“ಇಂದು ರಾತ್ರಿಯಿಂದ ದಂಪತಿ ಪ್ರತ್ಯೇಕವಾಗಿ ಮಲಗಬೇಕು"
ಚೀನಾದಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚಾದಂತೆ, ಆರ್ಥಿಕ ರಾಜಧಾನಿ ಶಾಂಘೈ ಸೇರಿದಂತೆ ಕೆಲವು ಪ್ರಮುಖ ನಗರಗಳಲ್ಲಿ ದೇಶವು ಕಟ್ಟುನಿಟ್ಟಾದ ಲಾಕ್‌ಡೌನ್‌ಗಳನ್ನು ವಿಧಿಸಲಾಗಿದೆ. 26 ದಶಲಕ್ಷಕ್ಕೂ ಹೆಚ್ಚು ಜನರಿರುವ ಶಾಂಘೈ ನಗರದಲ್ಲಿ ಕಳೆದ ಕೆಲವು ವಾರಗಳಿಂದ ಅತಿ ಹೆಚ್ಚು ದೈನಂದಿನ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಹೀಗಾಗಿ ಹೊಸ ಕೊರೊನವೈರಸ್ ಪ್ರಕರಣಗಳನ್ನು ಕಡಿಮೆ ಮಾಡಲು ನಗರದಲ್ಲಿ ಕಟ್ಟುನಿಟ್ಟಾದ ನಿಯಮಗಳು ಮತ್ತು ನಿರ್ಬಂಧಗಳನ್ನು ಜಾರಿಗೆ ತರಲಾಗಿದೆ.
ಇದೀಗ ಲಾಕ್‌ಡೌನ್ ಮಧ್ಯೆ ದೇಶದ ಕ್ರೇಜಿ ನಿಯಮಗಳ ಬಗ್ಗೆ ನಗರದ ನಾಗರಿಕರು ಟ್ವಿಟ್ ಮಾಡಿದ್ದಾರೆ. ಆಕಾಶದಲ್ಲಿ ಡ್ರೋನ್‌ಗಳ ಮೂಲಕ ಕೋವಿಡ್ ಘೋಷಣೆಗಳನ್ನು ಮಾಡಲಾಗುತ್ತಿದೆ ಎಂದು ವೀಡಿಯೊಗಳನ್ನು ಹಂಚಿಕೊಳ್ಳಳಾಗುತ್ತಿದೆ. ಜೊತೆಗೆ ಕೆಲ ಕ್ರೇಜಿ ನಿರ್ಬಂಧಗಳನ್ನು ಹೇರಲಾಗಿದೆ.
As seen on Weibo: Shanghai residents go to their balconies to sing & protest lack of supplies. A drone appears: “Please comply w covid restrictions. Control your soul’s desire for freedom. Do not open the window or sing.” https://t.co/0ZTc8fznaV pic.twitter.com/pAnEGOlBIh
— Alice Su (@aliceysu) April 6, 2022
ಸ್ಥಳೀಯ ಪತ್ರಕರ್ತರೊಬ್ಬರು ವೀಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಸರ್ಕಾರದ ಕೆಲ ಸಿಬ್ಬಂದಿ ಧ್ವನಿವರ್ಧಕಗಳ ಮೂಲಕ ಸಾರ್ವಜನಿಕರಿಗೆ ಸಂದೇಶಗಳನ್ನು ನೀಡುತ್ತಿದ್ದಾರೆ. "ನಿಮ್ಮ ಸ್ವಾತಂತ್ರ್ಯದ ಬಯಕೆಯನ್ನು ನಿಯಂತ್ರಿಸಿ" ಎಂದು ಸ್ಥಳೀಯರಿಗೆ ಹೇಳುತ್ತಿದ್ದಾರೆ ಎಂದು ಬರೆದಿದ್ದಾರೆ. ಶಾಂಘೈ ನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಶಾಂಘೈ ಅಪಾರ್ಟ್ಮೆಂಟ್ ನಿಂದ ಜನ ಹೊರಬಾರದಂತೆ ನಿರ್ಬಂಧಿಸಲಾಯಿತು. ಹೀಗಾಗಿ ಇಲ್ಲಿನ ನಿವಾಸಿಗಳು ಈ ವಾರ ಒಟ್ಟಾಗಿ ಸೇರಿ ತಮ್ಮ ಬಾಲ್ಕನಿಯಲ್ಲಿ ನಿಂತು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆಗೆ ಮುಂದಾದರು. ಈ ವೇಳೆ ಡ್ರೋನ್ ಹಾರಿಸುವ ಮೂಲಕ ಸಂದೇಶವನ್ನು ಸರ್ಕಾರ ಪ್ರಸಾರ ಮಾಡಿದೆ. ಜೊತೆಗೆ ಆರೋಗ್ಯ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ "ತಮ್ಮ ಬಯಕೆಗಳನ್ನು ನಿಯಂತ್ರಿಸಿ ಮತ್ತು ಹಾಡಲು ಕಿಟಕಿಯನ್ನು ತೆರೆಯಬೇಡಿ. ಈ ನಡವಳಿಕೆಯು ಸಾಂಕ್ರಾಮಿಕ ರೋಗವನ್ನು ಹರಡುವ ಅಪಾಯವನ್ನು ಹೊಂದಿದೆ" ಎನ್ನುವ ಸಂದೇಶವನ್ನು ನೀಡಿದ್ದಾರೆ.

ಸ್ಥಳೀಯರು ಹಂಚಿಕೊಂಡ ಮತ್ತೊಂದು ವಿಡಿಯೋದಲ್ಲಿ ಚೀನಾದಲ್ಲಿ ಹೊಸ ನಿಯಮಗಳ ಬಗ್ಗೆ ತೋರಿಸಲಾಗಿದೆ. ಆರೋಗ್ಯ ಕಾರ್ಯಕರ್ತರು ಗಲ್ಲಿಗಲ್ಲಿಗಳಲ್ಲಿ ಧ್ವನಿವರ್ದಕಗಳ ಮೂಲಕ "ಇಂದು ರಾತ್ರಿಯಿಂದ ದಂಪತಿಗಳು ಪ್ರತ್ಯೇಕವಾಗಿ ಮಲಗಬೇಕು, ಚುಂಬಿಸಬಾರದು, ಅಪ್ಪಿಕೊಳ್ಳಬಾರದು, ಇದನ್ನು ಅನುಮತಿಸಲಾಗುವುದಿಲ್ಲ ಮತ್ತು ಪ್ರತ್ಯೇಕವಾಗಿ ತಿನ್ನಬೇಕು" ಎನ್ನುವ ಸಂದೇಶಗಳನ್ನು ರವಾನಿಸುತ್ತಿದ್ದಾರೆ.
This is more funny. “From tonight, couple should sleep separately, don’t kiss, hug is not allowed, and eat separately. Thank you for your corporation! “ pic.twitter.com/ekDwLItm7x
— Wei Ren (@WR1111F) April 6, 2022
ಕೋವಿಡ್ ನಿಯಂತ್ರಣ ಮಾಡಲು ಚೀನಾ ಸರ್ಕಾರ ಇಂಥಹ ನಿರ್ಬಂಧಗಳನ್ನು ಹೇರಿದೆ. ಜೊತೆಗೆ ಅಧಿಕಾರಿಗಳು ಈಶಾನ್ಯದಲ್ಲಿ ಲಕ್ಷಾಂತರ ನಿವಾಸಿಗಳೊಂದಿಗೆ ಕೈಗಾರಿಕಾ ನಗರಗಳಾದ ಚಾಂಗ್‌ಚುನ್ ಮತ್ತು ಜಿಲಿನ್‌ಗೆ ಪ್ರವೇಶವನ್ನು ನಿರ್ಬಂಧಿಸುವ ನಿರ್ಬಂಧಗಳನ್ನು ಜಾರಿಗೊಳಿಸುತ್ತಿದ್ದಾರೆ. ಈ ಹಿಂದೆ ನಾಲ್ಕು ಕಾಲಿನ ರೋಬೋಟ್‌ಗಳು ಶಾಂಘೈನ ಬೀದಿಗಳಲ್ಲಿ ಗಸ್ತು ತಿರುಗುತ್ತಿರುವುದನ್ನು ವೀಡಿಯೊಗಳು ತೋರಿಸಿದ್ದವು. ರೋಬೋಗಳ ಮೂಲಕ ಕೋವಿಡ್ ಘೋಷಣೆಗಳನ್ನು ಮಾಡಿಸಲಾಗುತ್ತಿತ್ತು.

ಶಾಂಘೈನ ನಾಗರಿಕರು ಕೊರೊನಾವೈರಸ್ ವಿರೋಧಿ ನಿಯಂತ್ರಣಗಳ ಅಡಿಯಲ್ಲಿ ಮಾಂಸ, ಅಕ್ಕಿ ಮತ್ತು ಇತರ ಆಹಾರ ಸರಬರಾಜುಗಳನ್ನು ಪಡೆಯಲು ಹೆಣಗಾಡುತ್ತಿದ್ದಾರೆ ಎಂದು ದೂರಿದ್ದಾರೆ. ವಿಶ್ವದ ಅತ್ಯಂತ ಜನನಿಬಿಡ ಬಂದರು ಮತ್ತು ಚೀನಾದ ಮುಖ್ಯ ಷೇರು ವಿನಿಮಯ ಕೇಂದ್ರದ ತವರು ಶಾಂಘೈನಲ್ಲಿ ಸಾಕಷ್ಟು ಆಹಾರವಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ಉಪ ಮೇಯರ್ ಚೆನ್ ಟಾಂಗ್ ಅವರು ಮಾತನಾಡಿ, ಲಭ್ಯವಿರುವ ಆಹಾರವನ್ನು 100 ಮೀಟರ್ ದೂರದ ಮನೆಗಳಿಗೆ ತಲುಪಿಸುವುದು ಒಂದು ಸವಾಲಾಗಿದೆ ಎಂದು ಒಪ್ಪಿಕೊಂಡಿದ್ದಾರೆ.
Recommended Video
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications