ಫೀಫಾ ಶ್ರೇಯಾಂಕ: ಸ್ಪೇನ್ 1, ಭಾರತ 154
ಬೆಂಗಳೂರು, ಜೂ.6: ಫೀಫಾ ವಿಶ್ವಕಪ್ ಫುಟ್ಬಾಲ್ ಆರಂಭಕ್ಕೂ ಮುನ್ನ ವಿಶ್ವದ ಪುಟ್ಬಾಲ್ ದೇಶಗಳ ಸ್ಥಾನಮಾನದ ವಿವರವನ್ನು ಫೀಫಾ ಗುರುವಾರ ಪ್ರಕಟಿಸಿದ್ದು, ಕಳೆದ ಬಾರಿಯ ವಿಶ್ವಕಪ್ ಚಾಂಪಿಯನ್ ಸ್ಪೇನ್ ಅಗ್ರಸ್ಥಾನ ಕಾಯ್ದುಕೊಂಡಿದೆ. ಈ ಬಾರಿಯ ಅತಿಥೇಯ ರಾಷ್ಟ್ರ ಬ್ರೆಜಿಲ್ ಮೂರನೇ ಸ್ಥಾನದಲ್ಲಿದ್ದರೆ, ಜರ್ಮನಿ ಎರಡನೇ ಸ್ಥಾನ ಕಾಯ್ದುಕೊಂಡಿದೆ. ಭಾರತ ತಂಡ ಸದ್ಯಕ್ಕೆ 154ನೇ ಸ್ಥಾನಕ್ಕೆ ಕುಸಿದಿದೆ.
ಫೀಫಾ ಶ್ರೇಯಾಂಕ ಪಟ್ಟಿಯಲ್ಲಿ ಭಾರತ ತಂಡ 7 ಅಂಕಗಳನ್ನು ಕಳೆದುಕೊಂಡು 154ಕ್ಕೆ ಕುಸಿದಿದ್ದು, ಖಂಡಗಳ ಪಟ್ಟಿಯಲ್ಲಿ ಏಷ್ಯಾದಲ್ಲಿ 28ನೇ ಸ್ಥಾನ ಪಡೆದುಕೊಂಡಿದೆ. ಕಳೆದ ಮಾರ್ಚ್ ತಿಂಗಳಿನಿಂದ ಯಾವುದೇ ಪಂದ್ಯಾವಳಿಗಳಲ್ಲಿ ಭಾರತ ಕಾಣಿಸಿಕೊಂಡಿಲ್ಲ. ಇತ್ತೀಚೆಗೆ ಎಎಫ್ ಸಿ ಚಾಲೆಂಜ್ ಕಪ್ ನಲ್ಲಿ ಭಾರತ 3ನೇ ಸ್ಥಾನ ಪಡೆದ ನಂತರ ಫೀಫಾ ಶ್ರೇಯಾಂಕ ಪಟ್ಟಿಯಲ್ಲಿ ಮೇಲಕ್ಕೇರುವ ನಿರೀಕ್ಷೆ ಹೆಚ್ಚಿತ್ತು.[ವಿಶ್ವಕಪ್ 2014 ಟೂರ್ ಗೈಡ್]
ಬೆಂಗಳೂರಿನ ಸುನಿಲ್ ಚೆಟ್ರಿ ನೇತೃತ್ವದ ಬ್ಲೂ ಟೈಗರ್ಸ್ ತಂಡ ಬಾಂಗ್ಲಾದೇಶ(162) ವಿರುದ್ಧ 2-2 ಡ್ರಾ ಸಾಧಿಸಿದ್ದು ಬಿಟ್ಟರೆ ಅಕ್ಟೋಬರ್ ತನಕ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡುವ ಲಕ್ಷಣಗಳಿಲ್ಲ, ಅಫ್ಘಾನಿಸ್ತಾನ 130 ಹಾಗೂ ಬ್ರೆಜಿಲ್ ವಿಶ್ವಕಪ್ ಗೆ ಚೆಂಡು ತಯಾರಿಸಿರುವ ಪಾಕಿಸ್ತಾನ 164 ಸ್ಥಾನದಲ್ಲಿವೆ.

ಏಷ್ಯಾದಲ್ಲಿ ಇರಾನ್ 43 ಹಾಗೂ ಜಪಾನ್ 46ನೇ ಸ್ಥಾನ ಪಡೆದುಕೊಂಡಿವೆ. ಬ್ರೆಜಿಲ್ ಫೀಫಾ ವಿಶ್ವಕಪ್ 2014ರಲ್ಲಿ ಸ್ಪರ್ಧಿಸಿರುವ 32 ತಂಡಗಳು, ಫೀಫಾ ಶ್ರೇಯಾಂಕ ಹಾಗೂ ಗ್ರೂಪ್ ಗಳ ವಿವರ ಇಲ್ಲಿದೆ...
| ವಿಶ್ವಕಪ್ 2014, ಬ್ರೆಜಿಲ್ | |||
| ಗ್ರೂಪ್ ಎ | ಗ್ರೂಪ್ ಬಿ | ಗ್ರೂಪ್ ಸಿ | ಗ್ರೂಪ್ ಡಿ |
| ಬ್ರೆಜಿಲ್ (3) | ಸ್ಪೇನ್ (1) | ಕೊಲಂಬಿಯಾ (8) | ಉರುಗ್ವೆ (7) |
| ಮೆಕ್ಸಿಕೋ (20) | ನೆದರ್ಲೆಂಡ್ (15) | ಗ್ರೀಸ್ (12) | ಕೋಸ್ಟರಿಕಾ (28) |
| ಕ್ರೋವೆಷಿಯಾ (18) | ಚಿಲಿ (14) | ಐವರಿ ಕೋಸ್ಟ್ (23) | ಇಂಗ್ಲೆಂಡ್ (10) |
| ಕ್ಯಾಮರೂನ್ (56) | ಆಸ್ಟ್ರೇಲಿಯಾ (62) | ಜಪಾನ್ (46) | ಇಟಲಿ (9) |
| ಗ್ರೂಪ್ ಇ | ಗ್ರೂಪ್ ಎಫ್ | ಗ್ರೂಪ್ ಜಿ | ಗ್ರೂಪ್ ಎಚ್ |
| ಸ್ವಿಟ್ಜರ್ಲೆಂಡ್ (6) | ಅರ್ಜೆಂಟಿನಾ (5) | ಜರ್ಮನಿ (2) | ಬೆಲ್ಜಿಯಂ (11) |
| ಈಕ್ವಡಾರ್ (26) | ನೈಜೀರಿಯಾ (44) | ಘಾನಾ (37) | ಅಲ್ಜೀರಿಯಾ (22) |
| ಫ್ರಾನ್ಸ್(17) | ಬೋಸ್ನಿಯಾ ಹರ್ಜೆಗೋವಿನಿಯಾ (21) | ಯುಎಸ್ಎ (13) | ರಷ್ಯಾ (19) |
| ಹೊಂಡಾರಸ್ (33) | ಇರಾನ್ (43) | ಪೋರ್ಚುಗಲ್ (4) | ಕೊರಿಯಾ(57) |












Click it and Unblock the Notifications