ಇದಪ್ಪಾ ಕೊಬ್ಬು ಅಂದ್ರೆ.. ಭಾರತದ ಬಗ್ಗೆ ಕೆನಡಾ ಪ್ರಧಾನಿಯ ಅಹಂಕಾರದ ಮಾತು ಕೇಳಿ!
ಭಾರತ & ಕೆನಡಾ ಸಂಬಂಧ ಇದೀಗ ಸರ್ವನಾಶವಾಗಿ ಹೋಗಿದ್ದು, ಇದಕ್ಕೆ ನೇರ ಕಾರಣವೇ ಕೆನಡಾದ ಸರ್ಕಾರ ಎಂಬ ಆರೋಪ ಕೇಳಿಬರುತ್ತಿದೆ. ಅದರಲ್ಲೂ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಭಾರತ ವಿರೋಧಿ ನಿಲುವು ತಳೆದಿದ್ದಾರೆ, ಈ ಕಾರಣಕ್ಕೆ ಎರಡೂ ದೇಶಗಳ ಮಧ್ಯೆ ಇದೀಗ ದೊಡ್ಡ ಬೆಂಕಿ ಹೊತ್ತಿಕೊಂಡಿದೆ ಎಂಬ ಆರೋಪ ಕೇಳಿಬರುತ್ತಿದೆ. ಇಂತಹ ಸಮಯ ಎದುರಾಗಿರುವಾಗಲೇ, ಉರಿಯುವ ಬೆಂಕಿಗೆ ಪೆಟ್ರೋಲ್ ಸುರಿದಿದ್ದಾರೆ ಕೆನಡಾ ಪ್ರಧಾನಿ!
ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಭಾರತದ ವಿರುದ್ಧ ಮತ್ತೊಮ್ಮೆ ಹೇಳಿಕೆ ನೀಡುವ ಮೂಲಕ ಸಂಬಂಧ ಮತ್ತಷ್ಟು ಹಾಳು ಮಾಡಿದ್ದಾರೆ. ಭಾರತ & ಕೆನಡಾ ನಡುವೆ ನಿನ್ನೆಯಿಂದ ಭಾರಿ ದೊಡ್ಡ ಗಲಾಟೆ ಶುರುವಾಗಿದ್ದು, ಎರಡೂ ದೇಶಗಳು ಈಗಾಗಲೇ ರಾಜತಾಂತ್ರಿಕ ಪ್ರತಿನಿಧಿಗಳ ಉಚ್ಛಾಟನೆಗೆ ಮುಂದಾಗಿವೆ. ಈ ವಿಚಾರ ಜಾಗತಿಕ ಮಟ್ಟದಲ್ಲಿ ದೊಡ್ಡ ಆತಂಕ ಮೂಡಿಸಿದ ಬೆನ್ನಲ್ಲೇ, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಭಾರತದ ವಿರುದ್ಧ ಮತ್ತೊಂದು ಆರೋಪವನ್ನ ಕೂಡ ಮಾಡಿದ್ದಾರೆ. ಹಾಗಾದ್ರೆ ಏನಿದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಹೊಸ ಕಿರಿಕ್?

ಏನಪ್ಪಾ ಕೆನಡಾ ಪ್ರಧಾನಿ ಕಿರಿಕ್?
ಭಾರತದ ವಿರುದ್ಧ ಮಾತನಾಡಲು ಅಂತಾನೇ ಸುದ್ದಿಗೋಷ್ಠಿ ಕರೆದಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ, ಕೆನಡಾ ನೆಲದಲ್ಲಿ ಕೆನಡಾದ ನಾಗರಿಕರನ್ನು ಬೆದರಿಸುವ ಹಾಗೂ ಕೊಲ್ಲುವ ವಿದೇಶಿ ಸರ್ಕಾರದ ಕೃತ್ಯವನ್ನ ನಾವು ಎಂದಿಗು ಸಹಿಸಿಕೊಳ್ಳುವುದಿಲ್ಲ. ಇದು ಕೆನಡಾ ಸಾರ್ವಭೌಮತ್ವ & ಅಂತಾರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯೇ ಆಗಿದೆ ಎಂದು ಆರೋಪ ಮಾಡಿರುವ ಕೆನಡಾ ಪ್ರಧಾನಿ ಟ್ರುಡೋ, ಇದೀಗ ಮತ್ತೊಮ್ಮೆ ಭಾರತದ ಜೊತೆಗೆ ಕಿರಿಕ್ ಶುರು ಮಾಡಿದ್ದಾರೆ.
ಕಿರಿಕ್ ಶುರುವಾಗಿದ್ದು ಎಲ್ಲಿಂದ & ಹೇಗೆ?
ಖಾಲಿಸ್ತಾನಿಗಳ ವಿಚಾರ ಮುಂದೆ ಇಟ್ಟುಕೊಂಡು ಭಾರತದ ವಿರುದ್ಧ ಮಾತನಾಡುವ ಕೆನಡಾದ ವರ್ತನೆ ಬದಲಾಗುತ್ತಿಲ್ಲ. ಅದರಲ್ಲೂ ಖಾಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಕೇಸ್ ದೊಡ್ಡ ಗಲಾಟೆಗೆ ಕಾರಣವಾಗಿತ್ತು. ಇದೀಗ ಹರ್ದೀಪ್ ಸಿಂಗ್ ನಿಜ್ಜರ್ ಕೊಲೆ ಕೇಸ್‌ನಲ್ಲಿ ಭಾರತ ಹೈಕಮಿಷನರ್‌ನ ಕೂಡ ಕೆನಡಾ ತನಿಖೆಗೆ ಗುರಿಪಡಿಸುವ ಬಗ್ಗೆ ಚಿಂತನೆ ನಡೆಸಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು.
ಈ ವಿಚಾರ ಭಾರತವನ್ನು ಕೆರಳಿಸಿ, ಕೂಡಲೇ ಕೆನಡಾದ ನೆಲದಿಂದ ಭಾರತದ ಹೈಕಮಿಷನರ್ ಅವರನ್ನ ಮರಳಿ ದೇಶಕ್ಕೆ ಕರೆಸಿಕೊಂಡಿತು. ಅಲ್ಲದೆ ರಾಜತಾಂತ್ರಿಕರು ಮತ್ತು ಅಧಿಕಾರಿಗಳನ್ನು ಕೂಡ ಭಾರತ ವಾಪಸ್ ಕರೆಸಿಕೊಳ್ಳುತ್ತಿದೆ. ಹಾಗೇ ಕೆನಡಾದ ರಾಜತಾಂತ್ರಿಕರು & ಅಧಿಕಾರಿಗಳ ವರ್ಗವನ್ನೇ ಭಾರತ ಬಿಟ್ಟು ತೊಲಗಲು ಈಗಾಗಲೇ ಭಾರತ ಡೆಡ್‌ಲೈನ್ ನೀಡಿದೆ. ಹೀಗಾಗಿ, ಇದೀಗ ಜಾಗತಿಕ ಮಟ್ಟದಲ್ಲೂ ದೊಡ್ಡ ಚರ್ಚೆ ಶುರುವಾಗಿದೆ.












Click it and Unblock the Notifications