18 ವರ್ಷದವರೆಗೆ ಎಲ್ಲಾ ಯುಕೆ ವಿದ್ಯಾರ್ಥಿಗಳು ಗಣಿತ ಅಧ್ಯಯನ ಮಾಡಲಿ: ರಿಷಿ ಸುನಕ್ ಹೀಗೆ ಆಶಿಸಿದ್ದೇಕೆ?
ಲಂಡನ್, ಡಿಸೆಂಬರ್ 05: 18 ವರ್ಷದವರೆಗೆ ಎಲ್ಲಾ ಯುಕೆ ವಿದ್ಯಾರ್ಥಿಗಳು ಗಣಿತ ಅಧ್ಯಯನ ಮಾಡಬೇಕೆಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಆಶಿಸಿದ್ದಾರೆ.
2023 ತಾವು ಮಾಡಿದ ಮೊದಲ ಭಾಷಣದಲ್ಲಿ ಗಣಿತ ವಿಷಯದ ಮೇಲೆ ಮಹತ್ವದ ಬೆಳಕು ಚೆಲ್ಲಿದ್ದಾರೆ.
'ಎಲ್ಲಾ ವಿದ್ಯಾರ್ಥಿಗಳನ್ನು 18 ವರ್ಷ ವಯಸ್ಸಿನವರೆಗೆ ಯಾವುದಾದರೂ ರೂಪದಲ್ಲಿ ಗಣಿತವನ್ನು ಅಧ್ಯಯನ ಮಾಡುವ ಯೋಜನೆಗಳನ್ನು ರೂಪಿಸುತ್ತಿರುವುದಾಗಿ' ಬುಧವಾರ ಹೇಳಿದ್ದಾರೆ.

'ನಮ್ಮ ಮಕ್ಕಳು 18 ವರ್ಷ ವಯಸ್ಸಿನವರೆಗೆ ಯಾವುದೇ ರೀತಿಯ ಗಣಿತವನ್ನು ಅಧ್ಯಯನ ಮಾಡದ ಕೆಲವೇ ದೇಶಗಳಲ್ಲಿ ನಮ್ಮದೂ ಒಂದಾಗಿದೆ. ಪ್ರಸ್ತುತ 16-19 ವರ್ಷ ವಯಸ್ಸಿನವರಲ್ಲಿ ಅರ್ಧದಷ್ಟು ಜನರಷ್ಟೇ ಗಣಿತವನ್ನು ಅಧ್ಯಯನ ಮಾಡುತ್ತಾರೆ' ಎಂದು ಸುನಕ್ ತಿಳಿಸಿದ್ದಾರೆ.
'ದತ್ತಾಂಶಗಳು ಎಲ್ಲೆಡೆ ಕಾರ್ಯಗತವಾಗಿರುವ ಮತ್ತು ಅಂಕಿಅಂಶಗಳು ಪ್ರತಿ ಕೆಲಸಕ್ಕೂ ಆಧಾರವಾಗಿರುವ ಜಗತ್ತಿನಲ್ಲಿ ನಾವಿದ್ದೇವೆ. ಆ ಕೌಶಲ್ಯಗಳಿಲ್ಲದೆ ನಮ್ಮ ಮಕ್ಕಳನ್ನು ಜಗತ್ತಿಗೆ ಮುಂದೆ ಬಿಡುವುದು ಸರಿಯಲ್ಲ. ಇದು ನಮ್ಮ ಮಕ್ಕಳನ್ನು ನಿರಾಸೆಗೊಳಿಸುತ್ತದೆ. ಆದ್ದರಿಂದ ನಾವು ಇನ್ನೂ ಮುಂದೆ ಹೋಗಬೇಕಾಗಿದೆ' ಎಂದು ಭಾರತ ಮೂಲದ ಪ್ರಧಾನಿ ರಿಷಿ ಸುನುಕ್ ಪ್ರತಿಪಾದನೆ ಹೇಳಿದರು.
ಸಂಖ್ಯಾಶಾಸ್ತ್ರವನ್ನು ಶಿಕ್ಷಣ ವ್ಯವಸ್ಥೆಯ ಕೇಂದ್ರ ಉದ್ದೇಶವನ್ನಾಗಿ ರೂಪಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

'ಎಲ್ಲರಿಗೂ ಗಣಿತದಲ್ಲಿ ಎ ಮಟ್ಟದ ಅಂಕ ಬರಬೇಕೆಂದು ಏನಿಲ್ಲ. ಇದು ಬೇರೆ ರೀತಿಯಲ್ಲಿ ಅರ್ಥೈಸಬೇಕಾಗಿಲ್ಲ. ಆದರೆ 18 ರವರೆಗೆ ಗಣಿತದ ಕೆಲವು ಪ್ರಕಾರಗಳನ್ನು ಅಧ್ಯಯನ ಮಾಡಬೇಕಿದೆ. ಎಲ್ಲಾ ರೀತಿಯ ಮಕ್ಕಳನ್ನು ತಲೆಯಲ್ಲಿ ಇರಿಸಿಕೊಂಡು ಈ ಯೋಜನೆಯನ್ನು ರೂಪಿಸುತ್ತಿದ್ದೇವೆ' ಎಂದು ಅವರು ಹೇಳಿದರು.
ಬಿ-ಟೆಕ್ ಸೇರಿದಂತೆ ಸೃಜನಶೀಲ ಕಲೆಯನ್ನು ಅಧ್ಯಯನ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಈ ಯೋಜನೆಯ ಅರ್ಥವೇನು ಎಂಬುದು ಸ್ಪಷ್ಟವಾಗಿ ತಿಳಿಯದು. ಯಾವುದೇ ಹೊಸ ವಿದ್ಯಾರ್ಹತೆಗಳನ್ನು ದಿಢೀರನೇ ಯೋಜಿಸಲಾಗುವುದಿಲ್ಲ' ಎಂದು ಪ್ರತಿಪಾದಿಸಿದರು.
ಅಸ್ತಿತ್ವದಲ್ಲಿರುವ ಅರ್ಹತೆಗಳನ್ನು ವಿಸ್ತರಿಸುವುದರ ಜೊತೆಗೆ ಸರ್ಕಾರವು ಹೆಚ್ಚು ಹೊಸ ಆಯ್ಕೆಗಳನ್ನು ಅನ್ವೇಷಿಸುತ್ತಿದೆ ಎಂದು ತಿಳಿಸಿದರು.
ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿದ ತಂತ್ರಜ್ಞಾನಕ್ಕಿಂತ ಕಲ್ಪನೆಯು ಮಹತ್ವಾಕಾಂಕ್ಷೆಯಾಗಿ ಕಂಡುಬರುತ್ತದೆ. ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಬಗ್ಗೆ ಯಾವುದೇ ಯಂತ್ರಶಾಸ್ತ್ರ ಕಂಡುಕೊಂಡಿಲ್ಲ ಎಂದೂ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮುಂದಿನ ಸಾರ್ವತ್ರಿಕ ಚುನಾವಣೆಯ ಮೊದಲು ಈ ಯೋಜನೆಯನ್ನು ಕಾರ್ಯಗತಗೊಳಿಸಲು ಸಾಧ್ಯವಿಲ್ಲ ಎಂದು ಸರ್ಕಾರ ಒಪ್ಪಿಕೊಂಡಿದೆ. ಆದರೂ ಪ್ರಧಾನಿಯವರು ಸಂಸತ್ತಿನಲ್ಲಿ ಈ ಯೋಜನೆಯನ್ನು ಕಾರ್ಯಗತಗೊಳಿಸಲು ಕೆಲಸ ಆರಂಭಿಸಿದ್ದಾಗಿ ಹೇಳಲಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಯುಕೆಯಲ್ಲಿ ಗಣಿತ ಶಿಕ್ಷಕರ ಕೊರತೆ ಇರುವುದೂ ಕಂಡುಬಂದಿದೆ.
ಕನ್ಸರ್ವೇಟಿವ್ ಪಕ್ಷದ ರಿಷಿ ಸುನಕ್ ಅವರು ಕಳೆದ ವರ್ಷ ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ಅವರು ಭಾರತ ಮೂಲದವರು. ಅವರ ಪತ್ನಿ ಇನ್ಸಫೋಸಿಸ್‌ನ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ದಂಪತಿಗಳ ಪುತ್ರಿ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications