ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

9 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಿಲ್ಲ ಕೊರೊನಾ ವೈರಸ್ ಆತಂಕ!

|
Google Oneindia Kannada News

ಬೆಂಗಳೂರು, ಮಾ. 04: ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೋನಾ ವೈರಸ್‌ಗೆ 9 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಎದೆಯೊಡ್ಡಿ ನಿಂತಿದ್ದಾರೆ ಎಂಬ ಮಹತ್ವದ ಅಂಶವನ್ನು ಚೀನಾ ಬಹಿರಂಗಪಡಿಸಿದೆ. ಕೊರೊನಾ ವೈರಸ್‌ ಕುರಿತಂತೆ ಚೀನಾ ಆರೋಗ್ಯ ಇಲಾಖೆಯ ಅಧ್ಯಯನ ಮಹತ್ವದ ಅಂಶವೊಂದನ್ನು ಹೊರಹಾಕಿದೆ. ಚೀನಾದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ಮೇನ್‌ಲ್ಯಾಂಡ್‌ ಚೀನಾದಲ್ಲಿ ಕೈಗೊಂಡಿದ್ದ ಅಧ್ಯಯನದಲ್ಲಿ 9 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಕೋರೊನಾ ವೈರಸ್‌ಗೆ ತುತ್ತಾಗಿದ್ದರೂ ಸಾವನ್ನಪ್ಪಿಲ್ಲ ಎಂಬದು ಗೊತ್ತಾಗಿದೆ.

ಸೋಂಕು ತಗುಲಿದ ಸರಾಸರಿ ಶೇಕಡಾ 2.3ರಷ್ಟು ಜನರಿಗೆ ಕೊರೊನಾ ವೈರಸ್ ಸಾವನ್ನುಂಟು ಮಾಡುತ್ತದೆ. ಆದರೆ ವೈರಸ್‌ನಿಂದ ಮಕ್ಕಳು ಸಾವನ್ನಪ್ಪಿದ ಉದಾಹರಣೆಗಳು ಮೇನ್‌ಲ್ಯಾಂಡ್‌ನಲ್ಲಿ ಕಂಡುಬಂದಿಲ್ಲ ಎಂದು ಚೀನಾ ಆರೋಗ್ಯ ಇಲಾಖೆಯ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ಕೈಗೊಂಡಿದ್ದ ಅಧ್ಯಯನ ವರದಿ ಹೇಳಿದೆ.

ಕೊರೊನಾ ಆತಂಕ; ವಿಶ್ವಸಂಸ್ಥೆ ಅಧಿವೇಶನದ ಮೇಲೆ ಕರಿನೆರಳುಕೊರೊನಾ ಆತಂಕ; ವಿಶ್ವಸಂಸ್ಥೆ ಅಧಿವೇಶನದ ಮೇಲೆ ಕರಿನೆರಳು

ಇದರೊಂದಿಗೆ ಕೊರೊನಾ ವೈರಸ್‌ನಿಂದ ಯಾವ ವಯಸ್ಸಿನವರಿಗೆ ಹೆಚ್ಚಿನ ಅಪಾಯವಿದೆ ಎಂಬುದು ಪತ್ತೆಯಾಗಿದ್ದು, ಸೋಂಕು ತಗಲುವ ಎಲ್ಲ ವ್ಯಕ್ತಿಗಳು ಸಾವನ್ನಪ್ಪುವುದಿಲ್ಲ ಎಂಬುದನ್ನು ಅಂಕಿ ಅಂಶಗಳ ಸಹಿತ ಕೇಂದ್ರ ಬಿಡುಗಡೆ ಮಾಡಿದೆ. ಹೀಗಾಗಿ ಸೋಂಕು ತಗಲುವ ಎಲ್ಲರೂ ಆತಂಕ ಪಡುವ ಅಗತ್ಯವಿಲ್ಲ ಎಂಬುದು ಬಹಿರಂಗವಾಗಿದೆ. ಭಾರತದಲ್ಲಿ ಮೊದಲು ವೈರಸ್ ದೃಢಪಟ್ಟಿದ್ದ 3 ಸೋಂಕಿತರು ರೋಗ ಮುಕ್ತವಾಗಿರುವುದು ಚೀನಾ ಆರೋಗ್ಯ ಇಲಾಖೆ ವರದಿಗೆ ಪುಷ್ಟಿಕೊಡುವಂತಿದೆ.

9 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸಾವನ್ನಪ್ಪಿಲ್ಲ!

9 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸಾವನ್ನಪ್ಪಿಲ್ಲ!

ಒಂಭತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಕರೋನಾ ವೈರಸ್‌ನಿಂದ ಮೃತಪಟ್ಟಿಲ್ಲ ಎಂದು ಚೀನಾದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ ಅಧ್ಯಯನ ವರದಿ ಹೇಳಿದೆ. ಹಸುಗೂಸುಗಳು ಸೇರಿದಂತೆ 9 ವರ್ಷ ವಯಸ್ಸಿನೊಳಗಿನ ಮಕ್ಕಳು ಕೊರೋನಾ ವೈರಸ್‌ನಿಂದ ಮೃತಪಟ್ಟಿಲ್ಲ ಎಂದು ಅಧ್ಯಯನದಲ್ಲಿ ಕಂಡು ಬಂದಿದೆ. ಮಕ್ಕಳ ಪಾಲಕರು ಕೊರೋನಾ ವೈರಸ್‌ನಿಂದ ಬಳಲಿದ್ದರು ಎಂಬುದನ್ನೂ ಉಲ್ಲೇಖಿಸಿದೆ.

ಇನ್ನು 10 ರಿಂದ 39 ವಯಸ್ಸಿನ ಸೋಂಕಿತರಲ್ಲಿ ಸಾವಿನ ಪ್ರಮಾಣ ಶೇಕಡಾ 0.2ರಷ್ಟು, 40 ರಿಂದ 49 ವಯಸ್ಸಿನ ಸೋಂಕಿತರಲ್ಲಿ ಸಾವಿನ ಪ್ರಮಾಣ ಶೇಕಡಾ 0.4ರಷ್ಟು, 50 ರಿಂದ 59 ವಯಸ್ಸಿನವರಲ್ಲಿ ಶೇಕಡಾ 1.3ರಷ್ಟು, 60 ರಿಂದ 69 ವಯಸ್ಸಿನವರಲ್ಲಿ ಸಾವಿನ ಪ್ರಮಾಣ ಶೇಕಡಾ 3.6ರಷ್ಟು, 70 ರಿಂದ 79 ವಯಸ್ಸಿನವರಲ್ಲಿ ಸಾವಿನ ಪ್ರಮಾಣ ಶೇಕಡಾ 8ರಷ್ಟು ಹಾಗೂ 80ವರ್ಷಕ್ಕಿಂತ ಹೆಚ್ಚಿನವರಿಗೆ ಅಪಾಯ ಹೆಚ್ಚಾಗಿದ್ದು ಶೇಕಡಾ 14.8ರಷ್ಟು ಕೊರೋನಾ ವೈರಸ್ ಸೋಂಕಿತರು ಸಾವನ್ನಪ್ಪಿದ್ದಾರೆಂದು ವರದಿಯಲ್ಲಿ ತಿಳಿಸಲಾಗಿದೆ.

ಸರಾಸರಿ ಸಾವಿನ ಪ್ರಮಾಣ ವಯಸ್ಸಿಗೆ ಅನುಗುಣವಾಗಿ ಏರಿಕೆ!

ಸರಾಸರಿ ಸಾವಿನ ಪ್ರಮಾಣ ವಯಸ್ಸಿಗೆ ಅನುಗುಣವಾಗಿ ಏರಿಕೆ!

ಕೊರೋನಾ ವೈರಸ್ ಸೋಂಕಿನಿಂದ ಉಂಟಾಗುವ ಒಟ್ಟು ಸಾವಿನ ಪ್ರಮಾಣ ಸರಾಸರಿ ಶೇಕಡಾ 2.3 ಎಂದು ಚೀನಾ ಆರೋಗ್ಯ ಅಧಿಕಾರಿಗಳು ವರದಿಯಲ್ಲಿ ತಿಳಿಸಿದ್ದಾರೆ. ಮೇನ್‌ಲ್ಯಾಂಡ್‌ ಚೀನಾದಲ್ಲಿ Chinese Center for Disease Control and Prevention ಫೆಬ್ರವರಿ 11, 2020ರವರೆಗೆ ಕೈಗೊಂಡಿದ್ದ ಅಧ್ಯಯನದಂತೆ 72,314 ಶಂಕಿತರಲ್ಲಿ 44,672 ಜನರಿಗೆ ಕೊರೋನಾ ವೈರಸ್ ದೃಢಪಟ್ಟಿತ್ತು. ಸೋಂಕಿತರಲ್ಲಿ 1,023 ಸಾವನ್ನಪ್ಪಿದ್ದಾರೆಂದು ತಿಳಿಸಿದ್ದಾರೆ. ಆ ಅಧ್ಯಯನದಂತೆ ಸೋಂಕಿತರ ಮರಣ ಪ್ರಮಾಣ ಶೇಕಡಾ 2.3 ರಷ್ಟಾಗಿದೆ. ಸೋಂಕಿತರ ವಯಸ್ಸಿಗೆ ಅನುಗುಣವಾಗಿ ಮರಣ ಪ್ರಮಾಣ ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.

ಕೊರೊನಾ; ಟೆಕ್ಕಿಯ ಸಹೋದ್ಯೋಗಿ ಆಸ್ಪತ್ರೆಗೆ ದಾಖಲು, ಸಚಿವರ ಟ್ವೀಟ್ಕೊರೊನಾ; ಟೆಕ್ಕಿಯ ಸಹೋದ್ಯೋಗಿ ಆಸ್ಪತ್ರೆಗೆ ದಾಖಲು, ಸಚಿವರ ಟ್ವೀಟ್

ಮಹಿಳೆಯರಿಗಿಂತ ಪರುಷರ ಸಾವಿನ ಪ್ರಮಾಣ ಹೆಚ್ಚು

ಮಹಿಳೆಯರಿಗಿಂತ ಪರುಷರ ಸಾವಿನ ಪ್ರಮಾಣ ಹೆಚ್ಚು

ಇನ್ನು ಅಧ್ಯಯನ ವರದಿ ಹೇಳಿರುವಂತೆ ಕೊರೊನಾ ವೈರಸ್‌ನಿಂದ ಮಹಿಳೆಯರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಪುರುಷರು ಸಾವನ್ನಪ್ಪಿದ್ದಾರೆಂದು ಕಂಡಿಬಂದಿದೆ. ಸೋಂಕು ತಗಲಿದ್ದ ಮಹಿಳೆಯರಲ್ಲಿ ಸಾವಿನ ಪ್ರಮಾಣ ಶೇಕಡಾ 1.7ರಷ್ಟು ಕಂಡುಬಂದಿದ್ದರೆ ಅದೇ ಪುರುಷರಲ್ಲಿ ಸಾವಿನ ಪ್ರಮಾಣ 2.8ರಷ್ಟು ಕಂಡು ಬಂದಿದೆ. ಹೀಗಾಗಿ ಸೋಂಕು ತಗಲುವ ಮಹಿಳೆಯರಿಗಿಂತ ಶೇಕಡಾ 1.1ರಷ್ಟು ಪುರುಷರು ಹೆಚ್ಚಿನ ಪ್ರಮಾಣದಲ್ಲಿ ಮೇನ್‌ಲ್ಯಾಂಡ್‌ ಚೀನಾದಲ್ಲಿ ಸಾವನ್ನಪ್ಪಿದ್ದಾರೆಂದು ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ.

ಬೇರೆ ರೋಗದಿಂದ ಬಳಲುತ್ತಿರುವವರ ಸಾವಿನ ಸಂಖ್ಯೆ ಹೆಚ್ಚು

ಬೇರೆ ರೋಗದಿಂದ ಬಳಲುತ್ತಿರುವವರ ಸಾವಿನ ಸಂಖ್ಯೆ ಹೆಚ್ಚು

ಇನ್ನು ಸೋಂಕು ತಗಲುವ ಸಾಮಾನ್ಯ ವ್ಯಕ್ತಿಗಳಿಗಿಂತ ಮೊದಲೇ ಬೇರೆ ಬೇರೆ ಗೋಗಗಳಿಂದ ಬಳಲುತ್ತಿರುವ ವ್ಯಕ್ತಿಗಳ ಸಾವಿನ ಪ್ರಮಾಣ ಹೆಚ್ಚಾಗಿದೆ. ಹೃದಯ ರೋಗ, ಸಕ್ಕರೆ ಖಾಯಿಲೆ, ಬಿಪಿ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿರುವವರಿಗೆ ವೈರಸ್‌ನಿಂದ ಹೆಚ್ಚಿನ ಅಪಾಯ ಉಂಟಾಗಿರುವುದನ್ನು, ಸಾವನ್ನಪ್ಪಿದವರಲ್ಲಿ ಅವರೇ ಹೆಚ್ಚಾಗಿರುವುದನ್ನು ಚೀನಾದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ ಅಧ್ಯಯನ ವರದಿ ತಿಳಿಸಿದೆ. ಹೀಗಾಗಿ ಕೊರೋನಾ ವೈರಸ್ ತಗಲುವ ಎಲ್ಲರಿಗೂ ಅಪಾಯವಿಲ್ಲ ಎಂಬುದನ್ನು ಚೀನಾ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

English summary
Children under the age of 9 have not died from the coronavirus, according to a report from the China Health Department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X