BMW car Gift : ಬಾಸ್ ಇದ್ರೆ ಹೀಗಿರ್ಬೇಕು! ಉದ್ಯೋಗಿಗೆ 43 ಲಕ್ಷದ BMW ಕಾರು ಗಿಫ್ಟ್ ; ಕಾರಣ ಇಷ್ಟೇ
BMW car Gift: ಆಫೀಸಿನಲ್ಲಿ ನಮ್ಮ ಪರ್ಫಾಮೆನ್ಸ್ ಚೆನ್ನಾಗಿದ್ದರೆ ಬೋನಸ್ ಸಿಗಬಹುದು, ಹೈಕ್ ಚೆನ್ನಾಗಿ ಅಗಬಹುದು ಪ್ರಮೋಷನ್ ಚಾನ್ಸ್ ಕೂಡಾ ಹೆಚ್ಚಾಗಬಹುದು. ಆದರೆ ಇಲ್ಲೊಬ್ಬ ಬಾಸ್ ಉದ್ಯೋಗಿಗೆ ನೀಡಿದ ರಿವಾರ್ಡ್ ಎಲ್ಲಾ ಕಡೆ ಚರ್ಚೆ ಆಗ್ತಾ ಇದೆ. ಈ ಉದ್ಯೋಗಿಗೆ ಬಾಸ್ ಕೊಟ್ಟಿರುವ ಗಿಫ್ಟ್ ಅನ್ನು ಯಾರೂ ಊಹಿಸಲು ಕೂಡಾ ಸಾಧ್ಯವಾಗುವುದಿಲ್ಲ.

ಉದ್ಯೋಗಿಗೆ BMW car Gift :
ಈ ಕಂಪನಿಗಾಗಿ ಕಷ್ಟಪಟ್ಟು ದುಡಿಯುವ ಉದ್ಯೋಗಿಗೆ ಬಾಸ್ ಲಕ್ಷಾಂತರ ರೂಪಾಯಿ ಮೌಲ್ಯದ ಬಿಎಂಡಬ್ಲ್ಯು ಕಾರನ್ನು ಗಿಫ್ಟ್ ಕೊಟ್ಟಿದ್ದಾರೆ. ಇನ್ನೂ ಆಶ್ಚರ್ಯಕರ ವಿಚಾರ ಅಂದರೆ, ಬಾಸ್ ಮಾಡಿರುವ ನಿರ್ಧಾರದ ಹಿಂದಿರುವುದು ಅವರ ಪರ್ಫಾಮೆನ್ಸ್ ಮಾತ್ರವಲ್ಲ. ಆ ಉದ್ಯೋಗಿಗಳೂ ದಿನಾ ಎದುರಿಸೋ ಸಮಸ್ಯೆ ಕೂಡಾ ಆಗಿತ್ತು. ಮೈ ಕೊರೆಯುವ ಚಳಿಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ದಿನಾ ಆಫೀಸಿಗೆ ಬರ್ತಾ ಇದ್ರು. ಇದನ್ನು ಬಾಸ್ ನೋಡಿದ್ದರು. ಇಬ್ಬರೂ ಒಳ್ಳೆಯ ಕೆಲಸಗಾರರು. ಆದರೆ ಆ ಚಳಿಗೆ ಸ್ಕೂಟರ್ ನಲ್ಲಿ ಆಫೀಸಿಗೆ ಬರುವುದು ತುಂಬಾ ಕಷ್ಟ. ಹೀಗಾಗಿ ಇಬ್ಬರಿಗೂ ಕಾರ್ ಗಿಫ್ಟ್ ಕೊಡ್ತಾರೆ.
ಕೊರೆವ ಚಳಿಯಲ್ಲಿ ಸ್ಕೂಟರ್ ನಲ್ಲಿ ಬರುತ್ತಾ ಇದ್ದ ಉದ್ಯೋಗಿ:
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ, ಮಾ ಯಾನ್ಲಿ ಮಧ್ಯ ಚೀನಾದ ಹೆನಾನ್ ಪ್ರಾಂತ್ಯದ ಜಿಯಾವೊಜುವೊದಲ್ಲಿರುವ ಹಾಟ್ ಪಾಟ್ ರೆಸ್ಟೋರೆಂಟ್ ಚೈನ್ ಮಾಲೀಕ. ಒಂದು ದಿನ, ತನ್ನ ಉದ್ಯೋಗಿ ಲಿ ಜೀ ಕೊರೆಯುವ ಚಳಿಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಕೆಲಸಕ್ಕೆ ಬರುತ್ತಿದ್ದುದನ್ನು ನೋಡುತ್ತಾರೆ. ಲಿ ಮುಖ ಚಳಿಗೆ ಕೆಂಪಾಗಿತ್ತು, ಕಿವಿಗಳು ನೇರಳೆ ಬಣ್ಣಕ್ಕೆ ತಿರುಗಿತ್ತು. ಚಳಿ ಗಾಳಿಗೆ ಅವರ ಕೈ ಮರಗಟ್ಟಿತ್ತು. ಇದನ್ನು ನೋಡಿದ ಮಾಗೆ ತುಂಬಾ ಬೇಸರವಾಗುತ್ತದೆ. ತಾನು ಕಾರಿನಲ್ಲಿ ಆರಾಮವಾಗಿ ಅಫೀಸಿಗೆ ಬರುತ್ತೇನೆ, ಆದರೆ ತನ್ನ ಕೆಲಸಗಾರರು ದಿನಾ ಎಷ್ಟು ಕಷ್ಟ ಪಡುತ್ತಿದ್ದಾರೆ ಎನ್ನುವುದು ಅರಿವಾಗುತ್ತದೆ. ಇವರ ಸಮಸ್ಯೆಗೆ ಒಂದು ಪರಿಹಾರ ಹುಡುಕಬೇಕು ಅಂದುಕೊಳ್ತಾರೆ. ತಾನು ಬೆಚ್ಚಗೆ ಆರಾಮದಲ್ಲಿ ಆಫೀಸಗೆ ಬರಬಹುದು ಎಂದಾದರೆ ನನ್ನ ಕೆಲಸದವರು ಯಾಕೆ ಕಷ್ಟಪಡಬೇಕು ಎನ್ನುವ ಪ್ರಶ್ನೆ ಅವರ ಮನಸ್ಸಿನಲ್ಲಿ ಬರುತ್ತದೆ. ಆಗ ಹುಟ್ಟಿಕೊಂಡದ್ದೇ ಈ ಕಾರು ಗಿಫ್ಟ್ ಮಾಡುವ ಐಡಿಯಾ.
ಉದ್ಯೋಗಿಗಳ ಹೆಸರಿನಲ್ಲೇ ಕಾರು ರಿಜಿಸ್ಟರ್ :
ಸೆಪ್ಟೆಂಬರ್ 24 ರಂದು, ಮಾ ತನ್ನ ಕೆಲವು ಉದ್ಯೋಗಿಗಳನ್ನು (employees) BMW ಶೋರೂಮ್‌ಗೆ ಕರೆದುಕೊಂಡು ಬರುತ್ತಾರೆ. ಯಾಕೆ ಎನ್ನುವ ಸುಳಿವು ಆ ಉದ್ಯೋಗಿಗಳಿಗೆ ಇರಲಿಲ್ಲ. ವರದಿಗಳ ಪ್ರಕಾರ, ಮಾ ಸುಮಾರು ಎರಡು ವಾರಗಳ ಹಿಂದೆಯೇ ಕಾರು ಖರೀದಿಸಿದ್ದರು. ಅದರ ಸಂಪೂರ್ಣ ಹಣವನ್ನು ಕೂಡಾ ಪೇ ಮಾಡಿರುತ್ತಾರೆ. ಪ್ರತಿ BMW ಬೆಲೆ 300,000 ಯುವಾನ್, ಅಂದರೆ ಭಾರತೀಯ ಕರೆನ್ಸಿಯಲ್ಲಿ ಸುಮಾರು 43.2 ಲಕ್ಷ. ಎರಡು ಕಾರುಗಳ ಒಟ್ಟು ಬೆಲೆ ಸುಮಾರು 86.4 ಲಕ್ಷ.
ಉದ್ಯೋಗಿಗಳಿಗೂ ಲಾಭದಲ್ಲಿ ಪಾಲು :
ಎಂಟು ವರ್ಷಗಳಿಂದ ರೆಸ್ಟೋರೆಂಟ್‌ನಲ್ಲಿ (restaurant) ಕೆಲಸ ಮಾಡುತ್ತಿದ್ದ ಲಿ ಜೀ ಅವರಿಗೆ ಮನೆಗೆ ಹೋಗುವಾಗ ಒಂದು ಗಿಫ್ಟ್ ಇದೆ ಎಂದಷ್ಟೇ ಹೇಳಿದ್ದರು. ಆದರೆ ಆ ಗಿಫ್ಟ್ BMW ಕಾರು ಎನ್ನುವುದನ್ನು ಅವರು ಕನಸಿನಲ್ಲೂ ಊಹಿಸಿರಲಿಲ್ಲ. ಆ ಕಾರನ್ನು ಅದೇ ದಿನ ಉದ್ಯೋಗಿಗಳ ಹೆಸರಿನಲ್ಲಿ ರಿಜಿಸ್ಟರ್ ಮಾಡಲಾಯಿತು. ಇಬ್ಬರ ಸಂತೋಷಕ್ಕೆ ಪಾರವೇ ಇರಲಿಲ್ಲ. ಮಾ ಯಾನ್ಲಿ ಪ್ರಕಾರ, ಉದ್ಯೋಗಿಗಳ ಕಠಿಣ ಪರಿಶ್ರಮದಿಂದ ಅವರ ಬ್ಯುಸಿನೆಸ್ ಸಕ್ಸಸ್ ಆಗುತ್ತದೆ. ಕಂಪನಿಯು ಬೆಳೆದಾಗ, ಆ ಯಶಸ್ಸಿನ ಪ್ರಯೋಜನ ಉದ್ಯೋಗಿಗಳಿಗೂ ಸಿಗಬೇಕು.
ಇದು ಬರೀ ಕಾಸ್ಲಿ ಗಿಫ್ಟ್ ನೀಡುವ ವಿಚಾರ ಅಲ್ಲ. ಉದ್ಯೋಗಿಗಳಿಗೆ ಸಿಗುವ ಗೌರವ ಮತ್ತು ಅವರ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವ ಔದಾರ್ಯ. ಇದೇ ಕಾರಣದಿಂದಲೇ ಈ ಕಥೆಯ ಬಗ್ಗೆ ಚರ್ಚೆ ನಡೀತಾ ಇದೆ.


Click it and Unblock the Notifications
