ಹಾಂಕಾಂಗ್, ತೈವಾನ್ ಮೇಲೆ ಸಮಗ್ರ ನಿಯಂತ್ರಣ ಸಾಧಿಸಿದ್ದೇವೆ ಎಂದ ಚೀನಾ ಅಧ್ಯಕ್ಷ
ಬೀಜಿಂಗ್, ಅ.16: ಚೀನಾದ ಕಮ್ಯುನಿಸ್ಟ್ ಪಕ್ಷದ ಪ್ರಮುಖ ಸಭೆ(ಕಾಂಗ್ರೆಸ್)ಯ ಉದ್ಘಾಟನಾ ಸಮಾರಂಭದಲ್ಲಿ, ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಹಾಂಕಾಂಗ್‌ನ ಮೇಲೆ ಚೀನಾ ಸಮಗ್ರ ನಿಯಂತ್ರಣವನ್ನು ಸಾಧಿಸಿದೆ ಎಂದು ಘೋಷಿಸಿದ್ದಾರೆ.
ಹಾಂಕಾಂಗ್‌ನಲ್ಲಿದ್ದ ಅರಾಜಕತೆಯ ಅವ್ಯವಸ್ಥೆಯಿಂದ ಅದನ್ನು ಸಮರ್ಪಕ ಆಡಳಿತಕ್ಕೆ ತಿರುಗಿಸಿದೆ. ಆದರೆ ತೈವಾನ್‌ನಲ್ಲಿ ನಡೆಯುತ್ತಿರುವ ಹಸ್ತಕ್ಷೇಪದ ಕುರಿತು ಖಂಡನೆ ವ್ಯಕ್ತಪಡಿಸಿದ್ದಾರೆ.
ಐದು ವರ್ಷಗಳಿಗೊಮ್ಮೆ ನಡೆಯುವ ಕಮ್ಯುನಿಸ್ಟ್ ಪಕ್ಷದ ಸಭೆ ಬೀಜಿಂಗ್‌ನ ಗ್ರೇಟ್ ಹಾಲ್ ಆಫ್ ದಿ ಪೀಪಲ್‌ನಲ್ಲಿ ನಡೆದಿದೆ. ಸಭೆಯಲ್ಲಿ ಸುಮಾರು 2,300 ಪ್ರತಿನಿಧಿಗಳು ಭಾಗವಹಿಸಿದ್ದರು. ಈ ವೇಳೆ ಕಮ್ಯುನಿಸ್ಟ್ ಸರ್ಕಾರದ ಆಡಳಿತವನ್ನು ಹೊಗಳಿದ್ದಾರೆ.

"ಹಾಂಕಾಂಗ್‌ನಲ್ಲಿನ ಅವ್ಯವಸ್ಥೆಯ ಪರಿಸ್ಥಿತಿಯು ಈಗ ಸಮರ್ಪಕ ಆಡಳಿತಕ್ಕೆ ಬದಲಾಗಿ ಪರಿವರ್ತನೆಯನ್ನು ಸಾಧಿಸಿದೆ" ಎಂದು ಬೀಜಿಂಗ್‌ನ ಗ್ರೇಟ್ ಹಾಲ್ ಆಫ್ ದಿ ಪೀಪಲ್‌ನಲ್ಲಿ ಕಮ್ಯುನಿಸ್ಟ್ ಪಕ್ಷದ ಪ್ರತಿನಿಧಿಗಳಿಗೆ ಹೇಳಿದ್ದಾರೆ. ಈ ವೇಳೆ ಸ್ವಆಡಳಿತದ ತೈವಾನ್ ದ್ವೀಪದಲ್ಲಿ ಪ್ರತ್ಯೇಕತಾವಾದ ಮತ್ತು ಹಸ್ತಕ್ಷೇಪದ ವಿರುದ್ಧದ ಪ್ರಮುಖ ಹೋರಾಟ ನಡೆಸುವುದಾಗಿ ಕ್ಸಿ ಜಿನ್‌ಪಿಂಗ್ ಪ್ರತಿಜ್ಞೆ ಮಾಡಿದ್ದಾರೆ.
ಚೀನಾದಲ್ಲಿ ಇನ್ನು ಕೊರೊನಾ ಮಾರ್ಗಸೂಚಿಗಳು ಜಾರಿಯಿದ್ದು, ಈ ನಿರ್ಬಂಧಗಳು ಜನರ ಸುರಕ್ಷತೆಗಾಗಿ ಇವೆ ಎಂದು ಕ್ಸಿ ಜಿನ್‌ಪಿಂಗ್ ಹೇಳಿದ್ದಾರೆ. ಚೀನಾವು "ಜನರ ಸುರಕ್ಷತೆ ಮತ್ತು ಆರೋಗ್ಯವನ್ನು ಅತ್ಯುನ್ನತ ಮಟ್ಟಕ್ಕೆದಲ್ಲಿ ರಕ್ಷಿಸಿದೆ. ಸಾಂಕ್ರಾಮಿಕ ತಡೆಗಟ್ಟುವಿಕೆ ಮತ್ತು ನಿಯಂತ್ರಿಸುವಲ್ಲಿ ಗಮನಾರ್ಹ ಫಲಿತಾಂಶಗಳನ್ನು ಪಡೆದಿದೆ" ಎಂದು ಹೇಳಿದ್ದಾರೆ.
ಭ್ರಷ್ಟಾಚಾರದ ಮೇಲಿನ ಅವರು ತೆಗೆದುಕೊಂಡ ಶಿಸ್ತುಕ್ರಮವು ದೇಶದ ಆಡಳಿತ ಪಕ್ಷ ಮತ್ತು ಮಿಲಿಟರಿಯೊಳಗಿನ ಗಂಭೀರ ಅಪಾಯಗಳನ್ನು ಕೊನೆಗೊಳಿಸಿದೆ ಎಂದಿದ್ದಾರೆ.
ಈ ವೇಳೆ ಖಾಸಗಿ ಆರ್ಥಿಕತೆಗೆ ಚೀನಾ ತನ್ನ ಅಚಲ ಬೆಂಬಲವನ್ನು ಮುಂದುವರಿಸಲಿದೆ ಎಂದು ಕ್ಸಿ ಜಿನ್‌ಪಿಂಗ್ ಹೇಳಿದ್ದಾರೆ.












Click it and Unblock the Notifications