Get Updates
Get notified of breaking news, exclusive insights, and must-see stories!

Donald Trump: ಪೋರ್ನ್ ಸ್ಟಾರ್‌ಗೆ ಹಣ ನೀಡಿದ ಪ್ರಕರಣ: ತಮ್ಮ ಬಂಧನ ಖಚಿತ ಎಂದು ಪರೋಕ್ಷವಾಗಿ ಹೇಳಿದ ಟ್ರಂಪ್

ಪೋರ್ನ್ ಸ್ಟಾರ್‌ಗೆ ಹಣ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ನ್ಯಾಯಾಲಯ ವಿಚಾರಣೆಗೆ ಹಾಜರಾಗಬೇಕಿರುವ ಟ್ರಂಪ್ ತಮ್ಮ ಬಂಧನ ಖಚಿತ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಗುರುವಾರ ರಾತ್ರಿ ತಮ್ಮ ಸತ್ಯ ಸಾಮಾಜಿಕ ವೇದಿಕೆಯ ಮೂಲಕ ತಮ್ಮ ಮೇಲಿರುವ ದೋಷಾರೋಪಣೆಯ ಬಗ್ಗೆ ಆಕ್ರೋಶವನ್ನು ವ್ಯಕ್ತಪಡಿಸಿದರು. ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ ಟ್ರಂಪ್ ಅವರು ನ್ಯೂಯಾರ್ಕ್‌ನಲ್ಲಿ ನ್ಯಾಯಯುತ ವಿಚಾರಣೆಯನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದರು. ಜೊತೆಗೆ ಪ್ರಕರಣದ ಅಧ್ಯಕ್ಷತೆ ವಹಿಸುತ್ತಿರುವ ನ್ಯಾಯಾಧೀಶ ಜುವಾನ್ ಮರ್ಚನ್ ಅವರನ್ನೂ ಟ್ರಂಪ್ ಟೀಕಿಸಿದ್ದಾರೆ.

Trump indirectly said

ನ್ಯಾಯಾಧೀಶ ಜುವಾನ್ ಮರ್ಚನ್ ನನ್ನ ಕೇಸ್ ವಿಚಾರಣೆಗೆ ನಿಯೋಜಿತರಾಗಿದ್ದಾರೆ. ಅವರು ನನ್ನನ್ನು ದ್ವೇಷಿಸುತ್ತಾರೆ ಎಂದು ಟ್ರಂಪ್ ಹೇಳಿದ್ದು ತಮ್ಮ ಬಂಧನ ಖಚಿತ ಎಂಬಾರ್ಥದಲ್ಲಿ ಸುಳಿವು ಕೊಟ್ಟಿದ್ದಾರೆ.

2016ರ ಅಧ್ಯಕ್ಷೀಯ ಚುನಾವಣೆಗೆ ಕೆಲವು ದಿನಗಳ ಮೊದಲು ವಯಸ್ಕ ಚಲನಚಿತ್ರ ತಾರೆ ಸ್ಟ್ರೋಮಿ ಡೇನಿಯಲ್ಸ್‌ಗೆ ಹಣ ಪಾವತಿ ಮಾಡಿದ ಕುರಿತು ಕ್ರಿಮಿನಲ್ ಆರೋಪಗಳನ್ನು ಎದುರಿಸಲು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಮಧ್ಯಾಹ್ನ ನ್ಯೂಯಾರ್ಕ್ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Trump indirectly said

ದೋಷಾರೋಪಣೆಯು ಗೌಪ್ಯವಾಗಿರುವುದರಿಂದ ಟ್ರಂಪ್ ವಿರುದ್ಧದ ಆರೋಪಗಳು ಇನ್ನೂ ತಿಳಿದಿಲ್ಲ.ಗುರುವಾರ ರಾತ್ರಿ ಟ್ರಂಪ್ ವಿರುದ್ಧ ದೋಷಾರೋಪಣೆ ಸಲ್ಲಿಸಿದ್ದ ಮ್ಯಾನ್‌ಹಾಟನ್‌ನ ಗ್ರ್ಯಾಂಡ್‌ ಜ್ಯೂರಿ ಡೊನಾಲ್ಡ್, ಟ್ರಂಪ್ ಅವರನ್ನು ಚಾರ್ಜ್ ಮಾಡಲು ನಿರ್ಧರಿಸಿದ್ದಾರೆ ಎಂಬ ಅನಿರೀಕ್ಷಿತ ಸುದ್ದಿಯನ್ನು ಸ್ವೀಕರಿಸಿದ ನಂತರ ಟ್ರಂಪ್ ನ್ಯೂಯಾರ್ಕ್‌ನಲ್ಲಿ ಅಧಿಕಾರಿಗಳಿಗೆ ಶರಣಾಗಲು ಸ್ವತಃ ತಯಾರಿ ನಡೆಸುತ್ತಿದ್ದರು. ಸದ್ಯ ತಮ್ಮ ಫ್ಲೋರಿಡಾ ನಿವಾಸ, ಮಾರ್-ಎ-ಲಾಗೊದಲ್ಲಿ ಟ್ರಂಪ್ ನೆಲೆಸಿದ್ದಾರೆ.

ಟ್ರಂಪ್ ಶರಣಾಗುವ ಸಾಧ್ಯತೆ ಹೆಚ್ಚು
ಮ್ಯಾನ್‌ಹಾಟನ್‌ನ ಗ್ರ್ಯಾಂಡ್‌ ಜ್ಯೂರಿ ಡೊನಾಲ್ಡ್ ಟ್ರಂಪ್ ವಿರುದ್ಧ ದೋಷಾರೋಪಣೆ ಸಲ್ಲಿಸಿದ್ದು, ಇದರಿಂದ 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ಬಯಸಿರುವ ಡೊನಾಲ್ಡ್‌ ಟ್ರಂಪ್‌ ತೀವ್ರ ಮುಜುಗರ ಅನುಭವಿಸುವಂತಾಗಿದೆ.

Case of paying porn star

ಆದರೂ ಶುಕ್ರವಾರ ಬೆಳಿಗ್ಗೆ ಟ್ರಂಪ್ ಅವರನ್ನು ಪ್ರತಿನಿಧಿಸುವ ವಕೀಲ ಜೋ ಟಕೋಪಿನಾ ಅವರು ಮುಂದಿನ ವಾರ ಅಧಿಕಾರಿಗಳಿಗೆ ಶರಣಾಗುವಾಗ ಮಾಜಿ ಅಧ್ಯಕ್ಷರಿಗೆ ಕೈಕೋಳ ಹಾಕಲಾಗುವುದಿಲ್ಲ ಎಂದು ಪ್ರಾಸಿಕ್ಯೂಟರ್‌ಗಳಿಂದ ನಾನು ಅರ್ಥಮಾಡಿಕೊಂಡಿದ್ದೇನೆ ಎಂದು ಇಂಡಿಪೆಂಡೆಂಟ್‌ಗೆ ತಿಳಿಸಿದರು.

"ನಾವು ಎಲ್ಲಾ ಹಂತದ ಪ್ರಯತ್ನ ಮಾಡಲು ಸಿದ್ಧರಿದ್ದೇವೆ. ಟ್ರಂಪ್ ಅಪರಾಧಿಯಲ್ಲ ಎಂದು ಸಾಬೀತುಪಡಿಸಲು ಸಿದ್ದರಿದ್ದೇವೆ. ನ್ಯಾಯಾಧೀಶರಿಗೆ ಈ ಬಗ್ಗೆ ಮನವರಿಗೆ ಮಾಡುತ್ತೇವೆ. ಯಾಕೆಂದರೆ ಟ್ರಂಪ್ ತಪ್ಪಿತಸ್ಥರಲ್ಲ. ಈ ಪ್ರಕರಣದ ಕಾನೂನು ಕಾರ್ಯಸಾಧ್ಯತೆಗಳನ್ನು ನಾವು ತಕ್ಷಣ ಮಾಡುತ್ತೇವೆ" ಎಂದು ವಕೀಲ ಜೋ ಟಕೋಪಿನಾ ಹೇಳಿದ್ದಾರೆ.

ಏನಿದು ಘಟನೆ?
ಡೊನಾಲ್ಡ್ ಟ್ರಂಪ್ ಅವರು 2016 ರ ಅಧ್ಯಕ್ಷೀಯ ಪ್ರಚಾರದ ಸಮಯದಲ್ಲಿ ಪೋರ್ನ್ ಸ್ಟಾರ್‌ಗಳಿಗೆ ಹಣ ಪಾವತಿಸಿದ್ದಾರೆ ಎಂಬ ಆರೋಪವಿದೆ. ವಾಸ್ತವವಾಗಿ ಟ್ರಂಪ್ ವಿವಾಹೇತರ ಸಂಬಂಧಗಳನ್ನು ಹೊಂದಿದ್ದಾರೆಂದು ಆರೋಪಿಸಲಾಗಿದೆ. ಆದರೆ ಚುನಾವಣಾ ಪ್ರಚಾರದ ಸಮಯದಲ್ಲಿ ಇದು ಹೊರಬರಲು ಅವರು ಬಯಸಲಿಲ್ಲ. ಅದಕ್ಕಾಗಿಯೇ ಅವರು ಪೋರ್ನ್ ಸ್ಟಾರ್ಗೆ ಹಣವನ್ನು ಪಾವತಿಸಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಮೊದಲ ಬಾರಿಗೆ ಅಮೆರಿಕದ ಮಾಜಿ ಅಧ್ಯಕ್ಷರ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ವಿಧಿಸಲಾಗಿದೆ.

ಸ್ಟಾರ್ಮಿ ಡೇನಿಯಲ್ಸ್ ಜೊತೆ ಲೈಂಗಿಕ ಸಂಬಂಧ
ಪೋರ್ನ್ ಸ್ಟಾರ್ ಸ್ಟಾರ್ಮಿ ಡೇನಿಯಲ್ಸ್‌ಗೆ ಡೊನಾಲ್ಡ್ ಟ್ರಂಪ್ $130,000 ಪಾವತಿಸಿದ್ದಾರೆ ಎಂದು ಗ್ರ್ಯಾಂಡ್ ಜ್ಯೂರಿ ಒಪ್ಪಿಕೊಂಡಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಆದರೆ ಟ್ರಂಪ್ ಅವರ ವಿರುದ್ಧದ ಆರೋಪಗಳೇನು? ಯಾವುದರಡಿಯಲ್ಲಿ ಮೊಕದ್ದಮೆ ಹೂಡಲಾಗುವುದು ಎಂಬ ವಿವರವಾದ ಮಾಹಿತಿ ಇದುವರೆಗೂ ಬಹಿರಂಗವಾಗಿಲ್ಲ. ಟ್ರಂಪ್ ಅವರ ವಿರುದ್ಧದ ಆರೋಪಗಳೇನು ಎಂಬುದನ್ನು ಇನ್ನೂ ತಿಳಿಸಿಲ್ಲ ಎಂದು ಟ್ರಂಪ್ ಅವರ ಕಾನೂನು ತಂಡ ಕೂಡ ಹೇಳಿದೆ. ಅಲ್ಲದೆ ಮುಂದಿನ ವಾರದ ವೇಳೆಗೆ ಡೊನಾಲ್ಡ್ ಟ್ರಂಪ್ ಶರಣಾಗಬಹುದು ಎಂದು ಟ್ರಂಪ್ ಅವರ ಕಾನೂನು ತಂಡ ಹೇಳಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+