• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹತ್ತೇ ದಿನದಲ್ಲಿ ಆಸ್ಪತ್ರೆ: ಇದು ಚೀನಾದಿಂದ ಮಾತ್ರ ಸಾಧ್ಯ!

|

ಬೀಜಿಂಗ್, ಫೆಬ್ರವರಿ 4: ಕೊರೊನಾ ವೈರಸ್‌ನಿಂದ ತತ್ತರಿಸಿರುವ ಚೀನಾದೆಡೆಗೆ ಎಲ್ಲರೂ ಆತಂಕದಿಂದ ನೋಡುತ್ತಿರುವಾಗಲೇ, ಜಗತ್ತೇ ನಿಬ್ಬೆರಗಾಗುವಂತಹ ಸಾಧನೆಯೊಂದನ್ನು ಚೀನಾ ಮಾಡಿದೆ. ಕೊರೊನಾವೈರಸ್ ದಾಳಿ ತೀವ್ರವಾಗಿರುವ ವುಹಾನ್ ಪ್ರಾಂತ್ಯದಲ್ಲಿ ಚಿಕಿತ್ಸೆಗೆ ವೈದ್ಯಕೀಯ ಸವಲತ್ತಿನ ಕೊರತೆ ಎದುರಾಗುತ್ತಿದ್ದಂತೆಯೇ ಕೇವಲ ಹತ್ತೇ ದಿನದಲ್ಲಿ ಸುಸಜ್ಜಿತ ಆಸ್ಪತ್ರೆಯನ್ನು ಚೀನಾ ಸರ್ಕಾರ ನಿರ್ಮಿಸಿದೆ.

ನಿಜ. ಕೊರೊನಾ ವೈರಸ್ ಚಿಕಿತ್ಸೆಗೆಂದೇ ಹತ್ತೇ ಹತ್ತು ದಿನಗಳಲ್ಲಿ ಚೀನಾ 1,000 ಹಾಸಿಗೆಯ ಸೌಲಭ್ಯವುಳ್ಳ ಆಸ್ಪತ್ರೆ ನಿರ್ಮಿಸಿದೆ. 30,000 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿರುವ ಹೌಶೆನ್ಶಾನ್ ಆಸ್ಪತ್ರೆಯನ್ನು ನಿರ್ಮಾಣ ಸಂಸ್ಥೆ ಭಾನುವಾರ ಬಳಕೆಗಾಗಿ ಹಸ್ತಾಂತರಿಸಿದ್ದು, ಸೋಮವಾರದಿಂದ ರೋಗಿಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ. ಇದಲ್ಲದೆ ಇನ್ನೂ ಒಂದು ಆಸ್ಪತ್ರೆಯನ್ನು ಕೊರೊನಾ ವೈರಸ್ ಚಿಕಿತ್ಸೆಗಾಗಿ ನಿರ್ಮಿಸಲಾಗುತ್ತಿದೆ.

ಆಸ್ಪತ್ರೆಯ ನಿರ್ವಹಣೆ ಮತ್ತು ಚಿಕಿತ್ಸೆಗಾಗಿ ಸಶಸ್ತ್ರ ಸೇನಾಪಡೆಯಲ್ಲಿನ 1,400 ವೈದ್ಯಕೀಯ ಸಿಬ್ಬಂದಿಯನ್ನು ವುಹಾನ್‌ಗೆ ಕರೆತರಲಾಗಿದೆ.

ಕೊರೊನಾ ವೈರಸ್ ಚಿಕಿತ್ಸೆಗಾಗಿ ಒಂದೇ ವಾರದಲ್ಲಿ ಹೊಸ ಆಸ್ಪತ್ರೆಯನ್ನೇ ನಿರ್ಮಿಸಲಿದೆ ಚೀನಾ

ಕ್ಷಿಪ್ರಗತಿಯಲ್ಲಿ ನಿರ್ಮಾಣವಾಗುತ್ತಿರುವ ಎರಡನೆಯ ಆಸ್ಪತ್ರೆ ಬುಧವಾರ ಬಳಕೆಗೆ ಲಭ್ಯವಾಗಲಿದೆ. ಇದರಿಂದ ಇತ್ತೀಚಿನ ದಿನಗಳಲ್ಲಿ ತುಂಬಿ ತುಳುಕುತ್ತಿರುವ ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ.

ಮಿಷನ್ ಇಂಪಾಸಿಬಲ್!

ಮಿಷನ್ ಇಂಪಾಸಿಬಲ್!

ತ್ವರಿತಗತಿಯಲ್ಲಿ ಆಸ್ಪತ್ರೆ ನಿರ್ಮಿಸುವ ಚೀನಾದ ಯೋಜನೆ ವಿಶ್ವದ ಗಮನ ಸೆಳೆದಿತ್ತು. ಈ ಕಟ್ಟಡ ನಿರ್ಮಾಣ ಕಾಮಗಾರಿಯ ಪ್ರಕ್ರಿಯೆಯನ್ನು ಚೀನಾದಿಂದ ನೇರಪ್ರಸಾರ ಮಾಡಲಾಗಿತ್ತು. ಅದನ್ನು 40 ಮಿಲಿಯನ್ ಜನರು ವೀಕ್ಷಿಸಿದ್ದಾರೆ ಎಂದು ಸರ್ಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್ ಪತ್ರಿಕೆ ತಿಳಿಸಿದೆ.

ಹತ್ತೇ ದಿನದಲ್ಲಿ ಯಶಸ್ವಿಯಾಗಿ ಆಸ್ಪತ್ರೆ ನಿರ್ಮಾಣ ಮಾಡಿರುವ ಸಾಹಸಗಾಥೆಯನ್ನು ಚೀನಾ ಮಾಧ್ಯಮಗಳು ಕೊಂಡಾಡಿವೆ. ಕೊರೊನಾ ವೈರಸ್ ಹಾವಳಿಯ ನಡುವೆ ತನ್ನ ಸಾಧನೆಯನ್ನು ಅವು ಬಿಂಬಿಸಿಕೊಳ್ಳುತ್ತಿದ್ದು, ಇದು 'ಮಿಷನ್ ಇಂಪಾಸಿಬಲ್' ಎಂದು ಶ್ಲಾಘಿಸಿವೆ.

ಚೀನಾ ಬಗ್ಗೆ ಅನುಮಾನ

ಚೀನಾ ಬಗ್ಗೆ ಅನುಮಾನ

ವೈರಸ್ ವ್ಯಾಪಕವಾಗಿ ಹರಡುವುದರ ವಿರುದ್ಧ ನಡೆಸಿರುವ ಸಮರದಲ್ಲಿ ಬಹುತೇಕ ಯಶಸ್ವಿಯಾಗಿರುವುದಾಗಿ ಚೀನಾ ಹೇಳಿಕೊಂಡಿದೆ. ಕೇಂದ್ರ ಹುಬೆಯಿ ಪ್ರಾಂತ್ಯದಲ್ಲಿ 50 ಮಿಲಿಯನ್ ಜನರನ್ನು ವೈರಸ್‌ನಿಂದ ರಕ್ಷಿಸಿರುವ ಪ್ರಯತ್ನವನ್ನು ವಿಶ್ವ ಆರೋಗ್ಯ ಸಂಸ್ಥೆ ಪ್ರಶಂಸಿಸಿದೆ. ಆದರೆ ವೈರಸ್ ತಡೆಯಲು ಚೀನಾ ಸಾಕಷ್ಟು ಶ್ರಮವಹಿಸಿಲ್ಲ ಎಂದು ಅನೇಕ ದೇಶಗಳು ಅಭಿಪ್ರಾಯಪಟ್ಟಿವೆ.

ತಮ್ಮ ವಿದ್ಯಾರ್ಥಿಗಳಿಗೆ ಚೀನಾದಿಂದ ಬರಬೇಡಿ ಎಂದ ಇಮ್ರಾನ್ ಖಾನ್

ಅಮೆರಿಕದೆಡೆಗೆ ಚೀನಾ ಕಿಡಿ

ಅಮೆರಿಕದೆಡೆಗೆ ಚೀನಾ ಕಿಡಿ

ಕಳೆದ ಎರಡು ವಾರಗಳಲ್ಲಿ ಚೀನಾಕ್ಕೆ ಭೇಟಿ ನೀಡಿದ್ದ ಎಲ್ಲಾ ವಿದೇಶಿ ಪ್ರಜೆಗಳು ತನ್ನ ಗಡಿಯೊಳಗೆ ಬಾರದಂತೆ ಅಮೆರಿಕ ನಿರ್ಬಂಧ ಹೇರಿದೆ. ಹಾಗೆಯೇ ಹುಬೆಯಿ ಪ್ರಾಂತ್ಯದಿಂದ ಮರಳಿರುವ ಅಮೆರಿಕದ ಪ್ರಜೆಗಳನ್ನು 14 ದಿನ ಜನ ಸಂಪರ್ಕದಿಂದ ದೂರಿವಿರಿಸಿ ನಿಗಾದಲ್ಲಿ ಇರಿಸಲಾಗಿದೆ. ಈ ಸಮಸ್ಯೆಗೆ ಅತಿಯಾದ ರೀತಿಯಲ್ಲಿ ಪ್ರತಿಕ್ರಿಯೆ ನೀಡುವ ಮೂಲಕ ಅಮೆರಿಕ ಭೀತಿ ಸೃಷ್ಟಿಸುತ್ತಿದೆ ಮತ್ತು ಭಯ ಹರಡಿಸುತ್ತಿದೆ ಎಂದು ಚೀನಾ ಆರೋಪಿಸಿದೆ.

ಹಾಂಕಾಂಗ್‌ನಲ್ಲಿ ಶುರುವಾದ ತಳಮಳ

ಈ ನಡುವೆ ಹಾಂಕಾಂಗ್‌ನಲ್ಲಿ ಆಸ್ಪತ್ರೆ ಸಿಬ್ಬಂದಿ ಸೋಮವಾರ ಪ್ರತಿಭಟನೆ ನಡೆಸಿದ್ದು, ಮುಖ್ಯ ಭೂಮಿ ಚೀನಾದೊಂದಿಗಿನ ಗಡಿಯನ್ನು ಸಂಪೂರ್ಣವಾಗಿ ಬಂದ್ ಮಾಡುವಂತೆ ಆಗ್ರಹಿಸಿದ್ದಾರೆ. ಹಾಂಕಾಂಗ್‌ನಲ್ಲಿ ಕೊರೊನಾ ವೈರಸ್‌ನ 15 ಪ್ರಕರಣಗಳು ದೃಢಪಟ್ಟಿವೆ. ಆದರೆ ವಿಮಾನ ನಿಲ್ದಾಣ ಸೇರಿದಂತೆ ಚೀನಾಕ್ಕೆ ಸಂಪರ್ಕಿಸುವ ಎಲ್ಲ ಮಾರ್ಗಗಳೂ ಓಡಾಟಕ್ಕೆ ಮುಕ್ತವಾಗಿವೆ. ಗಡಿ ಮುಚ್ಚುವ ಮೂಲಕ ಸುರಕ್ಷತೆಯ ಕ್ರಮ ತೆಗೆದುಕೊಳ್ಳದಿದ್ದರೆ ವೈರಸ್ ವ್ಯಾಪಕವಾಗುವ ಭೀತಿ ಇದ್ದು, ಅದರ ಚಿಕಿತ್ಸೆಗೆ ಅಗತ್ಯ ಮಾನವ ಸಂಪನ್ಮೂಲ, ಸಲಕರಣೆಗಳು ಅಥವಾ ಪ್ರತ್ಯೇಕ ಕೊಠಡಿಗಳ ಸೌಲಭ್ಯವಿಲ್ಲ. ಇದರಿಂದ ಅಪಾಯ ಹೆಚ್ಚುವ ಸಾಧ್ಯತೆ ಇದೆ ಎಂದು ಹಾಂಕಾಂಗ್‌ನ ಆಸ್ಪತ್ರೆ ಉದ್ಯೋಗಿಗಳ ಒಕ್ಕೂಟ ತಿಳಿಸಿದೆ.

ಕೊರೊನಾ ಭೀತಿ ನಡುವೆ ಚೀನೀ ಯುವತಿ, ಭಾರತದ ಯುವಕನ ಮದುವೆ

English summary
China has successfully built a hospital for Coronavirus treatment with 1,000 beds in just 10 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X