ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನದಲ್ಲಿ ಭೂತ: ಜೀವ ಬೆದರಿಕೆಗೆ ನಿಂತ ವಿಮಾನ!

|
Google Oneindia Kannada News

ಮ್ಯಾಡ್ರಿಡ್ ಜುಲೈ 25: ಕಾರು, ಬಸ್ಸು ಅಥವಾ ರಸ್ತೆ ನಡುವೆ ದೆವ್ವಗಳು ಬೆದರಿಕೆ ಹುಟ್ಟಿಸುವುದು ಸಾಮಾನ್ಯ. ಇಂತಹ ಘಟನೆಗಳು ನಡೆದಿರುವುದನ್ನು ನಾವು ಕೇಳಿದ್ದೇವೆ. ಆದರೆ ಇಲ್ಲೊಂದು ದೆವ್ವ ವಿಮಾನದಲ್ಲಿ ಬೆದರಿಕೆ ಹುಟ್ಟಿಸಿದೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ದೆವ್ವದ ಬೆದರಿಕೆಗೆ ತಮ್ಮ ಪ್ರಾಣ ಪಕ್ಷಿಯನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡ ಘಟನೆ ನಡೆದಿದೆ. ಅಷ್ಟಕ್ಕೂ ಈ ಘಟನೆ ನಡೆದಿದ್ದು ಎಲ್ಲಿ?, ಆಗಿದ್ದೇನು? ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಇಟಲಿಯಿಂದ ಸ್ಪೇನ್‌ಗೆ ತೆರಳುವ ವಿಮಾನದಲ್ಲಿದ್ದ ಪ್ರಯಾಣಿಕರು ಬಹುಶಃ ಈ ಪ್ರಯಾಣವನ್ನು ಮರೆಯಲು ಸಾಧ್ಯವೇ ಇಲ್ಲ ಬಿಡಿ. ಯಾಕೆಂದರೆ ವಿಮಾನದಲ್ಲಿದ್ದ ಪ್ರಯಾಣಿಕರು ಇದ್ದಕ್ಕಿದ್ದಂತೆ ಬೆದರಿಕೆಯ ಸಂದೇಶಗಳನ್ನು ನೋಡಿ ಭಯಭೀತರಾಗಿದ್ದಾರೆ.

ವಿಮಾನದಲ್ಲಿದ್ದ ಪ್ರಯಾಣಿಕರು ತಮ್ಮ ಫೋನ್ ತೆಗೆದು ನೋಡಿದಾಗ, ಭಯದಿಂದ ಕಿರುಚಾಡಿದ್ದಾರೆ. ಯಾರೋ ಕೊಲೆ ಬೆದರಿಕೆ ಹಾಕಿರುವುದು ಕಂಡಿದ್ದಾರೆ. ಪುರುಷ ಅಸ್ಥಿಪಂಜರಗಳ ಭಯಾನಕ ಚಿತ್ರಗಳನ್ನು ಅವರ ಫೋನ್‌ಗಳಲ್ಲಿ ಕಾಣಿಸಿಕೊಂಡಿವೆ. ವಿಷಯದ ಗಂಭೀರತೆಯನ್ನು ಅರಿತು ಪೈಲಟ್ ವಿಮಾನವನ್ನು ನಿಲ್ಲಿಸಲು ನಿರ್ಧರಿಸಿ ಕೆಲ ಹೊತ್ತು ವಿಮಾನ ನಿಲ್ಲಿಸಿದ ಘಟನೆ ನಡೆದಿದೆ.

ಇಟಲಿಯ ರೋಮ್ ಫಿಯುಮಿಸಿನೊ ವಿಮಾನ ನಿಲ್ದಾಣದಿಂದ ಸ್ಪೇನ್‌ನ ಅಲಿಕಾಂಟೆಗೆ ಪ್ರಯಾಣಿಸುತ್ತಿದ್ದ ಫ್ಲೈಟ್ VY1367ರಲ್ಲಿ ಈ ಘಟನೆ ನಡೆದಿದೆ. ಈ ವಿಮಾನದಲ್ಲಿ 147 ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು. ಇವರಲ್ಲಿ ಅನೇಕರಿಗೆ ಅಸ್ತಿಪಂಜರ ಇರುವ ಫೋಟೋಗಳು ಫೋನ್‌ನಲ್ಲಿ ಕಾಣಿಸಿಕೊಂಡಿವೆ. ಹೀಗಾಗಿ ಪ್ರಯಾಣಿಕರು ಭಯಭೀತರಾಗಿರುವುದು ಕಂಡು ವಿಮಾನವನ್ನು ನಿಲ್ಲಿಸಬೇಕಾಗಿ ಬಂದಿದೆ.

ಸಂದೇಶಕ್ಕೆ ಹೆದರಿದ ಪ್ರಯಾಣಿಕರು

ಸಂದೇಶಕ್ಕೆ ಹೆದರಿದ ಪ್ರಯಾಣಿಕರು

ಅಂದಹಾಗೆ ಈ ರೀತಿ ಭಯಾನಕ ಚಿತ್ರಗಳು ಬೆದರಿಕೆಗಳು ಕಾಣಿಸಿಕೊಂಡಿದ್ದು ಒಂದು ಫೋನಿನಲ್ಲಿ ಅಲ್ಲ. ಬದಲಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರತಿಯೊಬ್ಬರ ಫೋನಿನಲ್ಲೂ ಇಂತಹ ಬೆದರಿಕೆಗಳು, ಭಯಾನಕ ಫೋಟೋಗಳು ಕಾಣಿಸಿಕೊಂಡಿವೆ. ವಿಮಾನದಲ್ಲಿದ್ದ ಜನರು ಭಯಭೀತರಾಗಿ ಕಿರುಚಾಡಿದ್ದಾರೆ. ನರಕಯಾತನೆಯ ಚಿತ್ರಣ ಮತ್ತು ಸಾವಿನ ಭಯ, ವಿಮಾನದ ಪ್ರಯಾಣದ ಜೊತೆಗೆ ಜನರ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿತು. ವಿಷಯದ ಗಂಭೀರತೆಯನ್ನು ಅರ್ಥಮಾಡಿಕೊಂಡ ಕ್ಯಾಪ್ಟನ್ ವಿಮಾನವನ್ನು ಸ್ವಲ್ಪ ಹೊತ್ತು ನಿಲ್ಲಿಸಿದ್ದಾರೆ.

ಏರ್‌ಡ್ರಾಪ್ ಆಪ್ ಮೂಲಕ ಸಂದೇಶ

ಏರ್‌ಡ್ರಾಪ್ ಆಪ್ ಮೂಲಕ ಸಂದೇಶ

ಈ ಇಡೀ ವಿಷಯವನ್ನು ತನಿಖೆಗೆ ಒಳಪಡಿಸಿದಾಗ ಈ ಭಯಾನಕ ಸಂದೇಶಗಳು ಏರ್‌ಡ್ರಾಪ್ ಆಪ್ ಮೂಲಕ ಜನರಿಗೆ ರವಾನೆಯಾಗಿರುವುದು ತಿಳಿದು ಬಂದಿದೆ. ಏರ್‌ಡ್ರಾಪ್ ಸಂದೇಶಗಳೊಂದಿಗೆ, ಐಫೋನ್ ಬಳಕೆದಾರರು ತಮ್ಮ ಸುತ್ತಲಿನ ಇತರ ಬಳಕೆದಾರರಿಗೆ ಸಂದೇಶಗಳು ಮತ್ತು ಫೋಟೋಗಳನ್ನು ಕಳುಹಿಸಬಹುದು.

ಇಟಲಿ ಪೊಲೀಸರಿಗೆ ದೂರು

ಇಟಲಿ ಪೊಲೀಸರಿಗೆ ದೂರು

'ದಿ ಡೈಲಿ ಸ್ಟಾರ್' ಸುದ್ದಿ ಪ್ರಕಾರ, ಇಟಲಿಯ ರೋಮ್ ಫಿಯುಮಿಸಿನೊ ವಿಮಾನ ನಿಲ್ದಾಣದಿಂದ ಸ್ಪೇನ್‌ನ ಅಲಿಕಾಂಟೆಗೆ ಪ್ರಯಾಣಿಸುತ್ತಿದ್ದ 147 ಪ್ರಯಾಣಿಕರಲ್ಲಿ ಅನೇಕರಿಗೆ ಬೆದರಿಕೆ ಸಂದೇಶಗಳು ಬಂದಿವೆ. ನಂತರ ಈ ಬಗ್ಗೆ ಇಟಲಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸಂದೇಶಗಳು ಇಥಿಯೋಪಿಯನ್ ಅಮ್ಹಾರಿಕ್ ಭಾಷೆಯಲ್ಲಿವೆ ಮತ್ತು ದೆವ್ವ ಮತ್ತು ನರಕಾಗ್ನಿಗಳ ಚಿತ್ರಗಳನ್ನು ಮತ್ತು ಸಾವಿನ ಬೆದರಿಕೆಗಳನ್ನು ಒಳಗೊಂಡಿವೆ. ಗಾಬರಿಗೊಂಡ ಪ್ರಯಾಣಿಕರು ಈ ಬಗ್ಗೆ ಮಾಹಿತಿ ನೀಡಿದ್ದು, ಪೊಲೀಸರು ಬರುವವರೆಗೂ ಫ್ಲೈಟ್ ಕ್ಯಾಪ್ಟನ್ ವಿಮಾನವನ್ನು ಸ್ಥಗಿತಗೊಳಿಸಿದ್ದಾರೆ.

ನಿಟ್ಟುಸಿರು ಬಿಟ್ಟ ಪ್ರಯಾಣಿಕರು

ನಿಟ್ಟುಸಿರು ಬಿಟ್ಟ ಪ್ರಯಾಣಿಕರು

ಪೊಲೀಸರು ಸಂಪೂರ್ಣ ತನಿಖೆ ನಡೆಸಿದಾಗ 18ರ ಹರೆಯದ ಸ್ಪೇನ್‌ನ ಯುವಕನೊಬ್ಬ ಈ ದುಷ್ಕೃತ್ಯ ಎಸಗುತ್ತಿರುವುದು ಪತ್ತೆಯಾಗಿದೆ. ನಂತರ ಅವರು ಇಂತಹ ವಿಚಿತ್ರ ಮತ್ತು ಭಯಾನಕ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. ಹೀಗಾಗಿ ಫ್ಲೈಟ್ VY1367 ನಿಗದಿತ ಸಮಯಕ್ಕಿಂತ ಎರಡು ಗಂಟೆಗಳ ನಂತರ ಹೊರಟಿದೆ. ಮತ್ತೊಂದೆಡೆ ಸತ್ಯ ಗೊತ್ತಾದ ಬಳಿಕ ಪ್ರಯಾಣಿಕರ ಪ್ರಾಣಕ್ಕೆ ಜೀವ ಬಂದಿದೆ.

English summary
An incident took place in which ghost passengers were threatened with life on a flight from Italy to Spain. know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X