ಪಾಕ್ ಗೆ ನೀಡುತ್ತಿರುವ ನೆರವೇನು ಎಂದು ಬಹಿರಂಗ ಪಡಿಸಲು ಚೀನಾ ನಕಾರ

ಬೀಜಿಂಗ್, ನವೆಂಬರ್ 7: ಪಾಕಿಸ್ತಾನಕ್ಕೆ ನೀಡಲಿರುವ ಆರ್ಥಿಕ ನೆರವಿನ ಮಾಹಿತಿ ತಿಳಿಸಲು ಚೀನಾ ನಿರಾಕರಿಸಿದೆ. ನವೆಂಬರ್ 2ರಿಂದ 5ರ ತನಕ ಚೀನಾಕ್ಕೆ ಭೇಟಿ ನೀಡಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಗ್ ಹಾಗೂ ಪ್ರಧಾನಿ ಲೀ ಕೆಕಿಯಂಗ್ ಜತೆ ಮಾತುಕತೆ ನಡೆಸಿದ್ದಾರೆ.

ವಿತ್ತೀಯ ಕೊರತೆ ಸೇರಿದಂತೆ ನಗದು ಸಮಸ್ಯೆ ಎದುರಿಸುತ್ತಿರುವ ಪಾಕಿಸ್ತಾನ ತೀವ್ರ ಆರ್ಥಿಕ ಸಂಕಷ್ಟದಲ್ಲಿದೆ. ಈ ಹಿನ್ನೆಲೆಯಲ್ಲಿ ವಿವಿಧ ದೇಶಗಳ ಎದುರು ಆರ್ಥಿಕ ನೆರವಿಗಾಗಿ ಇಮ್ರಾನ್ ಖಾನ್ ನಿಲ್ಲುತ್ತಿದ್ದಾರೆ. ಸದ್ಯಕ್ಕೆ ಕೇಳಿಬರುತ್ತಿರುವ ಮಾಹಿತಿ ಪ್ರಕಾರ, ಈ ಬೇಟಿ 'ಅತ್ಯಂತ ಯಶಸ್ವಿ' ಎನ್ನಲಾಗುತ್ತಿದೆ.

ಕಳೆದ ತಿಂಗಳು ಸೌದಿ ಅರೇಬಿಯಾಕ್ಕೆ ಇಮ್ರಾನ್ ಖಾನ್ ಭೇಟಿ ನೀಡಿದ್ದರು. ಆಗ ಪಾಕಿಸ್ತಾನದ ವಿತ್ತೀಯ ಕೊರತೆಗಾಗಿ 3 ಬಿಲಿಯನ್ ಅಮೆರಿಕನ್ ಡಾಲರ್ ಹಾಗೂ ಸಾಲದ ರೂಪದಲ್ಲಿ 3 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟು ತೈಲ ಒದಗಿಸಲು ಒಪ್ಪಲಾಗಿತ್ತು.

China declines to reveal details of financial aid planned for Pakistan: Report

ಈ ಹಿಂದೆ ಪಾಕಿಸ್ತಾನದ ವರದಿ ಪ್ರಕಾರ, ಅದೇ ಪ್ರಮಾಣದ ಮೊತ್ತ ನೀಡಲು ಬೀಜಿಂಗ್ ಮಾತು ನೀಡಿತ್ತು. ಆದರೆ ಈ ಬಗ್ಗೆ ಯಾವುದನ್ನೂ ಚೀನಾ ಅಧಿಕಾರಿಗಳು ಖಾತ್ರಿ ಪಡಿಸಿಲ್ಲ. ಪಾಕಿಸ್ತಾನಿ ಅಧಿಕಾರಿಗಳ ತಂಡವು ನವೆಂಬರ್ ಒಂಬತ್ತನೇ ತಾರೀಕು ಚೀನಾವನ್ನು ತಲುಪಲಿದ್ದು, ಒಪ್ಪಂದ ಅಂತಿಮಗೊಳಿಸುತ್ತದೆ.

ನಮ್ಮಿಂದ ಎಷ್ಟು ಸಾಧ್ಯವೋ ಆ ಪ್ರಮಾಣದಲ್ಲಿ ಪಾಕಿಸ್ತಾನಕ್ಕೆ ನೆರವು ನೀಡುತ್ತೇವೆ. ಭವಿಷ್ಯದಲ್ಲಿ ಕೂಡ ಪಾಕಿಸ್ತಾನ ಜನರ ಸಲುವಾಗಿ ಆರ್ಥಿಕವಾದ ಸಹಾಯ ಮಾಡುತ್ತೇವೆ. ಪಾಕಿಸ್ತಾನ ನಮಗೆ ಮಿತ್ರ ದೇಶ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಈಚೆಗೆ ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲೂ ನೆರವಿಗಾಗಿ ಪಾಕಿಸ್ತಾನ ಪ್ರಯತ್ನಿಸಿತ್ತು. ಪಾಕಿಸ್ತಾನದ ಮಾಧ್ಯಮಗಳ ಪ್ರಕಾರ ಚೀನಾವು 6 ಬಿಲಿಯನ್ ಅಮೆರಿಕನ್ ಡಾಲರ್ ನೆರವು ನೀಡಲು ಒಪ್ಪಿದೆ. ಅದರಲ್ಲಿ 1.5 ಬಿಲಿಯನ್ ಡಾಲರ್ ಸಾಲ ಹಾಗೂ 3 ಬಿಲಿಯನ್ ಡಾಲರ್ ಎಕನಾಮಿಕ್ ಕಾರಿಡಾರ್ ಗೆ ಹೆಚ್ಚುವರಿ ಪ್ಯಾಕೇಜ್ ಒಳಗೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+