ಪಾಕಿಸ್ತಾನ ತರಕಾರಿ ಮಾರುಕಟ್ಟೆಯಲ್ಲಿ ಬಾಂಬ್ ಸ್ಫೋಟ, ಇಪ್ಪತ್ತು ಸಾವು

Posted By:
Subscribe to Oneindia Kannada

ಪೇಶಾವರ, ಜನವರಿ 21: ಪಾಕಿಸ್ತಾನದ ಬುಡಕಟ್ಟು ಪ್ರಾಂತ್ಯದ, ಅಫ್ಘಾನಿಸ್ತಾನ ಗಡಿ ಸಮೀಪದ ಮಾರುಕಟ್ಟೆಯಲ್ಲಿ ಶನಿವಾರ ಬಾಂಬ್ ಸ್ಫೋಟವಾಗಿ ಇಪ್ಪತ್ತು ಮಂದಿ ಮೃತಪಟ್ಟು, ಐವತ್ತು ಜನರಿಗೆ ಗಾಯಗಳಾಗಿವೆ ಎಂದು ಪಾಕಿಸ್ತಾನದ ಆರೋಗ್ಯ ಹಾಗೂ ಸರಕಾರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆಫ್ಘಾನಿಸ್ತಾನ ಗಡಿ ಪ್ರದೇಶದ, ಕುರ್ರಂ ಬುಡುಕಟ್ಟು ಜಿಲ್ಲೆಯ ಪರಚಿನಾರ್ ನಗರದಲ್ಲಿ ಜನಜಂಗುಳಿಯಿಂದ ಕೂಡಿರುವ ತರಕಾರಿ ಮಾರುಕಟ್ಟೆಯಲ್ಲಿ ಸ್ಫೋಟ ಸಂಭವಿಸಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಗಟು ಮಾರಾಟಗಾರರಿಂದ ಚಿಲ್ಲರೆ ವಹಿವಾಟುದಾರರು ಹಣ್ಣು-ತರಕಾರಿ ಖರೀದಿಸುವ ವೇಳೆಯಲ್ಲಿ ಈ ಘಟನೆ ನಡೆದಿದೆ.

ಕನಿಷ್ಠ ಇಪ್ಪತ್ತು ಮಂದಿ ಮೃತಪಟ್ಟಿದ್ದಾರೆ. ಐವತ್ತು ಮಂದಿ ಗಾಯಗೊಂಡಿದ್ದಾರೆ. ಸ್ಥಳಿಯ ಆಸ್ಪತ್ರೆ ವೈದ್ಯರು ನೀಡಿದ ಮಾಹಿತಿ ಪ್ರಕಾರ, ಚಿಕಿತ್ಸೆ ನೀಡುವ ವೇಳೆಯೇ ಇಬ್ಬರು ಮೃತಪಟ್ಟಿದ್ದಾರೆ. ಪ್ರಾರಂಭದಲ್ಲಿ ಏಳು ಶವಗಳನ್ನು ಮಾರುಕಟ್ಟೆಯಿಂದ ತರಲಾಗಿದೆ. ಚಿಕಿತ್ಸೆ ವೇಳೆಗಾಗಲೇ ಗಂಭೀರವಾಗಿ ಗಾಯಗೊಂಡಿದ್ದ ಹನ್ನೊಂದು ಮಂದಿ ಮೃತಪಟ್ಟಿದ್ದಾರೆ.[ಪಾಕ್ ಗೆ ಒತ್ತಡ, ಉಗ್ರ ಹಫೀಜ್ ಗೆ ಕೈ-ಬಾಯಿ ಕಟ್ಟಲು ಸಿದ್ಧತೆ!]

Bomb blast

ಗಾಯಾಳುಗಳ ಪೈಕಿ ಹಲವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಬೇರೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ತರಕಾರಿ ಬಾಕ್ಸ್ ನಲ್ಲಿ ಇಟ್ಟಿದ್ದ ಸುಧಾರಿತ ಸ್ಫೋಟಕ ಸಾಧನ ಸಿಡಿದು ಘಟನೆ ಸಂಭವಿಸಿದೆ. ಲಷ್ಕರ್ - ಝಾಂಗ್ವಿ ಎಂಬ ಉಗ್ರ ಸಂಘಟನೆ ಸ್ಫೋಟದ ಹೊಣೆ ಹೊತ್ತಿದೆ. ಶಿಯಾ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ಕುರ್ರಂ ಜಿಲ್ಲೆಯಲ್ಲಿ ದಾಳಿ ನಡೆದಿದೆ.[ಉಗ್ರಗಾಮಿಗಳ ಸಂಬಳ, ಪೆನ್ಷನ್ ಇತರ ಬೆನಿಫಿಟ್ ಗಳು..]

ಶಿಯಾ ಮುಸ್ಲಿಮರು ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರು. ಅದರಲ್ಲೂ ಈಗ ಬಾಂಬ್ ದಾಳಿ ನಡೆದಿರುವ ಪ್ರದೇಶದಲ್ಲಿ ಕಳೆದ ಕೆಲವು ವರ್ಷಗಳಿಂದ ಉಗ್ರರು ಇಂಥ ಕೃತ್ಯ ನಡೆಸುತ್ತಿದ್ದಾರೆ. ಪಾಕಿಸ್ತಾನ ಸೇನೆಯಿಂದ ಉಗ್ರರ ಮೇಲೆ ಪದೇಪದೇ ದಾಳಿ ನಡೆಸಿ, ಉಗ್ರರನ್ನು ಸದೆ ಬಡಿದರೂ ಇಂಥ ಭಯೋತ್ಪಾದನಾ ಕೃತ್ಯಗಳನ್ನು ತಡೆಯಲು ಸಾಧ್ಯವಾಗಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
20 people were killed and 50 were wounded when a bomb struck a market in Pakistan's tribal belt bordering Afghanistan on Saturday.
Please Wait while comments are loading...