ಕಾಂಗೋದಲ್ಲಿ ಬಾಂಬ್ ಸ್ಪೋಟ: 32 ಭಾರತೀಯ ಯೋಧರಿಗೆ ಗಾಯ

Posted By:
Subscribe to Oneindia Kannada

ವಿಶ್ವಸಂಸ್ಥೆ: ಬಾಂಬ್ ಸ್ಫೋಟಗೊಂಡ ಪರಿಣಾಮ ವಿಶ್ವಸಂಸ್ಥೆ ಶಾಂತಿಪಡೆಗಳ 32 ಭಾರತೀಯ ಯೋಧರು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಿಪಬ್ಲಿಕ್ ಆಫ್ ಕಾಂಗೋ ದೇಶದ ಗೋಮಾ ನಗರದಲ್ಲಿ ಮಂಗಳವಾರ (ನ.8) ನಡೆದಿದೆ.

ವಿಶ್ವಸಂಸ್ಥೆ ಶಾಂತಿಪಡೆಗಳ ಯೋಧರು ಪಶ್ಚಿಮ ಗೋಮಾ ನಗರದಲ್ಲಿ ಮುಂಜಾನೆ ಕವಾಯತು ನಡೆಸುತ್ತಿದ್ಧ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

ಘಟನೆಯಲ್ಲಿ ಮಗುವೊಂದು ಸೇರಿಂದತೆ 3ಮಂದಿ ಶಾಂತಿಸಂರಕ್ಷಣಾ ಪಡೆಗಳ ಯೋಧರು ಮೃತಪಟ್ಟಿದ್ದು, ಘಟನೆಗೆ ಸಂಬಂಧಿಸಿದಂತೆ ಇದುವರೆಗೂ ಯಾವುದೇ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಹೇಳಲಾಗಿದೆ.

1996ರಿಂದ 2003ರವರೆಗೆ ಕಾಂಗೋದಲ್ಲಿ ಹಲವು ಯುದ್ಧಗಳು ನಡೆದಿದ್ದು, ವಿಶ್ವಸಂಸ್ಥೆ ಕಾಂಗೋವನ್ನು ಯುದ್ಧಪೀಡಿತ ಪ್ರದೇಶವೆಂದು ಘೋಷಿಸಿದೆ. 12ಕ್ಕೂ ಹೆಚ್ಚು ಶಸ್ತ್ರಾಸ್ತ್ರ ಪಡೆಗಳು ಇಲ್ಲಿ ಸೆಣಸಾಡುತ್ತಿವೆ.

ಸುಮಾರು 18ಸಾವಿರಕ್ಕೂ ಹೆಚ್ಚು ಯೋಧರನ್ನು ಶಾಂತಿ ಸಂರಕ್ಷಣೆಗಾಗಿ ವಿಶ್ವಸಂಸ್ಥೆ ಇಲ್ಲಿ ನಿಯೋಜಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
An explosion killed a child and injured 32 Indian peacekeepers in the eastern Democratic Republic of Congo city of Goma on Tuesday, the UN mission said.
Please Wait while comments are loading...