Pakistan Election: ಶೀಘ್ರದಲ್ಲೇ ಪಾಕ್ ಚುನಾವಣೆಗೆ ಮುಹೂರ್ತ ಫಿಕ್ಸ್!

ಇಸ್ಲಾಮಾಬಾದ್‌: ಭಯೋತ್ಪಾದಕರ ತವರು ನೆಲ ಎಂಬ ಕುಖ್ಯಾತಿ ಪಡೆದಿರುವ ಪಾಕಿಸ್ತಾನ, ಇದೀಗ ತನ್ನ ಸಂಸತ್‌ ಚುನಾವಣೆಗೆ ಅಂತಿಮ ಹಂತದ ಸಿದ್ಧತೆ ನಡೆಸಿದೆ. ಈಗಾಗಲೇ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೈಲು ಸೇರಿದ ಸಮಯಕ್ಕೆ, ಮತ್ತೊಬ್ಬ ಮಾಜಿ ಪಿಎಂ ನವಾಜ್ ಷರೀಫ್ ಪಾಕಿಸ್ತಾನಕ್ಕೆ ಬಂದಿದ್ದಾರೆ. ಹೀಗೆ ನವಾಜ್ ತನ್ನ ತವರಿಗೆ ಮರಳಿದ ಕೆಲ ದಿನದಲ್ಲಿ ಪಾಕಿಸ್ತಾನ ಸಂಸತ್ ಚುನಾವಣೆ ಬಗ್ಗೆ ಮಹತ್ವದ ಘೋಷಣೆ ಮೊಳಗಿದೆ.

ಹೌದು, ಪಾಕಿಸ್ತಾನ ಸಂಸತ್ ಚುನಾವಣೆ ಕುರಿತು ಮಹತ್ವದ ಮಾಹಿತಿ ರಿವೀಲ್ ಆಗಿದೆ. ಸದಾ ಭಾರತ ವಿರೋಧಿಯಂತೆ ವರ್ತಿಸುವ, ಉಗ್ರರ ತವರು ನೆಲ ಪಾಕಿಸ್ತಾನದಲ್ಲಿ ಇದೀಗ ಚುನಾವಣೆ ಟೆನ್ಷನ್ ಶುರುವಾಗಿದೆ. ಈ ಮಧ್ಯೆ ಪಾಕಿಸ್ತಾನದ ಹಂಗಾಮಿ ಪ್ರಧಾನಿ ಚುನಾವಣೆ ಬಗ್ಗೆ ಈಗ ನೀಡಿರುವ ಹೇಳಿಕೆ ಭಾರಿ ಸಂಚಲನ ಸೃಷ್ಟಿ ಮಾಡಿದೆ. ಹಾಗಾದ್ರೆ ಏನದು ಮಾಹಿತಿ? ಇದು ಪಾಕಿಸ್ತಾನ ಚುನಾವಣೆ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ?

Big Update About Pakistan General Election Has Been Revealed

ಇಮ್ರಾನ್ ಖಾನ್ ಪಕ್ಷಕ್ಕೂ ಅವಕಾಶ?

ಪಾಕ್ ಸಂಸತ್ ವಿಸರ್ಜನೆಯಾದ ನಂತರ, ಪಾಕಿಸ್ತಾನದ ಹಂಗಾಮಿ ಪ್ರಧಾನಿ ಅನ್ವರ್ ಉಲ್ ಹಕ್ ಕಾಕರ್ ಅಧಿಕಾರ ನಡೆಸುತ್ತಿದ್ದಾರೆ. ಈಗ ಪಾಕಿಸ್ತಾನ ಹಂಗಾಮಿ ಪ್ರಧಾನಿ ಅನ್ವರ್ ಉಲ್ ಹಕ್ ಕಾಕರ್ ಚುನಾವಣೆ ಬಗ್ಗೆ ಮಾತನಾಡಿ, ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲಾ ಪಕ್ಷಗಳಿಗೆ ಸಾಮರ್ಥ್ಯ ರುಜುವಾತು ಪಡಿಸಲು ಸಮಾನ ಅವಕಾಶ ಸಿಗುತ್ತೆ ಎಂದಿದ್ದಾರೆ. ಅಲ್ಲದೆ ಚುನಾವಣೆ ಆಯೋಗ ಶೀಘ್ರದಲ್ಲಿ ಚುನಾವಣೆಗೆ ಡೇಟ್ ಫಿಕ್ಸ್ ಮಾಡುತ್ತೆ ಅಂತಿದ್ದಾರೆ ಕಾಕರ್.

ಚುನಾವಣಾ ಪ್ರಕ್ರಿಯೆಗೆ ನೆರವಾಗಲು ಸಿದ್ಧ!

ಚೀನಾದಲ್ಲಿ ನಡೆದ 'ಬೆಲ್ಟ್ & ರೋಡ್ ಫೋರಂ'ನಲ್ಲಿ ಭಾಗವಹಿಸಿದ್ದ ಪಾಕಿಸ್ತಾನದ ಹಂಗಾಮಿ ಪ್ರಧಾನಿ ಅನ್ವರ್ ಉಲ್ ಹಕ್ ಕಾಕರ್ ಈಗ ಮರಳಿ ಪಾಕಿಸ್ತಾನಕ್ಕೆ ಬಂದಿದ್ದಾರೆ. ಈ ಹಿನ್ನೆಲೆ ಸುದ್ದಿಗಾರರ ಜೊತೆ ಮಾತನಾಡಿದ ಕಾಕರ್, ಸದ್ಯದಲ್ಲಿಯೇ ಎಲೆಕ್ಷನ್ ಡೇಟ್ ಫಿಕ್ಸ್ ಆಗಲಿದೆ ಅಂತಾ ಹೇಳಿದ್ದಾರೆ. ಅಲ್ಲದೆ ಯಾವುದೇ ರಾಜಕೀಯ ಪಕ್ಷವನ್ನು ರಾಜಕೀಯ ಪ್ರಕ್ರಿಯೆಯಿಂದ ಹೊರಗೆ ಇಡಲು ಆಗಲ್ಲ ಮತ್ತು ಚುನಾವಣಾ ಪ್ರಕ್ರಿಯೆಗೆ ನೆರವಾಗಲು ಹಂಗಾಮಿ ಸರ್ಕಾರವೂ ಸಿದ್ಧ ಎಂದರು. ಈ ಮೂಲಕ ಇಮ್ರಾನ್ ಪಕ್ಷಕ್ಕೆ ಹೊಸ ಹುರುಪು ತುಂಬಿದ್ದಾರೆ ಕಾಕರ್.

ಯಾವಾಗ ನಡೆಯುತ್ತೆ ಚುನಾವಣೆ?

2024ರ ಜನವರಿ ಕೊನೇ ವಾರದಲ್ಲಿ ಚುನಾವಣೆ ನಡೆಯಲಿದೆ ಎಂದು ಪಾಕಿಸ್ತಾನದ ಚುನಾವಣಾ ಆಯೋಗ‌ ಈಗಾಗಲೇ ಘೋಷಿಸಿದೆ. ಇಷ್ಟೆಲ್ಲಾ ಬೆಳವಣಿಗೆ ಮಧ್ಯೆ ಪಾಕ್ ಹಂಗಾಮಿ ಪ್ರಧಾನಿ ಪಾಕಿಸ್ತಾನದ ಚುನಾವಣೆ ಬಗ್ಗೆ ಮಾತನಾಡಿದ್ದಾರೆ. ಒಟ್ನಲ್ಲಿ ಪಾಕಿಸ್ತಾನ ಚುನಾವಣೆಗೆ ಹೀಗೆ ಸಜ್ಜಾಗುತ್ತಿರುವ ಸಮಯದಲ್ಲೇ ಉಗ್ರರ ಭೀಕರ ದಾಳಿಯೂ ನಡೆಯುವ ಭಯ ಕೂಡ ಈಗ ಹೆಚ್ಚಾಗುತ್ತಿದೆ. ಹೀಗಾಗಿ ಪಾಕಿಸ್ತಾನದ ಹಂಗಾಮಿ ಸರ್ಕಾರಕ್ಕೆ ಸಾಲು ಸಾಲು ಸವಾಲುಗಳು ಎದುರಾಗೋದು ಗ್ಯಾರಂಟಿ ಅಂತಿದ್ದಾರೆ ಪಾಕಿಸ್ತಾನದ ಮತದಾರರು.

Big Update About Pakistan General Election Has Been Revealed

ಪಾಕಿಸ್ತಾನ ಲೋಕಸಭೆಯ ಸದಸ್ಯ ಬಲ 342, ಭಾರತದ ರೀತಿ ಪಾಕಿಸ್ತಾನದಲ್ಲಿ ಕೂಡ 5 ವರ್ಷ ಅಧಿಕಾರವಧಿ ಇರುತ್ತದೆ. ಈ ಅವಧಿ ಇದೇ ಆಗಸ್ಟ್ 12ಕ್ಕೆ ಕೊನೆಯಾಗುತ್ತಿತ್ತು. ಆದ್ರೆ ಈ ಅವಧಿ ಪೂರ್ಣವಾಗುವ ಮೊದಲು ಅಂದರೆ, ಆಗಸ್ಟ್‌ 9ಕ್ಕೆ ಪಾಕಿಸ್ತಾನದ ಸಂಸತ್ ವಿಸರ್ಜನೆಗೆ ಶಿಫಾರಸು ಕಳುಹಿಸಿದ್ದರು ಪಾಕ್ ಪ್ರಧಾನಿ. ಹೀಗಾಗಿ ಪ್ರಧಾನಿ ಶಿಫಾರಸು ಹಿನ್ನೆಲೆ ಪಾಕಿಸ್ತಾನ ಸಂಸತ್ತನ್ನು ವಿಸರ್ಜನೆ ಮಾಡಲಾಗಿತ್ತು. ಇದೀಗ ಚುನಾವಣೆಗೆ ಸಕಲ ಸಿದ್ಧತೆ ನಡೆಸಲಾಗಿದ್ದು ಹಂಗಾಮಿ ಪ್ರಧಾನಿಯಾಗಿ ಅನ್ವರ್ ಉಲ್ ಹಕ್ ಕಾಕರ್ ಅಧಿಕಾರ ನಡೆಸುತ್ತಿದ್ದಾರೆ. ಅಲ್ಲದೆ ಎಲೆಕ್ಷನ್ ಶಾಂತಿಯುತವಾಗಿ ನಡೆಸಲು ಸಂಪೂರ್ಣ ಸಹಕಾರ ನೀಡುವ ಕುರಿತು ಅನ್ವರ್ ಉಲ್ ಹಕ್ ಕಾಕರ್ ಇದೀಗ ವಾಗ್ದಾನ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+