California Wildfire: ಮನೆ, ಕಾರು, ಊರು ಎಲ್ಲಾ ಬಿಟ್ಟು ಓಡಿ ಹೋಗುತ್ತಿರುವ ಜನ!
ಅಮೆರಿಕದಲ್ಲಿ ಪರಿಸ್ಥಿತಿ ಕೈಮೀರಿ ಹೋಗಿದೆ, ಹಾಲಿವುಡ್ ಸಿನಿಮಾಗಳಲ್ಲಿ ಹೀರೋ ಆಗಿದ್ದು ಕೋಟ್ಯಂತರ ಜನರನ್ನು ಕಾಪಾಡಿದಂತೆ ಡ್ರಾಮಾ ಮಾಡಿದವರು ತಮ್ಮ ಮನೆಯನ್ನೇ ಇದೀಗ ಕಳೆದುಕೊಂಡು ಓಡಿ ಹೋಗಿದ್ದಾರೆ. ಒಂದಲ್ಲ.. ಎರಡಲ್ಲ... ಸುಮಾರು 10,000ಕ್ಕೂ ಹೆಚ್ಚು ಮನೆಗಳು & ಕಟ್ಟಡಗಳು ಭಸ್ಮವಾಗಿವೆ, ಅಲ್ಲದೆ ಲೆಕ್ಕಕ್ಕೆ ಸಿಗದಷ್ಟು ಕಾರುಗಳು ಕೂಡ ಇದೀಗ ಕಾಡಿನ ಬೆಂಕಿಗೆ ನಾಶವಾಗಿವೆ.
ಕ್ಯಾಲಿಫೋರ್ನಿಯಾ ಅದ್ರಲ್ಲೂ ಲಾಸ್ ಏಂಜಲೀಸ್ ಈಗ ಬೆಂಕಿಯ ಕೂಪವಾಗಿ ಬದಲಾಗಿದ್ದು, ರಾತ್ರಿ ಕತ್ತಲೆಯಲ್ಲಿ ನೋಡಲು ಥೇಟ್ ನರಕದ ರೀತಿ ಭಾಸವಾಗುತ್ತಿದೆ. ಹಾಗೇ ಬೆಂಕಿ ಕಿಡಿಗೆ ಗಾಳಿ ಜೋರಾಗಿ ಬೀಸುತ್ತಾ ಕಾಡ್ಗಿಚ್ಚು ಮತ್ತಷ್ಟು ಸ್ಥಳಗಳಿಗೆ ಹಬ್ಬಿಕೊಳ್ಳುತ್ತಿದೆ. ಇದು ಭಾರಿ ಆತಂಕ ಸೃಷ್ಟಿ ಮಾಡುತ್ತಿದೆ. ಜನರು ಏನು ಮಾಡಬೇಕು? ಎಲ್ಲಿ ಹೋಗಬೇಕು? ಅನ್ನೋದನ್ನ ತಿಳಿಯದೆ ಸಮುದ್ರದ ತೀರಗಳಲ್ಲಿ ನಿಂತು ಕಣ್ಣೀರು ಹಾಕುತ್ತಿದ್ದಾರೆ. ಹಾಗೇ ಅಮೆರಿಕದ ಜನ ಇದೀಗ ಅಧ್ಯಕ್ಷ ಜೋ ಬೈಡನ್ & ಅವರ ಆಡಳಿತದ ವಿರುದ್ಧ ರೊಚ್ಚಿಗೆದ್ದಿದ್ದಾರೆ.

ಅಮೆರಿಕದ ಕ್ಯಾಲಿಫೋರ್ನಿಯಾ & ಲಾಸ್ ಏಂಜಲೀಸ್ ಭಾಗದಲ್ಲಿ ಹಬ್ಬಿರುವ ಕಾಡಿನ ಬೆಂಕಿ ಇದೀಗ ಎಲ್ಲವನ್ನೂ ಸರ್ವನಾಶ ಮಾಡುತ್ತಿದೆ. ಅದರಲ್ಲೂ ಕ್ಯಾಲಿಫೋರ್ನಿಯಾ ಸುತ್ತಮುತ್ತ ಇದೀಗ ಸುಮಾರು 10,000 ಮನೆಗಳು ಭಸ್ಮವಾಗಿ ಹೋಗಿದ್ದು, ಲಕ್ಷಾಂತರ ಜನಗಳ ಬದುಕು ಈ ಮೂಲಕ ಬೀದಿಗೆ ಬಿದ್ದಿದೆ. ಜನರು ಚಿಂತೆಯಲ್ಲೇ ನರಳುತ್ತಿದ್ದಾರೆ. ಮುಂದಿನ ಪರಿಸ್ಥಿತಿಗೆ ಹೆದರಿ ಕೆಲವರು ಊರು ಬಿಡುತ್ತಿದ್ದಾರೆ.
ನೀರಿನ ಕೊರತೆ & ಜನರ ಪರದಾಟ
ಅಮೆರಿಕದಲ್ಲಿ ಕಾಡ್ಗಿಚ್ಚು ಧಗಧಗ ಹೊತ್ತಿ ಉರಿದು, ಲಕ್ಷಾಂತರ ಜನರ ಜೀವನ ಬೀದಿಗೆ ಬೀಳುವ ರೀತಿ ಮಾಡಿದೆ. ಜಗತ್ತಿನ ದೊಡ್ಡಣ್ಣ ಅಂತಾ ಕರೆಸಿಕೊಳ್ಳುವ ಅಮೆರಿಕ ಈಗ ಕೇವಲ ಒಂದು ಕಾಡ್ಗಿಚ್ಚು ಕಂಟ್ರೋಲ್ ಮಾಡಲು ಆಗದೆ ಒದ್ದಾಡುತ್ತಿದೆ. ಲಕ್ಷಾಂತರ ಜನರು ಜೀವ ಭಯ & ಮನೆ ಕಳೆದುಕೊಳ್ಳುವ ಆತಂಕದಲ್ಲಿ ನರಳುತ್ತಿದ್ದಾರೆ. ಇಂತಹ ಸಮಯದಲ್ಲೇ ಬೆಂಕಿ ಆರಿಸಿ, ಪರಿಸ್ಥಿತಿ ಹಿಡಿತಕ್ಕೆ ತರಲು ನೀರಿನ ಕೊರತೆ ಎದುರಾಗಿದೆ.
2,00,000 ಜನ ಶಿಫ್ಟ್
ಒಟ್ನಲ್ಲಿ ಪಶ್ಚಿಮ ಅಮೆರಿಕ ಕರಾವಳಿ ಭಾಗದ ಮರಳುಗಾಡು ಪ್ರದೇಶದಲ್ಲಿ ಭಾರೀ ದೊಡ್ಡ ಕಾಡ್ಗಿಚ್ಚು ಹಬ್ಬಿಕೊಂಡಿದೆ. ಹೀಗೆ ಕಾಡಿನ ಬೆಂಕಿ ಇದೀಗ ನಾಡನ್ನು ಸುಡುತ್ತಾ ಇದ್ದು, ಲಕ್ಷಾಂತರ ಜನರು ಜೀವ ಭಯದಲ್ಲಿ ಊರು ಬಿಡುತ್ತಿದ್ದಾರೆ. ಕ್ಯಾಲಿಫೋರ್ನಿಯಾ & ಲಾಸ್ ಏಂಜಲೀಸ್ ಭಾಗದಲ್ಲಿ ಕಾಡಿನ ಬೆಂಕಿ ತೀವ್ರವಾಗಿ ಹರಡುತ್ತಿದೆ. ಈಗಾಗಲೇ 2,00,000 ಜನರನ್ನ ಶಿಫ್ಟ್ ಮಾಡಲು ಆದೇಶ ನೀಡಲಾಗಿದೆ. ಇಂತಹ ಸಮಯದಲ್ಲೇ, ಹಾಲಿವುಡ್ ಹೃದಯಕ್ಕೂ ಬೆಂಕಿ ಬಿದ್ದಿದೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications