ಇಲ್ಲಿ ಗಣಪತಿಯನ್ನು ಪೂಜಿಸುವ ವಿಧಾನವೇ ವಿಶಿಷ್ಟ; ವಿಘ್ನ ವಿನಾಶಕನಿಗೆ ಅರ್ಪಿಸುತ್ತಾರೆ ಬೋಬಾ ಟೀ
Boba tea for Ganesha:ಗಣೇಶ ಹಬ್ಬದ ಸಡಗರ ಇನ್ನೂ ಒಂದು ವಾರಗಳವರೆಗೆ ಮುಂದುವರೆಯಲಿದೆ. ಗಣೇಶ ಪ್ರತಿಷ್ಟಾಪಿಸಿದ ಮೇಲೆ ಗಣಪತಿಗೆ ಇಷ್ಟವಾದ ಭಕ್ಷ್ಯಗಳನ್ನು ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಸಾಮಾನ್ಯವಾಗಿ ಗಣೇಶನಿಗೆ ಲಡ್ಡು, ಮೋದಕ, ಉಂಡೆ, ಕರ್ಜಿಕಾಯಿಗಳನ್ನು ಅರ್ಪಿಸುವುದು ವಾಡಿಕೆ. ಆದರೆ
ಥೈಲ್ಯಾಂಡ್‌ನಲ್ಲಿ ಗಣೇಶನಿಗೆ ಅರ್ಪಿಸುವ ನೈವೇದ್ಯ ಇದೀದ ಚರ್ಚೆಗೆ ಕಾರಣವಾಗಿದೆ.

ವಿದೇಶಗಳಲ್ಲೂ ಗಣೇಶನ ಪೂಜೆ :
ಗಣೇಶನನ್ನು ಕೇವಲ ಭಾರತದಲ್ಲಿ ಮಾತ್ರ ಪೂಜಿಸುವುದಲ್ಲ. ಶತಮಾನಗಳ ವ್ಯಾಪಾರ ಮತ್ತು ಸಾಂಸ್ಕೃತಿಕ ವಿನಿಮಯದ ಮೂಲಕ ಹಿಂದೂ ಧರ್ಮ ಮತ್ತು ಭಾರತೀಯ ಸಂಸ್ಕೃತಿ ದಕ್ಷಿಣ, ಪೂರ್ವ ಮತ್ತು ಆಗ್ನೇಯ ಏಷ್ಯಾದ ಕೆಲವು ಭಾಗಗಳಿಗೂ ಹರಡಿದೆ. ಆದ್ದರಿಂದ ಗಣೇಶನನ್ನು ಭಾರತವನ್ನು ಮೀರಿ ವಿದೇಶಗಳಲ್ಲಿಯೂ ಪೂಜಿಸಲಾಗುತ್ತದೆ. ಥೈಲ್ಯಾಂಡ್ ಸೇರಿದಂತೆ ಹಲವಾರು ದೇಶಗಳಲ್ಲಿ ಗಣಪತಿಯನ್ನು ಶ್ರದ್ಧಾ ಭಕ್ತಿಯಿಂದ ಪೂಜೆ ಮಾಡ್ತಾರೆ. ಥೈಲ್ಯಾಂಡ್‌ನಲ್ಲಿ , ಗಣೇಶನನ್ನು ಫ್ರಾ ಫಿಕಾನೆಟ್ ಅಥವಾ ಫ್ರಾ ಫಿಕಾನೆಸುವಾನ್ ಎಂದು ಕರೆಯಲಾಗುತ್ತದೆ. ಗಣಪತಿ ಎಂದರೆ ಇಲ್ಲಿ ಅದೃಷ್ಟ, ಯಶಸ್ಸು ಮತ್ತು ಅಡೆತಡೆಗಳನ್ನು ನಿವಾರಿಸುವ ದೇವರು.
ಗಣಪತಿಗೆ ಬೋಬಾ ಟೀ :
ಮೊದಲೇ ಹೇಳಿದ ಹಾಗೆ ಗಣೇಶನಿಗೆ ಸಾಮಾನ್ಯವಾಗಿ ಅವನ ನೆಚ್ಚಿನ ತಿಂಡಿ ಲಡ್ಡು, ಮೋದಕವನ್ನು ನೈವೇದ್ಯವಾಗಿ ಣಿಡಲಾಗುವುದು. ಆದರೆ ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ ಗಣಪತಿಗೆ ಬಬಲ್ ಟೀಯನ್ನು ಅರ್ಪಿಸಲಾಗುತ್ತದೆ. ಬ್ಯಾಂಕಾಕ್‌ನಲ್ಲಿ ಗಣೇಶನ ವಿಗ್ರಹಕ್ಕೆ ಭಕ್ತರು ಬೋಬಾ ಚಹಾವನ್ನು ಅರ್ಪಿಸುತ್ತಿರುವ ವಿಡಿಯೋವನ್ನು ಪಿಯಾ ಪಿಂಗ್ ಎನ್ನುವವರು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ.
ಗಣಪತಿಗೆ ಹರಿದುಬರುತ್ತಿದೆ ಬೋಬಾ ಟೀ :
ಬ್ಯಾಂಕಾಕ್‌ನ ಪ್ರಸಿದ್ಧ ಶಾಪಿಂಗ್ ಮಾಲ್‌ಗಳಲ್ಲಿ ಒಂದಾದ ಯೂನಿಯನ್ ಮಾಲ್‌ನ ಹೊರಗೆ ಗಣೇಶನಿಗೆ ಅರ್ಪಿತವಾದ ದೇವಾಲಯ ಒಂದಿದೆ. ಜನರು ಗಣೇಶ ಚತುರ್ಥಿ ಅಂಗವಾಗಿ ಇಲ್ಲಿ ಬಬಲ್ ಮಿಲ್ಕ್ ಟೀಯನ್ನು ನೈವೇದ್ಯವಾಗಿ ತರುತ್ತಾರೆ.
ಬಪ್ಪನ ದೇವಾಲಯಕ್ಕೆ ಅರ್ಪಿಸಲಾದ ಡಜನ್‌ಗಟ್ಟಲೆ ಕಪ್‌ಗಳ ಬೋಬಾ ಚಹಾವನ್ನು ಪಿಯಾ ಪಿಂಗ್ ವಿಡಿಯೋದಲ್ಲಿ ತೋರಿಸಿದ್ದಾರೆ. ಬೋಬಾ ಚಹಾವನ್ನು ಬಬಲ್ ಟೀ ಎಂದೂ ಕರೆಯುತ್ತಾರೆ. ಇದು ಚಹಾ, ಹಾಲು ಮತ್ತು ಹಣ್ಣಿನ ಸುವಾಸನೆಗಳಿಂದ ತಯಾರಿಸಲಾಗುವ ವಿಶೇಷ ಪಾನೀಯ. ಇದರಲ್ಲಿ ಟಪಿಯೋಕಾ ಪರ್ಲ್‌ಗಳು ಬಾಯಿಗೆ ಸಿಗುತ್ತವೆ. ಈ ಚಹಾ ಭಾರತದಲ್ಲಿ ಅಷ್ಟೊಂದು ಜನಪ್ರಿಯವಾಗಿಲ್ಲವಾಗಿದ್ದರೂ ಥೈಲ್ಯಾಂಡ್‌ನಲ್ಲಿ ಮಾತ್ರ ಹೆಸರುವಾಸಿ.
ಪಿಯಾ ಅವರ ಈ ವೀಡಿಯೊ ಥೈಲ್ಯಾಂಡ್‌ನಲ್ಲಿ ಗಣೇಶನ ಪೂಜೆಯು (ganesha chaturthi) ಕೆಲವು ವಿಶಿಷ್ಟ ಸ್ಥಳೀಯ ಸಂಪ್ರದಾಯಗಳನ್ನು ಹೇಗೆ ಅಳವಡಿಸಿಕೊಂಡಿದೆ ಎಂಬುದನ್ನು ತೋರಿಸುತ್ತದೆ.
ಕೆಲವರು ಗಣಪತಿಗೆ ಹಲವಾರು ಕಪ್ ಬೋಬಾ ಚಹಾವನ್ನು ಅರ್ಪಿಸುತ್ತಾರೆ. ಈ ಬೋಬಾ ಚಹಾವನ್ನು ಗಣಪತಿಗೆ ಅರ್ಪಿಸುವುದರ ಹಿಂದೆಯೂ ಒಂದು ಕಾರಣವಿದೆ. ಇದೊಂದು ರೀತಿ ಹರಕೆಯ ಥರ. ತಮ್ಮ ಆಸೆ ಈಡೇರಿದ ಮೇಲೆ ಇಲ್ಲಿಗೆ ಬರುವ ಭಕ್ತರು ಹಿಂದಿನದ್ದಕ್ಕಿಂತ ಹೆಚ್ಚು ಪ್ರಮಾಣದ ಚಹಾವನ್ನು ದೇವರಿಗೆ ಅರ್ಪಿಸಬೇಕು. ಅಂದರೆ ಡಬಲ್ ಚಹಾವನ್ನು ಅರ್ಪಿಸಬೇಕು. ಹಿಂದೆ ಒಬ್ಬ ಭಕ್ತ 3 ಬಾಟಲ್ ಚಹಾ ಅರ್ಪಿಸಿದ್ದರೆ ಆತ ಮುಂದಿನ ಬಾರಿ 6 ಬಾಟಲಿ ಅರ್ಪಿಸಬೇಕು. ಹಾಗಾಗಿ ಇಲ್ಲಿ ಭಕ್ತರು ತರುವ ಬೋಬಾ ಟೀ ಪ್ರಮಾಣ ಹೆಚ್ಚುತ್ತಲೇ ಇರುತ್ತದೆ.
Boba tea for GaneshaBoba tea for Ganesha:ಭಿನ್ನ ಪ್ರತಿಕ್ರಿಯೆ :
ಗಣೇಶ ಚತುರ್ಥಿಯ ದಿನವೇ ಅವರ ಇನ್‌ಸ್ಟಾಗ್ರಾಮ್ ವೀಡಿಯೊ ವೈರಲ್ ಆಗಿದ್ದು, ಒಂದೇ ದಿನದಲ್ಲಿ ಸುಮಾರು 4 ಲಕ್ಷ ಜನ ವೀಕ್ಷಿಸಿದ್ದಾರೆ. ಹಾಗೆಯೇ ಜನರು ಬೇರೆ ಬೇರೆ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಗಣೇಶನಿಗೆ ಏನು ಅರ್ಪಿಸಿದರೂ ಭಕ್ತಿಯಿಂದ ಸ್ವೀಕರಿಸುತ್ತಾರೆ. ಅವರು ದೇವರಿಗಿಂತ ಸ್ನೇಹಿತ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಗಣೇಶನಿಗೆ ಬರೀ ಲಡ್ಡು ಮತ್ತು ಮೋದಕಗಳನ್ನು ತಿಂದು ತಿಂದು ಬೇಸರವಾಗಿರಬಹುದು . ಸ್ವಲ್ಪ ಡಿಫರೆಂಟ್ ಆಗಿರುವ ನೈವೇದ್ಯ ಅರ್ಪಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. ನಾನು ಸಿಯಾಟಲ್‌ನಲ್ಲಿ ವಾಸಿಸುತ್ತಿದ್ದೇನೆ, ನಿನ್ನೆ ನಾನು ಅವನಿಗೆ ಒಂದು ಆಪಲ್ ಡೋನಟ್ ಕೊಟ್ಟೆ. ಬಹುಶಃ ಅವನಿಗೆ ವಿವಿಧ ರೀತಿಯ ತಿನಿಸುಗಳು ಬೇಕಾಗಬಹುದು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.


Click it and Unblock the Notifications
