ಪಾಕಿಸ್ತಾನ: ಖ್ಯಾತ ಕ್ರಿಕೆಟಿಗರು ಆಟವಾಡುತ್ತಿದ್ದ ಸ್ಟೇಡಿಯಂ ಪಕ್ಕ ರಸ್ತೆಯಲ್ಲಿ ಬಾಂಬ್ ಬ್ಲಾಸ್ಟ್!
ಪಾಕಿಸ್ತಾನ ದೇಶದಲ್ಲಿ ರಾಷ್ಟ್ರಮಟ್ಟದ ಕ್ರಿಕೆಟ್ ಆಟಗಾರರು ಆಟವಾಡುತ್ತಿದ್ದ ರಸ್ತೆಯಲ್ಲಿ ಉಗ್ರರು ಬಾಂಬ್ ದಾಳಿ ನಡೆಸಿದ ಘಟನೆ ಭಾನುವಾರ ನಡೆದಿದೆ. ಆ ಆಟಗಾರರು, ಘಟನೆ ನಡೆದ ಸ್ಥಳ ಯಾವುದು ತಿಳಿಯಿರಿ.
ಬೆಂಗಳೂರು, ಫೆಬ್ರುವರಿ 05: ಪಾಕಿಸ್ತಾನ ದೇಶದಲ್ಲಿ ರಾಷ್ಟ್ರಮಟ್ಟದ ಕ್ರಿಕೆಟ್ ಆಟಗಾರರು ಆಟವಾಡುತ್ತಿದ್ದ ಕ್ರೀಡಾಂಗಣ ಬಳಿಯ ಉಗ್ರರು ಬಾಂಬ್ ದಾಳಿ ನಡೆಸಿದ ಘಟನೆ ಭಾನುವಾರ ನಡೆದಿದೆ.
ಪಾಕಿಸ್ತಾನದ ಕಿಕೆಟ್ ತಂಡ ನಾಯಕ ಬಾಬರ್ ಅಝಾಮ್ ಹಾಗೂ ಶಾಹಿದ್ ಅಫ್ರಿದಿ ಯವರು ಸೇರಿದಂತೆ ಪಾಕಿಸ್ತಾನದ ಉನ್ನತ ಕ್ರಿಕೆಟಿಗರು ಇದೇ ರಸ್ತೆಯಲ್ಲಿ ಆಟವಾಡುತ್ತಿದ್ದರು. ಇದೇ ವೇಳೆ ರಸ್ತೆಯಲ್ಲಿ ಭಯೋತ್ಪಾದಕ ದಾಳಿ ನಡೆಸಲಾಗಿದೆ. ಕೂಡಲೇ ಆಟಗಾರರನ್ನು ಸುರಕ್ಷತ ಸ್ಥಳಕ್ಕೆ ರವಾನಿಸಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ವರದಿ ಆಗಿದೆ.

ಪಾಕಿಸ್ತಾನದ ವೇಲೆ ಪೊಲೀಸ್ ಲೈನ್ಸ್ ಪ್ರದೇಶದಲ್ಲಿ ಈ ಸ್ಫೋಟ ಸಂಭವಿಸಿದೆ. ಈ ರಸ್ತೆಪಕ್ಕದಲ್ಲೇ ನವಾಬ್ ಅಕ್ಬರ್ ಬುಗ್ತಿ ಕ್ರೀಡಾಂಗಣದಲ್ಲಿ ಪಾಕಿಸ್ತಾನ ಸೂಪರ್ ಲೀಗ್ (PSL) ಪಂದ್ಯದ ನಡೆಯುತ್ತಿತ್ತು. ಘಟನೆಯಿಂದಾಗಿ ಕೆಲ ಕಾಲ ಪಿಎಸಲ್ ಪಂದ್ಯ ಸ್ಥಗಿತಗೊಳಿಸಲಾಯಿತು. ಮಾಹಿತಿ ಆಧಾರದಲ್ಲಿ ಘಟನಾ ಸ್ಥಳದಲ್ಲಿ ಬಂದ ರಕ್ಷಣಾ ಕಾರ್ಯಪಡೆ ಸಿಬ್ಬಂದಿ ಪರಿಶೀಲಿಸಿದ್ದಾರೆ. ಘಟಟನೆಯಿಂದ ಸಣ್ಣಪುಟ್ಟವಾಗಿ ಗಾಯಾಗೊಂಡಿದ್ದವರನ್ನು ಸ್ಥಳಿಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.
ದಾಳಿ ಹೊಣೆ ಹೊತ್ತ ಉಗ್ರ ಸಂಘಟನೆ
ಪಾಕಿಸ್ತಾನದಲ್ಲಿ ನಿಷೇಧಿತ ಉಗ್ರ ಸಂಘಟನೆಯಾಗಿರುವ 'ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (TTP)' ಭಾನುವಾರ ಹೇಳಿಕೆಯೊಂದನ್ನು ಭಾನುವಾರ ನೀಡಿದೆ. ಅದರಲ್ಲಿ ಪಂದ್ಯಾವಳಿ ನಡೆಯುತ್ತಿದ್ದ ರಸ್ತೆಯಲ್ಲಿನ ನಡೆದ ಬಾಂಬ್ ದಾಳಿಯ ನಡೆಸಿದ್ದರ ಬಗ್ಗೆ ಹೇಳಿಕೊಂಡಿದೆ. ಘಟನೆಯ ಜವಾಬ್ದಾರಿ ಹೊತ್ತಿದೆ. ಭದ್ರತಾ ಅಧಿಕಾರಿಗಳನ್ನು ಗುರಿಯಾಸಿಕೊಂಡು ಸ್ಫೋಟ ಮಾಡಲಾಗಿತ್ತು ಎಂದು ಸಂಘಟನೆ ಹೇಳಿಕೊಂಡಿದೆ.

ಪಿಎಸ್ಎಲ್ ತಂಡಗಳಾದ ಕ್ವೆಟ್ಟಾ ಗ್ಲಾಡಿಯೇಟರ್ಸ್ ಮತ್ತು ಪೇಶಾವರ ಝಲ್ಮಿ ನಡುವಿನ ಪ್ರದರ್ಶನ ಪಂದ್ಯವನ್ನ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಬಲೂಚ್ ಅಭಿಮಾನಿಗಳ ಒತ್ತಡದ ಮೇರೆಗೆ ಆಯೋಜನೆ ಮಾಡಿತ್ತು. ಬಾಂಬ್ ದಾಳಿ ಘಟಿಸಿದ ತಕ್ಷಣ ಮುನ್ನೆಚ್ಚರಿಕೆ ದೃಷ್ಟಿಯಿಂದ ಕ್ರಿಕೆಟ್ ಪಂದ್ಯ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಕೂಡಲೇ ಆಟಗಾರರನ್ನು ಸ್ವಲ್ಪ ಸಮಯದವರೆಗೆ ಡ್ರೆಸ್ಸಿಂಗ್ ಕೋಣೆಗೆ ಕರೆದೊಯ್ಯಲಾಯಿತು. ಬಳಿಕ ಎಲ್ಲವೂ ಸರಿಹೋದ ಬಳಿಕ ಬಿದ್ದ ಗ್ರೀನ್ ಸಿಗ್ನಲ್ ಆಧಾರದಲ್ಲಿ ಪಂದ್ಯವು ಪುನಾರಂಭವಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.












Click it and Unblock the Notifications