ಗೂಗಲ್‌ನಲ್ಲೂ ಜಾತಿ ತಾರತಮ್ಯ: ಆಕ್ರೋಶ ವ್ಯಕ್ತಪಡಿಸಿದ AWU
ವಾಷಿಂಗ್‌ಟನ್, ಜೂ. 9: ಇತ್ತೀಚೆಗೆ ಗೂಗಲ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತೀಯ ಮೂಲದ ಅಮೆರಿಕದ ದಲಿತ ಹಕ್ಕುಗಳ ಕಾರ್ಯಕರ್ತೆ ತೆನ್ಮೋಳಿ ಸೌಂದರ್ಯರಾಜನ್ ಅವರ ಭಾಷಣವನ್ನು ಅಲ್ಲಿನ ಹಿಂದೂ ಸಹೋದ್ಯೋಗಿಗಳ ಒತ್ತಡದಿಂದ ನಿಷೇಧಿಸಲಾಗಿತ್ತು. ಹೀಗಾಗಿ ಆಲ್ಫಾಬೆಟ್ ವರ್ಕರ್ಸ್ ಯೂನಿಯನ್ (AWU) ಜಾತಿ ತಾರತಮ್ಯದ ಬಗ್ಗೆ ಆಕ್ರೋಶ ವ್ತಕಪಡಿಸಿದೆ. ಸದ್ಯ ಈ ಕುರಿತು ಮಾತನಾಡಿದ ತೆನ್ಮೋಳಿ ಸೌಂದರ್ಯರಾಜನ್ ಇದು ನಾನು ಭಾಷಣ ಮಾಡುವುದರ ಸಮಸ್ಯೆಯಲ್ಲ, ಬದಲಾಗಿ ನನ್ನ ಜಾತಿಯೇ ಇಲ್ಲಿ ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ದಿ ನ್ಯೂಸ್ ಮಿನಿಟ್‌ನ ಧನ್ಯಾ ರಾಜೇಂದ್ರನ್ ಅವರು ತೆನ್ಮೋಳಿ ಸೌಂದರ್ಯರಾಜನ್ ಅವರನ್ನು ಸಂದರ್ಶನ ನಡೆಸಿದ್ದು, ಅವರು ಜಾತಿ ತಾರತಮ್ಯದ ಬಗ್ಗೆ ಗೂಗಲ್ ನಿಲುವನ್ನು ತಿಳಿಸಿದ್ದಾರೆ. ಗೂಗಲ್ ನಡೆದ ಕಾರ್ಯಕ್ರಮದಲ್ಲಿ ಗೂಗಲ್‌ನ ಹಿರಿಯ ವ್ಯವಸ್ಥಾಪಕಿ ತನುಜಾ ಗುಪ್ತಾ ಅವರು ಆಹ್ವಾನಿಸಿದ್ದರು. ಆದರೆ ಅಲ್ಲಿನ ಕೆಲವು ಹಿಂದೂ ಮೇಲ್ಜಾತಿಯ ಉದ್ಯೋಗಿಗಳು ದಲಿತ ಕಾರ್ಯಕರ್ತೆ ತೇನ್ಮೋಳಿ ಸೌಂದರ್ಯರಾಜನ್ ಅವರ ಭಾಷಣ ಮಾಡುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ ತಮ್ಮ ಕಂಪನಿ ಆಂತರಿಕ ಮೇಲ್‌ಗಳಲ್ಲಿ ತೇನ್ಮೋಳಿ ಅವರ ಬಗ್ಗೆ ಅವಳು ಒಬ್ಬ ಹಿಂದೂ ವಿರೋಧಿ ಎಂದು ಬರೆದು ಹಂಚಿಕೊಂಡಿದ್ದರು.

ತೆನ್ಮೋಳಿ ಸೌಂದರ್ಯರಾಜನ್ ಅವರ ಭಾಷಣ
ಜನಾಂಗ, ಲಿಂಗ, ಲೈಂಗಿಕತೆ ಹಾಗೂ ಸಮಾನತೆ, ಜಾತಿ ಕುರಿತ ಸಮಸ್ಯೆಗಳ ಬಗೆಗೆ ಉದ್ದೇಶದ ಡೈವರ್ಸಿಟಿ ಇಕ್ವಿಟಿ ಇನ್‌ಕ್ಲೂಸಿವಿಟಿ ಎಂಬ ಈ ಕಾರ್ಯಕ್ರಮ ಗೂಗಲ್‌ನಲ್ಲಿ ನಡೆಯಲು ಸಿದ್ಧವಾಗಿತ್ತು. ಆದರೆ ಉದ್ಯೋಗಿಗಳ ನಿರಾಕರಣೆಯಿಂದ ಕಾರ್ಯಕ್ರಮಕ್ಕೆ ಅಡಚಣೆ ಉಂಟಾಗಿತ್ತು. ಈ ಬಗ್ಗೆ ಆಲ್ಫಾಬೆಟ್ ವರ್ಕಸ್ ಯುನಿಯನ್ ಆಕ್ರೋಶ ವ್ಯಕ್ತಪಡಿಸಿತ್ತು. ನಾವು ಸೌಂದರ್ಯ ರಾಜನ್ ಹಾಗೂ ತನುಜಾ ಗುಪ್ತಾ ಅವರ ಪರ ನಿಂತಿದ್ದೇವೆ. ಗೂಗಲ್ ಕಂಪನಿಯಲ್ಲಿ ಎಲ್ಲಾ ಎಚ್‌ಆರ್ ನೀತಿಗಳಿಗೆ ಜಾತಿಯನ್ನು ಸೇರಿಸುವುದು, ತೆನ್ಮೋಳಿ ಸೌಂದರ್ಯರಾಜನ್ ಅವರ ಭಾಷಣವನ್ನು ಮತ್ತೆ ಆಯೋಜಿಸುವುದು ಹಾಗೂ ಕಂಪನಿಯಲ್ಲಿ ಹೆಚ್ಚು ದಲಿತ ಹಾಗೂ ದಮನಿತ ವರ್ಗಗಳ ಬಗ್ಗೆ ಮಾತನಾಡುವ ಜನರನ್ನು ಆಹ್ವಾನಿಸುವುದು. ಕಂಪನಿಯಲ್ಲಿ ಜಾತಿ ತಾರತಮ್ಯದ ನಿವಾರಣೆಯ ಹಿನ್ನೆಲೆಯಲ್ಲಿ ಹೂಡಿಕೆ ಮಾಡುವ ಪ್ರತಿಜ್ಞೆಗೆ ಬದ್ಧರಾಗಿರುವುದು ಇವೇ ಮೊದಲಾದ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿದೆ.
ಘಟನೆಯ ನಂತರ ದಲಿತ ಕಾರ್ಯಕರ್ತೆ ತೆನ್ಮೋಳಿ ಸೌಂದರ್ಯರಾಜನ್ ಗೂಗಲ್ ಸಿಇಒ ಭಾರತೀಯರೇ ಆದ ಸುಂದರ್ ಪಿಚ್ಚೈ ಅವರಿಗೆ ನೇರವಾಗಿ ತಮ್ಮ ಭಾಷಣಕ್ಕೆ ಅವಕಾಶ ನೀಡುವಂತೆ ಕೋರಿದ್ದರು. ಆದರೆ ಈವರೆಗೂ ಸುಂದರ್ ಪಿಚ್ಚೈ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಉತ್ತಮ ಸ್ಥಾನದಲ್ಲಿ ಇದ್ದೇವೆ ಎಂಬ ಭಾವನೆ
ಘಟನೆ ಬಗ್ಗೆ ದಿ ನ್ಯೂಸ್ ಮಿನಿಟ್‌ನ ಸಂಪಾದಕಿ ಧನ್ಯಾ ರಾಜೇಂದನ್ ಅವರೊಂದಿಗೆ ವರ್ಚುವಲ್ ಆಗಿ ಮಾತನಾಡಿದ ತೆನ್ಮೋಳಿ ನಾನು ಕಾರ್ಯಕ್ರಮದಲ್ಲಿ ಭಾಗವಹಿಸುವ ಎರಡು ದಿನಗಳ ಮುಂಚೆ ಒಂದು ಜನರ ಗುಂಪು ಜಾತಿ ಹಾಗೂ ಮತೀಯ ಪೂರ್ವಗ್ರಹಪೀಡಿತ ಅಭಿಯಾನವನ್ನು ಶುರು ಮಾಡಿದ್ದರು. ಅಲ್ಲಿ ದಲಿತರ ಬಗ್ಗೆ ತುಂಬಾ ಕೆಟ್ಟದಾಗಿ ಹಾಗೂ ಅವಹೇಳನಕಾರಿಯಾಗಿ ಅಲ್ಲದೆ ಕಾನೂನುಬಾಹಿರವಾಗಿ ಮಾತನಾಡಿದ್ದರು. ಅವರಿಗೆ ತಾವು ದಕ್ಷಿಣ ಏಷ್ಯಾ ಮಾತ್ರವಲ್ಲದೆ ಅಮೆರಿಕಾದಲ್ಲಿ ಅನೇಕ ಉನ್ನತ ಸಂಸ್ಥೆಗಳಲ್ಲಿ ಉತ್ತಮ ಸ್ಥಾನದಲ್ಲಿ ಇದ್ದೇವೆ ಎಂಬ ಭಾವನೆ ಇದೆ ಎಂದು ಹೇಳಿದರು.

ಜಾತಿ ಸಮಾನತೆಯನ್ನು ತರಬೇಕಿದೆ
ತನುಜಾ ಗುಪ್ತಾ ಅವರ ರಾಜೀನಾಮೆ ನಂತರ ಗೂಗಲ್ ತಮ್ಮ ಕೆಲಸದ ಸ್ಥಳದಲ್ಲಿ ತಾರತಮ್ಯದ ವಿರುದ್ಧ ಸಾರ್ವಜನಿಕ ನೀತಿಯನ್ನು ತಂದಿದ್ದಾರೆ. ಈ ಮೂಲಕ ಜಾತಿ ತಾರತಮ್ಯದ ಬಗ್ಗೆತಮ್ಮ ನಿಲುವು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಗೂಗಲ್ ವಕ್ತಾರ ಶಾನನ್ ನ್ಯೂಬೆರಿ ಮಾತನಾಡಿ, ನಮ್ಮ ಬಳಗವನ್ನು ಒಟ್ಟುಗೂಡಿಸುವ ಮತ್ತು ಜಾಗೃತಿ ಮೂಡಿಸುವ ಬದಲು - ವಿಭಜನೆ ಮತ್ತು ದ್ವೇಷವನ್ನು ಸೃಷ್ಟಿಸುವ ಉದ್ದೇಶಿತ ಮಾತುಕತೆಯೊಂದಿಗೆ ಮುಂದುವರಿಯದಿರಲು ನಾವು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ. ಈ ಬಗ್ಗೆ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ ತೇನ್ಮೋಳಿ ಅವರ ಪ್ರತಿಕ್ರಿಯೆಯ ಪ್ರತಿಯೊಂದು ವಿಧಾನವು ಅವರು ಜಾತಿ ಸಮಾನತೆಯನ್ನು ತರಬೇಕಿದೆ ಎಂಬುದನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.
ಗೂಗಲ್‌ನಲ್ಲಿ ಉನ್ನತ ನಾಯಕತ್ವದ ಸ್ಥಾನದಲ್ಲಿರುವ ಜನರು ಜಾತಿ ಎಂದರೇನು ಮತ್ತು ಈ ವಿಷಯದ ಬಗ್ಗೆ ಹೇಗೆ ಮಾತನಾಡಬೇಕು ಎಂಬುದರ ಕುರಿತು ನಿರ್ಧಾರಗಳನ್ನು ತೆಗೆದುಕೊಳ್ಳಲು ವೇದಿಕೆಯಲ್ಲಿ ಯಾರು ಇರಬೇಕು ಎಂಬುದನ್ನು ಅರ್ಥಮಾಡಿಕೊಳ್ಳುವುದಿಲ್ಲ. ತಾರತಮ್ಯದ ಬಗ್ಗೆ ಮಾಹಿತಿಯನ್ನು ಧೈರ್ಯವಾಗಿ ಹೇಳಬೇಖು ಎಂದು ಅವರು ಒತ್ತಿ ಹೇಳಿದರು.
|
ಜಾತಿಯತೆಯ ಪರಿಣಾಮಗಳನ್ನು ಎದುರಿಸುತ್ತಿವೆ
ತೆನ್ಮೋಳಿ ತಮ್ಮನ್ನು ಗೂಗಲ್ ಸಂಸ್ಥೆ ವಿಭಜಕ ಎಂದು ತೋರಿಸಿದ ಮೇಲೆ ಮಾತನಾಡಿ, ನಾವು ಯಾವುದೇ ವಿಭಜನೆ ಮಾಡುವುದಿಲ್ಲ. ಅದು ಈಗಾಗಲೇ ಆಗಿದೆ. ಕೆಲಸ ವಿವಿಧ ಸ್ಥಳಗಳು ಜಾತಿಯತೆಯ ಪರಿಣಾಮಗಳನ್ನು ಎದುರಿಸುತ್ತಿವೆ. ಜಾತಿಯತೆಯನ್ನು ಧೈರ್ಯ ಹಾಗೂ ಸಹಾನುಭೂತಿಯಿಂದ ಪರಿಹರಿಸಬಹುದು ಎಂದು ಹೇಳಿದರು. ಈ ಬಗ್ಗೆ ಸುಂದರ್ ಪಿಚ್ಚೈ ಅವರಿಗೂ ನೀವು ಜಾತಿ ಹಾಗೂ ತಾರತಮ್ಯದ ವಿರುದ್ಧ ನಿಲ್ಲಬೇಕು ಎಂದು ತಿಳಿಸಿದ್ದಾರೆ. ಈ ಮತಾಂಧತೆಯ ವಿರುದ್ಧ ಹೋರಾಡಲು ದಲಿತರು ಒಗ್ಗಟ್ಟಾಗಿದ್ದಾರೆ. ಆದರೆ ನಾನು ನಿಮ್ಮ ಕಂಪನಿಗೆ ಸಹಾಯ ಮಾಡಲು ಪ್ರಯತ್ನಿಸಿದ್ದರಿಂದ ನಾನು ಅಮಾನವೀಯತೆ ಮತ್ತು ಅಪಾಯವನ್ನು ಎದುರಿಸಬೇಕಾಯಿತು ಎಂದರು.
ಕೊನೆಯಲ್ಲಿ ತೆನ್ಮೋಳಿ ಸೌಂದರ್ಯರಾಜನ್ ಜಾತಿ ಹಾಗೂ ತಾರತಮ್ಯದ ಬಗ್ಗೆ ಮಾತನಾಡಲು ಅವಕಾಶಗಳು ಸಾಕಷ್ಟಿವೆ. ಡಾ.ಬಿ.ಆರ್. ಅಂಬೇಡ್ಕರ್ ಹೇಳಿದಂತೆ ಶಿಕ್ಷಣ, ಸಂಘಟನೆ, ಹೋರಾಟದ ಮಹತ್ವವನ್ನು ತಿಳಿಸಿದರು.
Recommended Video
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications