಿ ಚೀನಾ ಗಾಂಚಾಲಿ: ಶ್ರೀನಗರದ ಗೌಪ್ಯ ರಸ್ತೆಯಲ್ಲಿ ಸಂಚಾರ ಬಂದ್!

China Demands India To Withdraw Troops From LAC

ಗಡಿಯಲ್ಲಿ ಯಥಾಸ್ಥಿತಿಯನ್ನು ಕಾಪಾಡಬೇಕು. ಅಂತರಾಷ್ಟ್ರೀಯ ಗಡಿಯಲ್ಲಿ ಶಾಂತಿ ಕಾಪಾಡಲು ಭಾರತ ಬದ್ಧವಾಗಿದೆ ಎಂದು ಸೇನೆ ಹೇಳಿದೆ. ಚೀನಾ ಸೈನಿಕರ ಅತಿಕ್ರಮಣವನ್ನು ಭಾರತ ವಿಫಲಗೊಳಿಸಿದೆ ಎಂದು ಸೇನೆ ಹೇಳಿದ್ದು, ಈ ಸಂದರ್ಭದಲ್ಲಿ ಯಾವುದೇ ಘರ್ಷಣೆ ನಡೆದಿಲ್ಲ.

ಲಡಾಖ್ ಗಡಿಯಲ್ಲಿ ಭಾರತವನ್ನು ಕೆರಳಿಸಿದ ಚೀನಾ ಸೇನೆ ಲಡಾಖ್ ಗಡಿಯಲ್ಲಿ ಭಾರತವನ್ನು ಕೆರಳಿಸಿದ ಚೀನಾ ಸೇನೆ

ಆಗಸ್ಟ್ 29 ಮತ್ತು 30ರಂದು ಪೂರ್ವ ಲಡಾಖ್‌ನ ಪ್ಯಾಂಗೋಂಗ್ ತ್ಸೋ ಪ್ರದೇಶದಲ್ಲಿ ಚೀನಾದ ಪಡೆಗಳು ವಾಸ್ತವಿಕ ಪರಿಸ್ಥಿತಿಯನ್ನು ಬದಲಾವಣೆ ಮಾಡಲು ಪ್ರಚೋದನಾಕಾರಿ ಪ್ರಯತ್ನವನ್ನು ನಡೆಸಿವೆ.

ಉಭಯ ದೇಶಗಳ ನಡುವೆ ಮಿಲಿಟರಿ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ನಡೆದಿದ್ದ ಸಭೆಯಲ್ಲಿ ಮೂಡಿದ್ದ ಒಮ್ಮತಾಭಿಪ್ರಾಯವನ್ನು ಚೀನಾ ಉಲ್ಲಂಘನೆ ಮಾಡಿದೆ ಎಂದು ಭಾರತ ಆರೋಪಿಸಿದೆ.

ಜೂನ್ 5ರಂದು ಗಾಲ್ವನ್ ಕಣಿಯಲ್ಲಿ ಭಾರತ-ಚೀನಾ ಸೈನಿಕರ ನಡುವೆ ಘರ್ಷಣೆ ನಡೆದಿತ್ತು. ಬಳಿಕ ಗಡಿಯಲ್ಲಿ ಶಾಂತಿ ಕಾಪಾಡಲು ಎರಡೂ ದೇಶಗಳ ನಡುವೆ ಮಿಲಿಟರಿ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆ ನಡೆದಿತ್ತು.

English summary
China has demanded India to withdraw troops. Countermeasures will take to safeguard its territorial sovereignty China military spokesman said on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X