ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಇರಾನ್ ಕುತಂತ್ರ? Israel And Iran
ಯುದ್ಧ ಒಂದು ಶುರುವಾದರೆ ಪರಿಸ್ಥಿತಿ ಏನಾಗುತ್ತದೆ? ಅನ್ನೋದು ಇದೀಗ ಇರಾನ್ & ಇಸ್ರೇಲ್ ಕಿತ್ತಾಟದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಆಧುನಿಕ ಕಾಲದಲ್ಲಿ ಮನುಷ್ಯರಿಗೆ ಗೊತ್ತಾಗಿದೆ. ಇಷ್ಟಾದರೂ ಯುದ್ಧ ನಿಲ್ಲಿಸಿ ಸೈಲೆಂಟ್ ಆಗಲು ಇರಾನ್ & ಇಸ್ರೇಲ್ ಸೇನೆಗಳು ಸಿದ್ಧವಿಲ್ಲ. ಇಬ್ಬರ ನಡುವೆ, ಭಾರಿ ಘೋರ ಯುದ್ಧವು ನಡೆಯುತ್ತಿರುವ ಸಮಯದಲ್ಲೇ, ಮತ್ತೊಂದು ಸುದ್ದಿ ಸಂಚಲನ ಸೃಷ್ಟಿ ಮಾಡುತ್ತಿದೆ. ಹಾಗಾದ್ರೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಇರಾನ್ ಕುತಂತ್ರ ಮಾಡುತ್ತಿದೆಯಾ?
ಮಧ್ಯಪ್ರಾಚ್ಯ ಒಡೆದ ಮನೆಯಂತೆ ಆಗಿದ್ದು, ಭವಿಷ್ಯವೇ ಮಂಕಾಗಿ ಹೋಗುತ್ತಿದೆ ಈ ಭಾಗದಲ್ಲಿ ಇದೀಗ. ಇರಾನ್ ಪರಮಾಣು ಬಾಂಬ್ ಸಿದ್ಧಪಡಿಸ್ತಿದೆ ಎಂದು ಆರೋಪ ಮಾಡಿ ಇಸ್ರೇಲ್ ಭೀಕರವಾಗಿ ಅಟ್ಯಾಕ್ ಶುರು ಮಾಡಿತ್ತು. ಹೀಗಿದ್ದಾಗಲೇ, ಇರಾನ್ ಕೂಡ ಇಸ್ರೇಲ್ ಸೇನೆಗೆ ಆಘಾತ ನೀಡುತ್ತಿದ್ದು. ಈ ರೀತಿ ಇಬ್ಬರೂ ಒಬ್ಬರ ಮೇಲೆ ಮತ್ತೊಬ್ಬರು ಭಾರಿ ದೊಡ್ಡ ಮಟ್ಟದಲ್ಲಿ ಅಸ್ತ್ರಗಳನ್ನ ಬಳಕೆ ಮಾಡಿ ಬಡಿದಾಡುತ್ತಿದ್ದಾರೆ. ಇದೇ ವೇಳೆ ಇಸ್ರೇಲ್ ಪ್ರಧಾನಿಗೆ ಕೂಡ ಸಮಸ್ಯೆ ಎದುರಾಯ್ತಾ? ಹಾಗಾದ್ರೆ ಇಸ್ರೇಲ್ ಪ್ರಧಾನಿಯನ್ನೇ ನೇರವಾಗಿ ಇರಾನ್ ಈಗ ಟಾರ್ಗೆಟ್ ಮಾಡುತ್ತಿದೆಯಾ?

ಇಸ್ರೇಲ್ ಪ್ರಧಾನಿ ವಿರುದ್ಧ ಇರಾನ್...
ಜಗತ್ತಿನಲ್ಲಿ ಇದೀಗ ಸಾಲು ಸಾಲು ಯುದ್ಧಗಳು ಭಯದ ವಾತಾವರಣ ಸೃಷ್ಟಿ ಮಾಡಿ ಭವಿಷ್ಯ ಮಂಕಾಗಿಸಿವೆ. ರಷ್ಯಾ & ಉಕ್ರೇನ್ ಯುದ್ಧದ ಭಯದ ನಡುವೆ ಈಗ ಇರಾನ್ & ಇಸ್ರೇಲ್ ಕೂಡ ಜೋರಾಗಿ ಬಡಿದಾಡ್ತಿವೆ. ಇರಾನ್ & ಇಸ್ರೇಲ್ ನಡುವೆ ಘೋರ ಕದನ ಶುರುವಾಗಿ 1 ವಾರವೇ ಕಳೆದು ಹೋಗಿದೆ. ಇಬ್ಬರ ನಡುವಿನ ಈ ಘೋರ ಕಾಳಗ ನೋಡಿ ಪ್ರಪಂಚದ ಮೂಲೆ ಮೂಲೆಯಲ್ಲೂ ಭಯದ ವಾತಾವರಣ ನಿರ್ಮಾಣವಾಗಿದೆ.
ಪರಮಾಣು ಯುದ್ಧ ನಡೆದರೆ ಪರಿಸ್ಥಿತಿ ಏನು? ಅನ್ನೋ ಚರ್ಚೆ ಕೂಡ ನಡೆಯುತ್ತಿದೆ. ವಿಶ್ವಸಂಸ್ಥೆ ಕೂಡ ಈ ಬಗ್ಗೆ ಗಮನವಿಟ್ಟು ಕೂತಿದ್ದು, ಇರಾನ್ & ಇಸ್ರೇಲ್ ಯುದ್ಧ ನಿಲ್ಲದೇ ಹೋದರೆ ಮುಂದಿನ ಪರಿಸ್ಥಿತಿಯೇ ಘೋರವಾಗಲಿದೆ ಅಂತಿದ್ದಾರೆ ಘಟಾನುಘಟಿ ದೇಶಗಳ ನಾಯಕರು. ಇಂತಹ ಸಮಯದಲ್ಲೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಇರಾನ್ ಕುತಂತ್ರ ಮಾಡುತ್ತಿದೆಯಾ? ಎಂಬ ಅನುಮಾನ ಮೂಡಿದ್ದು, ಇದೀಗ ಇರಾನ್ ನೇರವಾಗಿ ಇಸ್ರೇಲ್ ಪ್ರಧಾನಿಯನ್ನೇ ಟಾರ್ಗೆಟ್ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಅಂದ್ರೆ ಇಸ್ರೇಲ್ ಪ್ರಧಾನಿ ಮೇಲೆಯೇ ದಾಳಿಗೆ ಸ್ಕೆಚ್ ಹಾಕಿ ಕುತಂತ್ರ ಮಾಡಿದೆ ಎಂದು ಆರೋಪಿಸಲಾಗಿದೆ.












Click it and Unblock the Notifications