ವಿವಾದಿತ ಧಾರ್ಮಿಕ ಬೋಧಕ ಝಾಕೀರ್ ನಾಯ್ಕ್‌ಗೆ ಆಹ್ವಾನ: ಫಿಪಾ ವಿಶ್ವಕಪ್ ಬಹಿಷ್ಕಾರಕ್ಕೆ ಬಿಜೆಪಿ ನಾಯಕರ ಕರೆ
ನವದೆಹಲಿ, ನವೆಂಬರ್ 23: ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್‌ಗಾಗಿ ವಿವಾದಿತ ಇಸ್ಲಾಮಿಕ್ ಧಾರ್ಮಿಕ ಬೋಧಕ ಝಾಕೀರ್ ನಾಯ್ಕ್‌ನನ್ನು ಆಹ್ವಾನಿಸಿದೆ. ಭಾರತದಿಂದ ಪಲಾಯನ ಮಾಡಿರುವ ಝಾಕೀರ್ ನಾಯ್ಕ್‌ನ ಆಹ್ವಾನಕ್ಕೆ ಕೇಂದ್ರ ಸರ್ಕಾರ ತೀವ್ರ ಖಂಡನೆ ವ್ಯಕ್ತಪಡಿಸಿದೆ. ಇನ್ನು ಧಾರ್ಮಿಕ ಉಪನ್ಯಾಸ ನೀಡಲು ಆಹ್ವಾನಿಸಿದ್ದಕ್ಕಾಗಿ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಗಳ ಬಹಿಷ್ಕಾರಕ್ಕೆ ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.
ವಿವಾದಿತ ಧಾರ್ಮಿಕ ಇಸ್ಲಾಮಿಕ್ ಬೋಧಕ ಝಾಕೀರ್ ನಾಯ್ಕ್‌ಗೆ ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್‌ಗೆ ಆಹ್ವಾನಿಸಲಾಗಿದೆ. ಈ ಕುರಿತು ಕೇಂದ್ರ ಸರ್ಕಾರ ತೀವ್ರವಾಗಿ ಪ್ರತಿಕ್ರಿಯಿಸಿದೆ. ಭಾರತವು ಖಂಡಿತವಾಗಿಯೂ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತದೆ. ಈ ಕುರಿತು ನಿರ್ಣಾಯಕ ಕ್ರಮವನ್ನು ತೆಗೆದುಕೊಳ್ಳುತ್ತೇವೆ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ. ಇದೇ ವೇಳೆ ಬಿಜೆಪಿ ನಾಯಕರೊಬ್ಬರು ಫಿಫಾ ವಿಶ್ವಕಪ್ ಬಹಿಷ್ಕಾರಕ್ಕೂ ಕರೆ ನೀಡಿದ್ದಾರೆ.
ಝಾಕೀರ್ ನಾಯ್ಕ್ ವಿಚಾರವಾಗಿ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಪುರಿ, ಖಂಡಿತವಾಗಿಯೂ ಈ ವಿಷಯವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಲಿದೆ ಎಂದು ಹೇಳಿದ್ದಾರೆ.

ಇನ್ನು ಫಿಫಾ ವಿಶ್ವಕಪ್‌ಗೆ ಝಾಕೀರ್ ನಾಯ್ಕ್ ಅವರನ್ನು ಆಹ್ವಾನಿಸಿರುವುದನ್ನು ಖಂಡಿಸಿ ಇತಿಹಾಸಕಾರ ಇರ್ಫಾನ್ ಹಬೀಬ್ ಹೇಳಿಕೆ ನೀಡಿದ್ದಾರೆ. ಇಂತಹ ಕಾರ್ಯಕ್ರಮಗಳಿಗೆ ಆಹ್ವಾನ ನೀಡಬಾರದು ಎಂದು ಅವರು ಟ್ವೀಟ್ ಮಾಡಿದ್ದಾರೆ. ಝಾಕೀರ್ ನಾಯ್ಕ್ ಅವರನ್ನು ಆಹ್ವಾನಿಸಿದ್ದಕ್ಕಾಗಿ ಕತಾರ್ ದೇಶವನ್ನು ಟೀಕಿಸಿ ಹಲವರು ಟ್ವೀಟ್ ಮಾಡಿದ್ದಾರೆ.
ಸಾವಿಯೊ ರೋಡ್ರಿಗಸ್ ಅಸಮಾಧಾನ
2022ರ ಫಿಫಾ ವಿಶ್ವಕಪ್‌ಗೆ ಝಾಕೀರ್ ನಾಯ್ಕ್ ಅವರನ್ನು ಆಹ್ವಾನಿಸಲಾಗಿದೆ. ಇಡೀ ಪಂದ್ಯಾವಳಿಯಲ್ಲಿ ಝಾಕೀರ್ ಕತಾರ್‌ನಲ್ಲಿ ಧಾರ್ಮಿಕ ಪ್ರವಚನ ನೀಡಲಿದ್ದಾರೆ ಎಂದು ವರದಿಯಾಗಿದೆ. ಝಾಕೀರ್ ನಾಯ್ಕ್ ಮೇಲೆ ಭಾರತದಲ್ಲಿ ಪ್ರಚೋದನಕಾರಿ ಭಾಷಣಗಳನ್ನು ಮಾಡಿದ ಮತ್ತು ದ್ವೇಷವನ್ನು ಹರಡಿದ ಆರೋಪವಿದೆ. ಝಾಕೀರ್ ನಾಯ್ಕ್‌ನಿಗೆ ಫಿಫಾ ವಿಶ್ವಕಪ್‌ಗೆ ಆಹ್ವಾನಿಸಿರುವುದಕ್ಕೆ ಬಿಜೆಪಿ ವಕ್ತಾರ ಸಾವಿಯೊ ರೋಡ್ರಿಗಸ್ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ, ಭಾರತೀಯ ಫುಟ್ಬಾಲ್ ಸಂಸ್ಥೆಗಳು ಮತ್ತು ಕತಾರ್‌ಗೆ ಪ್ರಯಾಣಿಸುವ ಭಾರತೀಯರಿಗೆ ಫಿಫಾ ವಿಶ್ವಕಪ್ ಬಹಿಷ್ಕರಿಸುವಂತೆ ಮನವಿ ಮಾಡಿದ್ದಾರೆ.
ಭಾರತದಿಂದಲೂ ಬಹಿಷ್ಕರಿಸುವಂತೆ ಮನವಿ?
ಝಾಕೀರ್ ನಾಯ್ಕ್ ಭಾರತದಿಂದ ಪಲಾಯನ ಮಾಡಿದ್ದು, ಹಲವು ವರ್ಷಗಳಿಂದ ಇಂಡೋನೇಷ್ಯಾದಲ್ಲಿ ನೆಲೆಸಿದ್ದಾರೆ. ಭಾರತದಲ್ಲಿ ಝಾಕೀರ ನಾಯ್ಕ್ ವಿರುದ್ಧ ಬಂಧನ ವಾರಂಟ್ ಇದೆ. ಫಿಫಾ ವಿಶ್ವಕಪ್‌ಗೆ ಆಹ್ವಾನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ರೋಡ್ರಿಗಸ್, ಜಗತ್ತು ಭಯೋತ್ಪಾದನೆಯೊಂದಿಗೆ ವಿರುದ್ಧ ಹೋರಾಡುತ್ತಿರುವ ಸಮಯದಲ್ಲಿ ಝಾಕೀರ್ ನಾಯ್ಕ್‌ಗೆ ವೇದಿಕೆ ನೀಡುವುದು ಭಯೋತ್ಪಾದನೆಯನ್ನು ಉತ್ತೇಜಿಸುತ್ತದೆ ಎಂದು ತಿಳಿಸಿದ್ದಾರೆ.

ಫಿಫಾ ವಿಶ್ವಕಪ್ ಒಂದು ಜಾಗತಿಕ ಸರಣಿಯಾಗಿದೆ. ಇದನ್ನು ವೀಕ್ಷಿಸಲು ಪ್ರಪಂಚದಾದ್ಯಂತದ ಫಿಫಾ ಅಭಿಮಾನಿಗಳು ಬರುತ್ತಾರೆ ಮತ್ತು ಲಕ್ಷಾಂತರ ಜನರು ಇದನ್ನು ಟಿವಿ ಮತ್ತು ಇಂಟರ್ನೆಟ್‌ನಲ್ಲಿ ವೀಕ್ಷಿಸುತ್ತಾರೆ. ಜಗತ್ತು ಜಾಗತಿಕವಾಗಿ ಭಯೋತ್ಪಾದನೆ ವಿರುದ್ಧ ಹೋರಾಡುತ್ತಿರುವ ಸಮಯದಲ್ಲಿ ಝಾಕೀರ್ ನಾಯ್ಕ್‌ನಿಗೆ ವೇದಿಕೆಯನ್ನು ನೀಡಲಾಗುತ್ತಿದೆ. ಭಯೋತ್ಪಾದಕನಿಗೆ ತನ್ನ ಧರ್ಮಾಂಧತೆ ಮತ್ತು ದ್ವೇಷವನ್ನು ಹರಡಲು ವೇದಿಕೆಯನ್ನು ನೀಡುವುದು ಎಷ್ಟು ಸರಿ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.












Click it and Unblock the Notifications