ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾದ ಮೆಟ್ರೊದಲ್ಲಿ ಭೀಕರ ಬಾಂಬ್ ಸ್ಪೋಟಕ್ಕೆ ಕನಿಷ್ಠ 10 ಬಲಿ

By Sachhidananda Acharya
|
Google Oneindia Kannada News

ಮಾಸ್ಕೊ, ಏಪ್ರಿಲ್ 3: ರಷ್ಯಾದ ಸೈಂಟ್ ಪೀಟರ್ಸ್ ಬರ್ಗ್ ಮೆಟ್ರೊ ಗೆ ಸೇರಿದ ನಿಲ್ದಾಣವೊಂದರಲ್ಲಿ ಮೆಟ್ರೊದ ಬೋಗಿಯೊಳಗೆ ಸುಧಾರಿತ ಬಾಂಬ್ ಸ್ಪೋಟಿಸಿದೆ.

ಸೆನ್ನಾಯ ಸ್ಕ್ವಾರ್ ನಿಲ್ದಾಣದಲ್ಲಿ ಬಾಂಬ್ ಸ್ಪೋಟಿಸಿದ ಪರಿಣಾಮ ಕನಿಷ್ಟ 10 ಜನ ಸಾವನ್ನಪ್ಪಿದ್ದಾರೆ ಹಾಗೂ 20ಕ್ಕೂ ಹೆಚ್ಚು ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಮೆಟ್ರೊ ರೈಲು ಟೆಕ್ನೊಲಾಜೆಸ್ಕಿ ಇನ್ಸಿಟ್ಯೂಟ್ ನಿಂದ ಸೆನ್ನಾಯ ಪ್ಲೊಶ್ಚರ್ಡ್ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದ ವೇಳೆ ಈ ಬಾಂಬ್ ಸ್ಪೋಟಿಸಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, "ಈ ದಾಳಿಗೆ ಕಾರಣ ಏನು ಎನ್ನವ ಮಾಹಿತಿಗಳು ಇನ್ನೂ ಬಂದಿಲ್ಲ. ಕಾರಣದ ಬಗ್ಗೆ ಈಗ ಮಾತನಾಡುವುದು ಸರಿಯಲ್ಲ. ತನಿಖೆಯಿಂದ ಕಾರಣ ಏನು ಎಂದು ತಿಳಿದು ಬರಲಿದೆ. ಮುಖ್ಯವಾಗಿ ಭಯೋತ್ಪಾದಕರು ಸೇರಿದಂತೆ ಕ್ರಿಮಿನಲ್ ಗಳು, ಕಿಡಿಗೇಡಿಗಳು ಸೇರಿದಂತೆ ಎಲ್ಲಾ ದೃಷ್ಟಿಯಿಂದಲೂ ಈ ಘಟನೆಯ ಬಗ್ಗೆ ತನಿಖೆ ಮಾಡಲಾಗುವುದು," ಎಂದು ಅವರು ಹೇಳಿದ್ದಾರೆ.

Bomb blast in Russia’s Metro station

ಘಟನೆ ನಂತರ ಎಲ್ಲಾ ಮೆಟ್ರೋ ನಿಲ್ದಾಣಗಳನ್ನು ಮುಚ್ಚಲಾಗಿದ್ದು, ಪ್ರಯಾಣಿಕರನ್ನು ನಿಲ್ದಾಣದಿಂದ ಹೊರಗೆ ಕಳುಹಿಸಲಾಗುತ್ತಿದೆ. ಸೈಂಟ್ ಪೀಟರ್ಸ್ ಬರ್ಗ್ ಮೆಟ್ರೊ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡಿದ್ದು ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

English summary
A bomb exploded inside a car of the Sennaya Square metro station in Russia has resulted in casualties among passengers. An evacuation is underway and some stations have been closed for entry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X