ಭಾರತಕ್ಕೆ 3,000 ವೀಸಾ ಅನುಮೋದಿಸಿದ ರಿಷಿ ಸುನಕ್
ನವದೆಹಲಿ, ನವೆಂಬರ್ 16: ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಪ್ರತಿವರ್ಷ ಭಾರತದಿಂದ ಯುವ ವೃತ್ತಿಪರರಿಗೆ ಯುಕೆಯಲ್ಲಿ ಕೆಲಸ ಮಾಡಲು 3,000 ವೀಸಾಗಳಿಗೆ ಅನುಮೋದನೆ ನೀಡಿದ್ದಾರೆ.
'ಹೊಸ ಯುಕೆ ಇಂಡಿಯಾ ಯಂಗ್ ಪ್ರೊಫೆಷನಲ್ ಸ್ಕೀಮ್' ಅಡಿಯಲ್ಲಿ ಈ ಹೊಸ ಯೋಜನೆಯಿಂದ ಪ್ರಯೋಜನ ಪಡೆಯುವ ಮೊದಲ ರಾಷ್ಟ್ರ ಭಾರತವಾಗಲಿದೆ ಎಂದು ಬ್ರಿಟಿಷ್ ಸರ್ಕಾರ ಹೇಳಿದೆ. ಇದರಿಂದ ಪ್ರತಿ ವರ್ಷವೂ 18ರಿಂದ 30 ವರ್ಷದೊಳಗಿನ ಪದವಿ ಪಡೆದ ಭಾರತೀಯ ನಾಗರಿಕರಿಗೆ ಬ್ರಿಟನ್‌ಗೆ ಭೇಟಿ ನೀಡಲು ಎರಡು ವರ್ಷಗಳವರೆಗೆ ಕೆಲಸ ಮಾಡಲು ಅನುವು ಮಾಡುತ್ತದೆ.
ಜಿ 20 ಶೃಂಗಸಭೆಯ 17ನೇ ಆವೃತ್ತಿಯ ಬದಿಯಲ್ಲಿ ಸುನಕ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಕೆಲವೇ ಗಂಟೆಗಳ ನಂತರ ಈ ಪ್ರಕಟಣೆ ಹೊರಬಂದಿದೆ. ಕಳೆದ ತಿಂಗಳು ಬ್ರಿಟನ್ ಪ್ರಧಾನ ಮಂತ್ರಿಯಾಗಿ ಆಧಿಕಾರ ವಹಿಸಿಕೊಂಡ ಇನ್ಫೋಸಿಸ್ ನಾರಾಯಾಣ ಮೂರ್ತಿ ಅವರ ಅಳಿಯ ರಿಷಿ ಸುನಕ್ ಅವರಿಗೆ ಇದು ಮೊದಲ ಅಂತಾರಾಷ್ಟ್ರೀಯ ಸಭೆಯಾಗಿದೆ.

ಯುಕೆ ಹಾಗೂ ಭಾರತ ಯಂಗ್ ಪ್ರೊಫೆಷನಲ್ಸ್ ಸ್ಕೀಮ್ ಅನ್ನು ಮಂಗಳವಾರ ದೃಢಿಕರಿಸಲಾಗಿದೆ. 18ರಿಂದ 30 ವರ್ಷ ವಯಸ್ಸಿನ ಪದವಿ ಪಡೆದ ಶಿಕ್ಷಿತ ಭಾರತೀಯ ಪ್ರಜೆಗಳಿಗೆ ಬ್ರಿಟನ್‌ಗೆ ಬರಲು ಹಾಗೂ ಎರಡು ವರ್ಷಗಳ ಕಾಲ ಕೆಲಸ ಮಾಡಲು 3,000 ವೀಸಾಗಳನ್ನು ನೀಡಲಾಗುತ್ತದೆ ಎಂದು ಬ್ರಿಟನ್ ಪ್ರಧಾನಿ ಕಚೇರಿ ಟ್ವೀಟ್ ಮಾಡಿದೆ.
ಯುತ್ ಮೊಬಿಲಿಟಿ ಸ್ಕೀಮ್‌ಗಿಂತ ಭಿನ್ನವಾಗಿ ಯಾವುದೇ ಅರ್ಹತೆ ಅಥವಾ ಇಂಗ್ಲಿಷ್ ಭಾಷೆಯ ಅವಶ್ಯಕತೆ ಇರಲ್ಲ. ಯುವ ವೃತ್ತಿಪರರು ಈ ಯೋಜನೆ ಅಡಿಯಲ್ಲಿ ಅಭ್ಯರ್ಥಿಗಳು ಕನಿಷ್ಠ ಮೂರು ವರ್ಷಗಳ ಉನ್ನತ ಶಿಕ್ಷಣಕ್ಕೆ ಸಮಾನವಾದ ಡಿಪ್ಲೊಮಾ ಅಥವಾ ಪದವಿಯನ್ನು ಪಡೆದಿರಬೇಕು ಎಂದು ಹೇಳಿದೆ. ವೀಸಾ ಪಡೆಯಲು ಬ್ರಿಟನ್‌ನಲ್ಲಿ ಉದ್ಯೋಗದಾತರಿಂದ ಕೆಲಸದ ಆಫರ್ ಲೆಟರ್ ಅಗತ್ಯವಿರುತ್ತದೆ. ಆದ್ಯಾಗೂ ವೀಸಾಗೆ ಅರ್ಹತೆಗಳನ್ನು ಇನ್ನೂ ಅಂತಿಗೊಳಿಸಿಲ್ಲ.
ವೀಸಾ ನಿಯಮಗಳು ಇನ್ನೂ ಅಂತಿಮವಾಗಿಲ್ಲದ್ದರಿಂದ ಲಕ್ಷಾಂತರ ಭಾರತೀಯ ಪ್ರಜೆಗಳು ಅರ್ಹತೆಗಳನ್ನು ಪೂರೈಸುವ ಮೂಲಕ ಈ ವೀಸಾಗೆ ಅರ್ಹರಾಗುವ ಸಾಧ್ಯತೆ ಇದೆ. ಇಲ್ಲಿ ಲಾಟರಿ ಮೂಲಕವೂ ಆಯ್ಕೆಯಾಗುವ ಸಾಧ್ಯತೆ ಇದೆ. ಆದರೆ ಇನ್ನು ಕೆಲವು ದೇಶಗಳಲ್ಲಿ ಯೂತ್ ಮೊಬಿಲಿಟಿ ವೀಸಾಕ್ಕೆ ಸ್ಥಳಗಳು ಹೆಚ್ಚು ಸೀಮಿತವಾಗಿರುತ್ತದೆ.
ಈ ವರ್ಗ ದೊಡ್ಡ ಟೆಕ್ ಕಂಪೆನಿಗಳಿಂದ ಪ್ರಾಬಲ್ಯ ಹೊಂದಬಹುದು ಎಂಬ ಆತಂಕ ಕೂಡ ಇದೆ. ಆದರೆ ಇದು ಯುಕೆಗೆ ಪ್ರತಿಭೆಗಳನ್ನು ಒದಗಿಸಲು ಅಗ್ಗದ ಮಾರ್ಗವಾದರೆ ಸೀಮಿತ ಸ್ಥಳಗಳ ಮೇಲೆ ಏಕಸ್ವಾಮ್ಯವನ್ನು ಸಾಧಿಸಲು ಕಾರಣವಾಗುತ್ತದೆ ಎನ್ನಲಾಗಿದೆ.












Click it and Unblock the Notifications