ಓಡಿ.. ಎಲ್ಲಾ ಓಡಿ.. ಬಾಂಬ್ ಬಿತ್ತು ಜೀವ ಉಳಿಸಿಕೊಳ್ಳಿ!
ಪ್ಯೊಂಗ್ಯಾಂಗ್/ಟೋಕಿಯೋ: ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆಟಾಟೋಪ ಮುಂದುವರಿದಿದ್ದು, ಜಪಾನ್ ಜನರು ಸಾವಿನ ನೆರಳಲ್ಲೇ ಬದುಕುವಂತಾಗಿದೆ. ದಕ್ಷಿಣ ಕೊರಿಯಾ (Korea) ಮೇಲಿನ ಸಿಟ್ಟಿಗೆ ಕಿಮ್ ಉಡಾಯಿಸಿದ ಕ್ಷಿಪಣಿ ಜಪಾನ್ (Japan) ಮೇಲೆ ಬೀಳುವ ಸಂದರ್ಭ ಸೃಷ್ಟಿಯಾಗಿ, ಲಕ್ಷಾಂತರ ಜನ ಜೀವ ಕೈಯಲ್ಲಿಡಿದು ಓಡಿದ ಘಟನೆ ಜಪಾನ್‌ನಲ್ಲಿ ನಡೆದಿದೆ.
ಅಮೆರಿಕ ಜೊತೆ ದಕ್ಷಿಣ ಕೊರಿಯಾ ಜಂಟಿ ಸಮರಭ್ಯಾಸ ನಡೆಸಿದ ನಂತರ ಸಂಪೂರ್ಣವಾಗಿ ಸಂಪರ್ಕ ಕಡಿದುಕೊಂಡಿದೆ ಉತ್ತರ ಕೊರಿಯಾ. ಈ ಸಿಟ್ಟನ್ನು ಮತ್ತೊಂದು ನೆರೆ ರಾಷ್ಟ್ರ ಜಪಾನ್ ಮೇಲೆ ಹಾಕುತ್ತಿದೆ ಉತ್ತರ ಕೊರಿಯಾ. ತನ್ನ ಮಿಲಿಟರಿ ಸಾಮರ್ಥ್ಯದ ಮೂಲಕ ಎಚ್ಚರಿಕೆ ನೀಡುತ್ತಾ ಬಂದಿರುವ ಕಿಮ್ ಜಾಂಗ್ ಉನ್, ಇದೀಗ ಮತ್ತೊಂದು ಕ್ಷಿಪಣಿ ಪರೀಕ್ಷೆ ನಡೆಸಿ ಜಪಾನ್ ಎದೆ ನಡುಗುವಂತೆ ಮಾಡಿದ್ದ. ಆದರೆ ಕಿಮ್ ಉಡಾಯಿಸಿದ ಕ್ಷಿಪಣಿ ಜಪಾನ್‌ನ ಹೊಕ್ಕೈಡೊ ಪ್ರದೇಶದ ಮೇಲೆ ಬೀಳುವ ಅಪಾಯ ಎದುರಾಗಿತ್ತು.

ಓಡಿ ಓಡಿ.. ಎಲ್ಲಾ ಓಡಿ!
ಗುರುವಾರ ಬೆಳಗ್ಗೆ ಉತ್ತರ ಕೊರಿಯಾ ದಿಢೀರ್ ಪರಮಾಣು ಸಾಮರ್ಥ್ಯದ ಕ್ಷಿಪಣಿ ಉಡಾಯಿಸಿದೆ ಎಂಬ ವಿಚಾರ ಗೊತ್ತಾಗತ್ತಿದ್ದಂತೆ ಜಪಾನ್ ಅಲರ್ಟ್ ಆಗಿತ್ತು. ಉ.ಕೊರಿಯಾ ಕ್ಷಿಪಣಿ ನೇರವಾಗಿ ಜಪಾನ್‌ನ ಹೊಕ್ಕೈಡೊ ಪ್ರದೇಶದ ಮೇಲೆ ಬೀಳುವ ಬಗ್ಗೆ ಮುನ್ಸೂಚನೆ ಸಿಕ್ಕಿತ್ತು. ಆಗ ಜಪಾನ್ ಸರ್ಕಾರ ತನ್ನ ಪ್ರಜೆಗಳಿಗೆ ತಕ್ಷಣ ಕಟ್ಟಡ ಅಥವಾ ಅಂಡರ್ ಪಾಸ್ ಒಳಗೆ ಓಡುವಂತೆ ತುರ್ತು ಸೂಚನೆ ನೀಡಿತ್ತು. ಹೀಗೆ ಜನರು ಭಯದಲ್ಲಿ ಓಡಿದ್ದರು ಕೂಡ. ಕೊನೆಗೆ ಯಾವುದೇ ಕ್ಷಿಪಣಿ ಜಪಾನ್ ಮೇಲೆ ಬಿದ್ದಿಲ್ಲ ಎನ್ನುವುದು ಕನ್ಫರ್ಮ್ ಆದ ನಂತರ ನಿಟ್ಟುಸಿರು ಬಿಟ್ಟರು.
ಜಪಾನ್ ಮೇಲೆ ಪರಮಾಣು ಕ್ಷಿಪಣಿ!
2023ರ ಫೆಬ್ರವರಿಯಲ್ಲಿ ಪರಮಾಣು ಸಾಮರ್ಥ್ಯದ ಕ್ಷಿಪಣಿ ಪ್ರಯೋಗದ ಸಂದರ್ಭದಲ್ಲಿ ಜಗತ್ತಿಗೆ ಶಾಕ್ ಕೊಟ್ಟಿದ್ದ ಕಿಮ್. ಅಮೆರಿಕ & ದಕ್ಷಿಣ ಕೊರಿಯಾಗೆ ಎಚ್ಚರಿಕೆ ನೀಡುವ ಸಲುವಾಗಿ ಉ.ಕೊರಿಯಾ ಪರೀಕ್ಷಿಸಿದ್ದ ಪರಮಾಣು ಸಿಡಿತಲೆ ಹೊತ್ತೊಯ್ಯುವ ಸಾಮರ್ಥ್ಯದ ಖಂಡಾಂತರ ಕ್ಷಿಪಣಿ ಜಪಾನ್ ಮೇಲೆ ಹಾರಿ ಹೋಗಿತ್ತು. ಕ್ಷಿಪಣಿ ಜಪಾನ್ ಸಮೀಪದಲ್ಲೇ ಪತನಗೊಂಡು ಭಯ ಮೂಡಿತ್ತು. ಜಪಾನ್ ನಾಯಕರ ಗುಂಡಿಗೆ ಅಲ್ಲಾಡಿ ಹೋಗಿತ್ತು. ಇದೀಗ ಮತ್ತೆ ಅಂತಹದ್ದೇ ಸಾಹಸಕ್ಕೆ ಕೈಹಾಕಲು ಕಿಮ್ ಜಾಂಗ್ ಉನ್ ಸಿದ್ಧತೆ ನಡೆಸಿದ್ದಾನೆ.

ಸರ್ವಾಧಿಕಾರಿ ಕಿಮ್ ಗುಡುಗಿದರೆ ಅಷ್ಟೇ
ಅಮೆರಿಕ ಜೊತೆ ಸೇರಿ ದಕ್ಷಿಣ ಕೊರಿಯಾ ಸಮರಾಭ್ಯಾಸ ನಡೆಸಿದ ನಂತರ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕೋಪ ಮಿತಿಮೀರಿದೆ. ಅಮೆರಿಕ ಮತ್ತು ತನ್ನ ನೆರೆಯ ದೇಶ ಒಟ್ಟೊಟ್ಟಿಗೆ ಸೇರಿ ಪರೋಕ್ಷವಾಗಿ ಬೆದರಿಕೆ ಹಾಕುತ್ತಿರುವುದಾಗಿ ಉತ್ತರ ಕೊರಿಯಾ ಆಕ್ರೋಶ ಹೊರಹಾಕಿತ್ತು. ಈ ಸಿಟ್ಟನ್ನು ಹೊಸ ಪರಮಾಣು ಕ್ಷಿಪಣಿಯ ಮೂಲಕ ತೋರಿಸಿದ್ದ ಉತ್ತರ ಕೊರಿಯಾ ಸರ್ವಾಧಿಕಾರಿ. ಈಗ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ, ಕಳೆದ 5 ದಿನಗಳಿಂದ ಎರಡೂ ರಾಷ್ಟ್ರಗಳ ನಡುವಿನ ಮಾತುಕತೆ ಬಂದ್ ಮಾಡಿದ್ದಾನೆ ಕಿಮ್.

ಯುದ್ಧ ಭೀತಿಯಲ್ಲಿ ಜಪಾನ್?
ಇಷ್ಟೆಲ್ಲಾ ಘಟನೆ ನಡೆದ ಮೇಲೆ ಜಪಾನ್ ಈಗ ಯುದ್ಧದ ಭೀತಿಯಲ್ಲಿದೆ. ಅಮೆರಿಕ ಕೂಡ ಈ ಘಟನೆಯ ಬಗ್ಗೆ ಮಾಹಿತಿಯನ್ನ ಪಡೆದುಕೊಂಡಿದೆ. ಉತ್ತರ ಕೊರಿಯಾ ಗಡಿಯಿಂದ ಜಪಾನ್‌ನ ಹೊಕ್ಕೈಡೊ ಕೂಗಳತೆ ದೂರದಲ್ಲಿದ್ದು, ಜಪಾನ್‌ನ ಪ್ರಮುಖ ನಗರವಾಗಿದೆ. ಅಕಸ್ಮಾತ್ ಉತ್ತರ ಕೊರಿಯಾ ಈ ಭಾಗದ ಮೇಲೆ ದಾಳಿ ನಡೆಸಿದ್ದೇ ಆದರೆ, ದೊಡ್ಡ ಪ್ರಮಾಣದಲ್ಲಿ ಸಾವು-ನೋವು ಸಂಭವಿಸುದು ಪಕ್ಕಾ. ಹೀಗಾಗಿಯೇ ಕಿಮ್ ಕ್ಷಿಪಣಿಯಿಂದ ರಕ್ಷಣೆಗೆ ಜಪಾನ್ ಅಮೆರಿಕದ ಮೊರೆಯಿಡುತ್ತಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications