ದುಬೈನಲ್ಲಿ ಭಾರತೀಯನಿಗೆ ಬಂಪರ್ ಲಾಟರಿ: ಮುಂದಿನ 25 ವರ್ಷಗಳವರೆಗೆ ಪ್ರತಿ ತಿಂಗಳು ₹ 5.5 ಲಕ್ಷ ಹಣ
ಬೆಂಗಳೂರು, ಜುಲೈ 29: ದುಬೈನಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ವಾಸ್ತುಶಿಲ್ಪಿಯೊಬ್ಬರಿಗೆ ಯುಎಇಯಲ್ಲಿ ಹೊಸ ಬಂಪರ್ ಬಹುಮಾನ ಲಭಿಸಿದ್ದು, ಮೊದಲ ವಿಜೇತ ಎಂದು ಹೆಸರಿಸಲ್ಪಟ್ಟಿದ್ದಾರೆ. ಅವರು ಮುಂದಿನ 25 ವರ್ಷಗಳವರೆಗೆ ಪ್ರತಿ ತಿಂಗಳು ₹ 5.5 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಪಡೆಯುತ್ತಾರೆ.
ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಉತ್ತರ ಪ್ರದೇಶದ ಮೊಹಮ್ಮದ್ ಆದಿಲ್ ಖಾನ್ ಅವರನ್ನು ಫಾಸ್ಟ್ 5 ಡ್ರಾದ ಮೆಗಾ ಬಹುಮಾನ ವಿಜೇತ ಎಂದು ಹೆಸರಿಸಲಾಗಿದೆ ಎಂದು ಗಲ್ಫ್ ನ್ಯೂಸ್, ದೈನಂದಿನ ಇಂಗ್ಲಿಷ್ ಭಾಷೆಯ ಪತ್ರಿಕೆ ವರದಿ ಮಾಡಿದೆ.

ಉತ್ತರ ಪ್ರದೇಶದ ಮೊಹಮ್ಮದ್ ಆದಿಲ್ ಖಾನ್ ದುಬೈನಲ್ಲಿ ರಿಯಲ್ ಎಸ್ಟೇಟ್ ಕಂಪನಿಯೊಂದರಲ್ಲಿ ಇಂಟೀರಿಯರ್ ಡಿಸೈನ್ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಈಗ ಲಾಟರಿ ಗೆದ್ದಿರುವ ಅವರು 25 ವರ್ಷಗಳವರೆಗೆ ತಿಂಗಳಿಗೆ 25,000 (5,59,822) ಪಡೆಯಲಿದ್ದಾರೆ.
ಈ ಗೆಲುವಿಗೆ ತಾನು ಕೃತಜ್ಞನಾಗಿದ್ದೇನೆ ಮತ್ತು ಇದು ಅತ್ಯಂತ ಮಹತ್ವದ ಸಮಯದಲ್ಲಿ ಬಂದಿದೆ. ನನ್ನ ಕುಟುಂಬಕ್ಕೆ ನಾನೇ ದುಡಿದು ನಾನೇ ಸಂಪಾದಿಸುವವನು. ನನ್ನ ಸಹೋದರ ಸಾಂಕ್ರಾಮಿಕ ಸಮಯದಲ್ಲಿ ನಿಧನರಾಗಿದ್ದು, ನಾನು ಅವರ ಕುಟುಂಬವನ್ನೂ ಸೇರಿ ನೋಡಿಕೊಳ್ಳುತ್ತಿದ್ದೇನೆ. ನನಗೆ ವಯಸ್ಸಾದ ಪೋಷಕರು ಮತ್ತು ಐದು ವರ್ಷದ ಮಗಳು ಇದ್ದಾರೆ. ಹೀಗಾಗಿ ಹೆಚ್ಚುವರಿ ಹಣ ಸಕಾಲಕ್ಕೆ ಬರುತ್ತದೆ ಎಂದರು.
ಸುದ್ದಿ ತಿಳಿದ ನಂತರ ತನಗೆ ಆಶ್ಚರ್ಯವಾಯಿತು. ನಾನು ನನ್ನ ಮನೆಯವರಿಗೂ ಹೇಳಿದ್ದೇನೆ ಮತ್ತು ಅವರು ಅದನ್ನು ನಂಬಲು ಸಾಧ್ಯವಾಗಲಿಲ್ಲ. ಅವರು ಸುದ್ದಿಯ ಸತ್ಯಾಸತ್ಯತೆಗಾಗಿ ಎರಡು ಬಾರಿ ಪರಿಶೀಲಿಸಲು ಹೇಳಿದರು.
ಎಮಿರೇಟ್ಸ್ ಡ್ರಾವನ್ನು ಆಯೋಜಿಸುವ ಟೈಚೆರೋಸ್‌ನ ಮಾರ್ಕೆಟಿಂಗ್ ಮುಖ್ಯಸ್ಥ ಪಾಲ್ ಚಾಡರ್ ಮಾತನಾಡಿ, ಫಾಸ್ಟ್ 5 ಗಾಗಿ ನಮ್ಮ ಮೊದಲ ವಿಜೇತರನ್ನು ಬಿಡುಗಡೆ ಮಾಡಿದ ಎಂಟು ವಾರಗಳಿಗಿಂತ ಕಡಿಮೆ ಅವಧಿಯಲ್ಲಿ ಘೋಷಿಸಲು ನಾವು ಸಂತೋಷಪಡುತ್ತೇವೆ. ನಾವು ಇದನ್ನು ಫಾಸ್ಟ್ 5 ಎಂದು ಕರೆಯಲು ಕಾರಣವೆಂದರೆ ಅದು ಮಲ್ಟಿ ಮಿಲಿಯನೇರ್ ಆಗಲು ವೇಗವಾದ ಮಾರ್ಗವಾಗಿದೆ ಎಂದರು.
ಹೆಚ್ಚಿನ ಪಾವತಿಗಳ ಹಿಂದಿನ ಕಲ್ಪನೆಯು ವಿಜೇತರನ್ನು ಸುರಕ್ಷಿತಗೊಳಿಸುವುದಾಗಿದೆ. ಈ ರೀತಿಯ ಬಹುಮಾನ ಗೆಲುವು ವಿಜೇತರಿಗೆ ಮುಂದಿನ 25 ವರ್ಷಗಳವರೆಗೆ ನಿಯಮಿತ ಪಾವತಿಯನ್ನು ಮಾಡಲಾಗುತ್ತದೆ ಎಂದು ಅವರು ಹೇಳಿದರು.












Click it and Unblock the Notifications