ಮಧ್ಯ ನೈಜೀರಿಯಾದಲ್ಲಿ ಬಾಂಬ್ ಸ್ಫೋಟ: 50 ಮಂದಿ ಸಾವು!

ಜನಾಂಗೀಯ ಮತ್ತು ಧಾರ್ಮಿಕ ಉದ್ವಿಗ್ನತೆಗಳಿಗೆ ಕುಖ್ಯಾತಿ ಪಡೆದ ಮಧ್ಯ ನೈಜೀರಿಯಾದಲ್ಲಿ ಬಾಂಬ್ ಸ್ಪೋಟಗೊಂಡಿದೆ. ಅನೇಕ ಕುರಿಗಾಹಿಗಳು ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ.

ನೈಜೀರಿಯಾದ ಉತ್ತರ-ಮಧ್ಯ ಪ್ರದೇಶದಲ್ಲಿ ಶಂಕಿತ ಬಾಂಬ್ ಸ್ಫೋಟದಿಂದ ಜಾನುವಾರು ಸೇರಿದಂತೆ 50 ಜನ ಕುರಿಗಾಹಿಗಳು ಮೃತಪಟ್ಟ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ನಸರವಾ ಪೊಲೀಸ್ ಕಮಿಷನರ್ ಮೈಯಾಕಿ ಮಹಮ್ಮದ್ ಬಾಬಾ ಮಾಹಿತಿ ನೀಡಿದ್ದಾರೆ. ಉತ್ತರ ಮಧ್ಯ ನೈಜೀರಿಯಾದ ನಸರವಾ ಮತ್ತು ಬೆನ್ಯೂ ರಾಜ್ಯಗಳ ನಡುವೆ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ.

ಈ ಬಗ್ಗೆ ಮಾಹಿತಿ ನೀಡಿದ ನೈಜೀರಿಯಾದ ಮಿಯೆಟ್ಟಿ ಅಲ್ಲಾ ಕ್ಯಾಟಲ್ ಬ್ರೀಡರ್ಸ್ ಅಸೋಸಿಯೇಶನ್‌ನ ವಕ್ತಾರ ತಸಿಯು ಸುಲೇಮಾನ್, ಫುಲಾನಿ ಕುರಿಗಾರರ ಗುಂಪು ತಮ್ಮ ಜಾನುವಾರುಗಳನ್ನು ಬೆನ್ಯೂದಿಂದ ನಸರಾವಾಕ್ಕೆ ಸಾಗಿಸುತ್ತಿದ್ದರು. ಈ ವೇಳೆ ಬಾಂಬ್ ಸ್ಪೋಟಗೊಂಡಿದೆ. 54 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಲೆಕ್ಕವಿಲ್ಲದಷ್ಟು ಜನರು ಗಾಯಗೊಂಡಿದ್ದಾರೆ ಎಂದು ಹೇಳಿದರು. ಆದರೆ ನಸರಾವಾ ಗವರ್ನರ್ ಅಬ್ದುಲ್ಲಾಹಿ ಸುಲೆ ಈ ಘಟನೆಯಲ್ಲಿ ಎಷ್ಟು ಜನರು ಸಾವನ್ನಪ್ಪಿದ್ದಾರೆನ್ನುವ ಬಗ್ಗೆ ಮಾಹಿತಿಯನ್ನು ನೀಡಿಲ್ಲ. ಸ್ಫೋಟದ ಹಿಂದೆ ಯಾರಿದ್ದಾರೆ ಎಂಬ ಮಾಹಿತಿಯನ್ನು ಈವರೆಗೂ ನೀಡಲಾಗಿಲ್ಲ.

Bomb blast in central Nigeria

ಮಿಲಿಟರಿ ಸ್ಟ್ರೈಕ್​ನಿಂದಾಗಿ ಈ ಸ್ಫೋಟ ಸಂಭವಿಸಿದೆ ಎಂದು ದನಗಾಹಿಗಳನ್ನು ಪ್ರತಿನಿಧಿಸುವ ಗುಂಪಿನ ಸದಸ್ಯರೊಬ್ಬರು ಮಾಹಿತಿ ನೀಡಿದ್ದರೆ. ಘಟನೆ ಸಂಬಂಧ ನೈಜೀರಿಯಾದ ವಾಯುಪಡೆಯ ವಕ್ತಾರರಿಗೆ ಮಾಹಿತಿ ಕೇಳಲಾಗಿದ್ದು ಅವರ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ ಎಂದು ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.

ಮಧ್ಯ ನೈಜೀರಿಯಾ ಜನಾಂಗೀಯ ಮತ್ತು ಧಾರ್ಮಿಕ ಉದ್ವಿಗ್ನತೆಗಳಿಗೆ ಕುಖ್ಯಾತಿ ಪಡೆದಿದೆ. ಮಧ್ಯ ಬೆಲ್ಟ್ ಎಂದೂ ಕರೆಯಲ್ಪಡುವ ಉತ್ತರ ಮಧ್ಯ ನೈಜೀರಿಯಾ ಆಗಾಗ ಫುಲಾನಿ ಪಶುಪಾಲಕರು ಮತ್ತು ಮುಖ್ಯವಾಗಿ ಕ್ರಿಶ್ಚಿಯನ್ನರಾದ ರೈತರ ನಡುವಿನ ಘರ್ಷಣೆಗಳಿಂದಾಗಿ ಹಿಂಸಾಚಾರಕ್ಕೆ ಗುರಿಯಾಗುತ್ತದೆ. ಇದನ್ನು ಹೆಚ್ಚಾಗಿ ಜನಾಂಗೀಯ-ಧಾರ್ಮಿಕ ಸಂಘರ್ಷ ಎಂದು ಕರೆಯಲಾಗುತ್ತದೆ.

ಆದರೆ ತಜ್ಞರು ಹೇಳುವಂತೆ ಜನಸಂಖ್ಯೆಯ ಬೆಳವಣಿಗೆ ಮತ್ತು ಹವಾಮಾನ ಬದಲಾವಣೆಯು ಬೇಸಾಯಕ್ಕೆ ಮೀಸಲಾದ ಪ್ರದೇಶದ ವಿಸ್ತರಣೆಗೆ ಕಾರಣವಾಗಿದೆ. ಅಲೆಮಾರಿಗಳ ಜಾನುವಾರುಗಳನ್ನು ಮೇಯಿಸಲು ಕಡಿಮೆ ಭೂಮಿ ಲಭ್ಯವಿದೆ. ಹೀಗಾಗಿ ಇಲ್ಲಿ ಸಂಘರ್ಷಗಳು ನಡೆಯುತ್ತವೆ ಎಂದು ಹೇಳುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+