ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಾರ್ಲ್ಸ್ ಟನ್ ಶೂಟೌಟ್: ದುಷ್ಕರ್ಮಿ ಬಲಿ, ಒತ್ತೆಯಾಳುಗಳು ಸುರಕ್ಷಿತ

ಅಮೆರಿಕದ ಚಾರ್ಲ್ಸ್ ಟನ್ ರೆಸ್ಟೋರೆಂಟ್ ನಲ್ಲಿ ಗುಂಡಿನ ದಾಳಿ. ವ್ಯಕ್ತಿಯೊಬ್ಬನಿಂದ ಮತ್ತೊಬ್ಬನ ಹತ್ಯೆ, ಉಳಿದವರ ಒತ್ತೆಯಾಳು ಪ್ರಕರಣ. ಪೊಲೀಸರಿಂದ ದುಷ್ಕರ್ಮಿ ಶೂಟೌಟ್, ಒತ್ತೆಯಾಳುಗಳ ಸುರಕ್ಷಿತ ಬಿಡುಗಡೆ.

|
Google Oneindia Kannada News

ಚಾರ್ಲ್ಸ್ ಟನ್ (ಅಮೆರಿಕ), ಆಗಸ್ಟ್ 25: ಇಲ್ಲಿನ ದಕ್ಷಿಣ ಕರೊಲಿನಾದಲ್ಲಿರುವ ರೆಸ್ಟೋರೆಂಟ್ ಒಂದರಲ್ಲಿ ಮಾನಸಿಕ ಸ್ಥಿಮಿತತೆ ಕಳೆದುಕೊಂಡ ವ್ಯಕ್ತಿಯೊಬ್ಬ ತನ್ನ ಸಹೋದ್ಯೋಗಿಯನ್ನು ಪಿಸ್ತೂಲಿನಿಂದ ಗುಂಡು ಹಾರಿಸಿ ಹತ್ಯೆಗೈದಿದ್ದು, ಉಳಿದ ಸಿಬ್ಬಂದಿಯನ್ನು ರೆಸ್ಟೋರೆಂಟ್ ನೊಳಗೆ ಒತ್ತೆಯಾಳಾಗಿ ಇಟ್ಟುಕೊಂಡಿದ್ದ ಘಟನೆ ಕೊನೆಗೂ ಅಂತ್ಯಗೊಂಡಿದೆ.

ಘಟನೆ ಭಾರತೀಯ ಕಾಲಮಾನದ ಪ್ರಕಾರ, ಗುರುವಾರ ರಾತ್ರಿ ನಡೆದಿದ್ದ ಈ ಘಟನೆಯಲ್ಲಿ ಒಬ್ಬ ಅಸುನೀಗಿದ್ದ. ಪೊಲೀಸರು ಸತತವಾಗಿ ಸಂಧಾನಕ್ಕೆ ಯತ್ನಿಸಿದರೂ, ಆ ಕುಕೃತ್ಯ ಎಸಗಿದ್ದ ವ್ಯಕ್ತಿ ತನ್ನ ಮನಸ್ಸನ್ನು ಬದಲಾಯಿಸದ ಹಿನ್ನೆಲೆಯಲ್ಲಿ ಹಾಗೂ ಇತರರ ಜೀವಕ್ಕೂ ಬೆದರಿಕೆಯೊಡ್ಡಿದ್ದ ಕಾರಣದಿಂದಾಗಿ, ಆ ವ್ಯಕ್ತಿಯ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿ ಆತನನ್ನು ಹತ್ಯೆಗೈಯ್ಯುವಲ್ಲಿ ಯಶಸ್ವಿಯಾಗಿದ್ದಾರೆ.

Charleston shootout: Gun Man dies, hostages released

ಈ ಬಗ್ಗೆ ವಿವರಣೆ ನೀಡಿರುವ ಚಾರ್ಲ್ಸ್ ಟನ್ ಪೊಲೀಸ್ ಇಲಾಖೆಯ ಹಂಗಾಮಿ ಮುಖ್ಯಸ್ಥ ಜೆರೋಮ್ ಟೇಲರ್ ಅವರು, ''ದುಷ್ಕೃತ್ಯ ಎಸಗಿದ್ದ ವ್ಯಕ್ತಿಯನ್ನು ಶೂಟೌಟ್ ಮಾಡಿ ಕೊಲ್ಲಲಾಗಿದ್ದು, ಎಲ್ಲಾ ಒತ್ತೆಯಾಳುಗಳನ್ನೂ ರೆಸ್ಟೋರೆಂಟ್ ನಿಂದ ಸುರಕ್ಷಿತವಾಗಿ ಹೊರತರಲಾಗಿದೆ. ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆಯಾಗಬೇಕಿದ್ದು, ಶೀಘ್ರದಲ್ಲೇ ದುಷ್ಕೃತ್ಯ ಎಸಗಿದ ವ್ಯಕ್ತಿಯ ಮಾಹಿತಿ ಕೆದಕಲಾಗುವುದು'' ಎಂದು ತಿಳಿಸಿದರು. ಇದೇ ವೇಳೆ, ಇದು ಭಯೋತ್ಪಾಕರ ಕೃತ್ಯವಲ್ಲ ಎಂದು ಸ್ಪಷ್ಟನೆ ನೀಡಿರುವ ಪೊಲೀಸರು, ಇದು ಜನಾಂಗೀಯ ದ್ವೇಷದ ಹಿನ್ನೆಲೆಯಲ್ಲಿ ನಡೆದ ಅಪರಾಧವಿರಬಹುದೆಂದು ಅನುಮಾನ ಪಟ್ಟಿದ್ದಾರೆ.

English summary
CHARLESTON, South Carolina -- The mayor says a hostage situation in a Charleston, South Carolina, restaurant has ended with the gunman being shot by police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X