india canada diplomatic row: ಭಾರತದ ಮುಂದೆ ಮತ್ತೆ ಕೆನಡಾ ಸಣ್ಣ ಬುದ್ಧಿ: ಇದೆಲ್ಲ ನಡೆಯಲ್ಲ ಎಂದ ಭಾರತ!

India Canada crisis: ಕೆನಡಾ ದೇಶವು ಭಾರತದ ಮುಂದೆ ತನ್ನ ಸಣ್ಣ ಬುದ್ಧಿಯನ್ನು ತೋರಿಸುವುದನ್ನು ಮುಂದುವರಿಸಿದೆ. ಇತ್ತೀಚಿನ ದಿನಗಳಲ್ಲಿ ಕೆನಡಾ ಹಾಗೂ ಭಾರತದ ನಡುವೆ ಹೇಳಿಕೊಳ್ಳುವಂತಹ ಒಳ್ಳೆಯ ಸಂಬಂಧ ಇಲ್ಲ. ಆದರೆ, ಕೆನಡಾ ದೇಶವು ಈ ಸಂಬಂಧವನ್ನು ಇನ್ನಷ್ಟು ಹಳಸಲು ಸ್ಥಿತಿಗೆ ತಲುಪಿಸುತ್ತಿದೆಯೇ ಎನ್ನುವ ಅನುಮಾನ ಮೂಡುವುದಕ್ಕೆ ಕಾರಣವಾಗಿದೆ. ಕೆನಡಾದ ಒಂದು ನಿರ್ಧಾರಕ್ಕೆ ಭಾರತವು ಕೆಂಡಾ ಮಂಡಲವಾಗಿದ್ದು, ತನ್ನ ಅಸಮಾಧಾನವನ್ನು ದಾಖಲಿಸಿದೆ.

ಕೆನಡಾ ಮತ್ತೆ ತನ್ನ ಸಣ್ಣ ಬುದ್ಧಿಯನ್ನು ಪ್ರದರ್ಶನ ಮಾಡಿದೆ. ಕೆನಡಾದ ಈ ನಡೆಗೆ ಸಹಜವಾಗಿಯೇ ಭಾರತ ಹಾಗೂ ಆಸ್ಟ್ರೇಲಿಯಾದ ಅಸಮಾಧಾನಕ್ಕೂ ಕಾರಣವಾಗಿದೆ. ಈಚೆಗಷ್ಟೇ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹಾಗೂ ಆಸ್ಟ್ರೇಲಿಯಾ ವಿದೇಶಾಂಗ ಸಚಿವ ಪೆನ್ನಿ ವಾಂಗ್ ಅವರು ಪತ್ರಿಕಾಗೋಷ್ಠಿ ನಡೆಸಿದ್ದರು. ಈ ಪತ್ರಿಕಾಗೋಷ್ಠಿಯನ್ನು ಪ್ರಸಾರ ಮಾಡಿರುವ ಆಸ್ಟ್ರೇಲಿಯಾದ ಮಾಧ್ಯಮವನ್ನು ಕೆನಡಾ ಸರ್ಕಾರ ನಿರ್ಬಂಧಿಸಿದೆ ಎನ್ನುವ ಆರೋಪವನ್ನು ಭಾರತ ಸರ್ಕಾರ ಮಾಡಿದೆ.

Canada again showed little wit against India

ಅಲ್ಲದೇ ಕೆನಡಾ ಈ ರೀತಿ ಮಾಡುವುದು ಸರಿಯಲ್ಲ. ತಾನೇ ವಕ್ಫ್‌ ಸ್ವಾತಂತ್ರ್ಯದ ಬಗ್ಗೆ ಮಾತನಾಡಿ, ತನ್ನದೇ ನೆಲದಲ್ಲಿ ಕೆನಡಾ ಈ ರೀತಿಯ ಕ್ರಮ ತೆಗೆದುಕೊಂಡಿದೆ. ಇದು ಕೆನಡಾ ಸರ್ಕಾರದ ಇಬ್ಬಗೆಯ ನೀತಿಗೆ ಸಾಕ್ಷಿ ಎಂದು ತನ್ನ ವಿರೋಧವನ್ನು ದಾಖಲಿಸಿದೆ.

ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ಪೆನ್ನಿ ವಾಂಗ್ ಅವರು ಪತ್ರಿಕಾಗೋಷ್ಠಿ ನಡೆಸಿದ್ದರು. ಭಾರತೀಯ ಸಚಿವರ ಸಂದರ್ಶನವನ್ನು ಆಸ್ಟ್ರೇಲಿಯಾ ಟುಡೆಯು ವರದಿ ಮಾಡಿತ್ತು. ಈ ಪತ್ರಿಕಾಗೋಷ್ಠಿ ನಡೆದ ಕೆಲವೇ ಗಂಟೆಗಳ ನಂತರ ಕೆನಡಾದಲ್ಲಿ ಆಸ್ಟ್ರೇಲಿಯದ ಸುದ್ದಿವಾಹಿನಿಯ ಸಾಮಾಜಿಕ ಮಾಧ್ಯಮ (ಸೋಷಿಯಲ್‌ ಮೀಡಿಯಾ ಖಾತೆ) ಹ್ಯಾಂಡಲ್‌ಗಳು ಹಾಗೂ ಪೇಜ್‌ಗಳ ಮೇಲೆ ಕೆನಡಾ ನಿರ್ಬಂಧ ವಿಧಿಸಿದೆ ಎನ್ನುವ ವರದಿಗಳು ಬರುತ್ತಿವೆ. ಕೆನಡಾ ಸರ್ಕಾರದ ಈ ನಡೆಗೆ ಭಾರತ ತನ್ನ ಅಸಮಾಧಾನವನ್ನು ದಾಖಲಿಸಿದೆ.

Canada again showed little wit against India

ಈ ರೀತಿಯ ಕ್ರಮಗಳು ವಾಕ್ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ಕೆನಡಾದ ಬೂಟಾಟಿಕೆ ನಡೆಯನ್ನು ಪ್ರದರ್ಶಿಸುತ್ತದೆ ಎಂದು ಭಾರತ ಹೇಳಿದೆ. ಜೈ ಶಂಕರ್‌ ಅವರು ಆಸ್ಟ್ರೇಲಿಯಾ ಪ್ರವಾಸದಲ್ಲಿ ಇದ್ದಾರೆ. ಆಸ್ಟ್ರೇಲಿಯಾದ ಪ್ರಧಾನಿ ಆ್ಯಂಟೋನಿ ಆಲ್ಬನೀಸ್ ಅವರನ್ನು ಭೇಟಿಯಾಗಿರುವ ಜೈ ಶಂಕರ್‌ ಅವರು ಹಲವು ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು, ಕೆನಾಡದ ಸಣ್ಣತನವನ್ನು ಇದು ಪ್ರದರ್ಶಿಸುತ್ತದೆ. ಪತ್ರಿಕಾಗೋಷ್ಠಿ ನಡೆದ ಕೆಲವೇ ಗಂಟೆಗಳಲ್ಲಿ ಈ ಬೆಳವಣಿಗೆ ನಡೆದಿದೆ. ಜೈಶಂಕರ್ ಅವರ ಭೇಟಿಯ ಕುರಿತು ಹಲವಾರು ಲೇಖನಗಳನ್ನು ಈ ಔಟ್‌ಲೆಟ್ (ಮಾಧ್ಯಮ) ಹೊರತಂದಿತ್ತು. ಆದರೆ, ಕೆನಡಾ ಸರ್ಕಾರ ಈ ಮಾಹಿತಿಯನ್ನು ಜನರಿಗೆ ತಲುಪದಂತೆ ಮಾಡಿದೆ ಎನ್ನುವ ಮಾಹಿತಿ ನಮಗೆ ಬಂದಿದೆ. ಆದಾಗ್ಯೂ, ಇವು ಸ್ವಾತಂತ್ರ್ಯದ ಬಗ್ಗೆ ಕೆನಡಾದ ಬೂಟಾಟಿಕೆಯನ್ನು ಮತ್ತೊಮ್ಮೆ ಎತ್ತಿ ತೋರಿಸುವ ಕ್ರಮಗಳಾಗಿವೆ ಎಂದು ಅವರು ಹೇಳಿದ್ದಾರೆ.

ಭಾರತದ ರಾಜತಾಂತ್ರಿಕತೆಯ ಬಗ್ಗೆ ಕೆನಡಾ ಪುರಾವೆಗಳಿಲ್ಲದೆ ಆರೋಪಗಳನ್ನು ಮಾಡುತ್ತಿದೆ ಇದು ಸ್ವೀಕಾರಾರ್ಹವಲ್ಲ ಎಂದು ಭಾರತ ಹೇಳಿದೆ. ಕೆನಡಾದಲ್ಲಿ ರಾಜಕೀಯ ಉದ್ದೇಶಗಳಿಗಾಗಿ ಭಾರತ ವಿರೋಧಿಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಹೀಗಾಗಿ, ಆಸ್ಟ್ರೇಲಿಯಾ ಟುಡೆ ಚಾನಲ್ ಅನ್ನು ಏಕೆ ನಿರ್ಬಂಧಿಸಲಾಗಿದೆ ಎನ್ನುವುದರ ಬಗ್ಗೆ ಅಂದಾಜು ಸಿಗಬಹುದು ಎಂದು ರಣಧೀರ್‌ ಅವರು ಅಭಿಪ್ರಾಯಪಟ್ಟಿದ್ದಾರೆ.

ಭಾರತದ ರಾಯಭಾರಿ ಅಧಿಕಾರಿಗಳಿಗೆ ಕಳೆದ ವಾರ ಕೆನಡಾ ಸರ್ಕಾರವು ನೀವು ಆಡಿಯೋ ಮತ್ತು ವಿಡಿಯೋ ಕಣ್ಗಾವಲಿನಲ್ಲಿದ್ದೀರಿ ಎಂದು ಹೇಳಿತ್ತು ಎಂದು ಭಾರತ ಹೇಳಿತ್ತು. ಅಲ್ಲದೇ ಕೆನಡಾದ ಈ ಕ್ರಮವನ್ನು ರಾಜತಾಂತ್ರಿಕ ಸಂಪ್ರದಾಯಗಳ "ಘೋರ ಉಲ್ಲಂಘನೆ" ಎಂದು ಕರೆದ ಭಾರತ, ಕೆನಡಾ ತನ್ನ ಕಿರುಕುಳ ಮತ್ತು ಬೆದರಿಕೆಯನ್ನು ಸಮರ್ಥಿಸಲು ಸಾಧ್ಯವಿಲ್ಲ. ಈ ಸಂಬಂಧ ಕೆನಡಾ ಸರ್ಕಾರಕ್ಕೆ ಭಾರತದ ಪ್ರತಿಭಟನೆಯನ್ನು ದಾಖಲಿಸಿರುವುದಾಗಿ ಭಾರತದ ವಿದೇಶಾಂಗ ಇಲಾಖೆಯ ಪ್ರಕಟಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+