ದೇಶದ ಗೌಪ್ಯ ಮಾಹಿತಿ ಸೋರಿಕೆ ಅನುಮಾನ: ಆಸ್ಟ್ರೇಲಿಯಾ ಮೂಲದ ವರದಿಗಾರ್ತಿ ಬಂಧಿಸಿದ ಚೀನಾ

ಕ್ಯಾನ್ಬೆರಾ,ಫೆಬ್ರವರಿ 08: ದೇಶದ ಗೌಪ್ಯ ಮಾಹಿತಿ ಸೋರಿಕೆ ಅನುಮಾನದ ಮೇಲೆ ಚೀನಾವು ಆಸ್ಟ್ರೇಲಿಯಾ ಮೂಲದ ವರದಿಗಾರ್ತಿಯನ್ನು ಬಂಧಿಸಿದೆ.

ಚೀನಾ ಸೆಂಟ್ರಲ್ ಟೆಲಿವಿಷನ್‌ನ ಇಂಗ್ಲಿಷ ಭಾಷೆಯ ಸಿಜಿಟಿಎನ್ ವಾಹಿನಿಗಾಗಿ ಕೆಲಸ ಮಾಡುತ್ತಿದ್ದ ಆಸ್ಟ್ರೇಲಿಯಾ ಮೂಲದ ಪತ್ರಕರ್ತೆಯನ್ನು ಚೀನಾ ಬಂಧಿಸಿದೆ.

ಆಸ್ಟ್ರೇಲಿಯಾ ಮೂಲದ ವರದಿಗಾರ್ತಿ ಚೆಂಗ್ ಲೀ ಬಂಧಿತರು. ಕೊರೊನಾ ವೈರಸ್ ಮೂಲದ ಬಗ್ಗೆ ತನಿಖೆ ನಡೆಸಲು ಒತ್ತಾಯಿಸಿದ ಕಾರಣ, ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಹದಗೆಡುತ್ತಿದ್ದು, ಇದು ಕೂಡಾ ಚೆಂಗ್ ಬಂಧನಕ್ಕೆ ಕಾರಣ ಎನ್ನುವ ಮಾತುಗಳು ಕೇಳಿಬಂದಿದೆ.

 China Arrests Hunan-Born Australian Journalist For Supplying State Secrets

ಚೆಂಗ್‌ಲೀಯನ್ನು ಆರು ತಿಂಗಳ ಹಿಂದೆ ಬಂಧಿಸಲಾಗಿದ್ದು,ಕಳೆದ ಶುಕ್ರವಾರದಿಂದ ಆಕೆಯ ವಿರುದ್ಧವಿರುವ ಅಪರಾಧಗಳ ಕುರಿತು ತನಿಖೆ ಆರಂಭಿಸಲಾಗಿದೆ.ಚೆಂಗ್‌ ಲೀ ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ ತನ್ನಿಬ್ಬರು ಮಕ್ಕಳು ಹಾಗೂ ಕುಟುಂಬದೊಂದಿಗೆ ವಾಸವಿದ್ದಾರೆ.

ಚೆಂಗ್ ಲೀ ಬಂಧನ ಕುರಿತು ಆಸ್ಟ್ರೇಲಿಯಾ ಸರ್ಕಾರ ಕಳವಳ ವ್ಯಕ್ತಪಡಿಸಿದೆ. ಬಂಧಿತೆ ಚೆಂಗ್‌ ಲೀ ಅವರಿಗೆ ಮೂಲಸೌಲಭ್ಯಗಳನ್ನು ಪೂರೈಸಬೇಕೆಂದು ನಾವು ನಿರೀಕ್ಷಿಸುತ್ತೇವೆ ಎಂದು ವಿದೇಶಾಂಗ ಸಚಿವ ಮಾರಿಸ್ ಪೇನ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+