Get Updates
Get notified of breaking news, exclusive insights, and must-see stories!

ಬೆಂಗಳೂರಿನ ರಾಜಲಕ್ಷ್ಮಿಗೆ ಮಿಸ್ ಪಾಪ್ಯುಲಾರಿಟಿ ಕಿರೀಟ

ಪೋಲೆಂಡ್ ನ ವಾರ್ಸಾದಲ್ಲಿ ಶನಿವಾರ ನಡೆದ ಮಿಸ್ ವ್ಹೀಲ್ ಚೇರ್ ವರ್ಲ್ಡ್ -2017 ಸ್ಪರ್ಧೆಯಲ್ಲಿ ಬೆಂಗಳೂರಿನ ದಂತವೈದ್ಯೆ ರಾಜಲಕ್ಷ್ಮಿ ಅವರು ಭಾರತವನ್ನು ಪ್ರತಿನಿಧಿಸಿ, ಮಿಸ್ ಪಾಪ್ಯುಲಾರಿಟಿ 2017 ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಬೆಲಾರಸ್ ನ ಮನಶ್ಶಾಸ್ತ್ರದ ವಿದ್ಯಾರ್ಥಿನಿ ಅಲೆಕ್ಸಾಂಡ್ರಾ ಚಿಚಿಕೊವಾ ಮಿಸ್ ವ್ಹೀಲ್ ಚೇರ್ ವರ್ಲ್ಡ್ -2017 ಆಗಿ ಆಯ್ಕೆಯಾದರು. ಈ ಸ್ಪರ್ಧೆಯಲ್ಲಿ ವಿಜೇತರಾಗಿರುವ ಚಿಚಿಕೊವಾ, ನಿಮ್ಮ ಆತಂಕ ಹಾಗೂ ಭಯದ ವಿರುದ್ಧ ಹೋರಾಡಿ ಎಂದು ಹೇಳಿದ್ದಾರೆ.

ದಕ್ಷಿಣ ಆಫ್ರಿಕಾದ ಲೆಬೊಹಾಂಗ್ ಮೊನಿಟ್ಸಿ ರನ್ನರ್ ಅಪ್ ಆಗಿದ್ದಾರೆ. ಈ ಹತ್ತೊಂಬತ್ತು ದೇಶಗಳ ಇಪ್ಪತ್ನಾಲ್ಕು ಸುಂದರಿಯರು ಭಾಗವಹಿಸಿದ್ದರು. ವ್ಹೀಲ್ ಚೇರ್ ಮೇಲೆ ದಿನ ಕಳೆಯುವ ಮಹಿಳೆಯರ ಬಗ್ಗೆ ಇರುವ ಸಮಾಜದ ಧೋರಣೆಯನ್ನು ಬದಲಾಯಿಸುವುದು ಈ ಸ್ಪರ್ಧೆಯ ಉದ್ದೇಶವಾಗಿತ್ತು.

Bengaluru based Rajalakshmi miss popularity 2017

ಈ ಸ್ಪರ್ದೆಯಲ್ಲಿ ಸೌಂದರ್ಯವೊಂದೇ ಮಾನದಂಡವಾಗಿರಲಿಲ್ಲ. ನಾವು ಸ್ಪರ್ಧಿಗಳ ವ್ಯಕ್ತಿತ್ವವನ್ನೂ ಗಣನೆಗೆ ತೆಗೆದುಕೊಂಡಿದ್ದೆವು. ಅವರ ನಿತ್ಯದ ಚಟುವಟಿಕೆ, ಪಾಲ್ಗೊಳ್ಳುವಿಕೆ, ಸಾಮಾಜಿಕ ಜೀವನ ಹಾಗೂ ಯೋಜನೆಗಳನ್ನು ಕೂಡ ಗಮನಿಸಿದ್ದೆವು ಎಂದು ಸ್ಪರ್ಧೆಯ ತೀಪುಗಾರ್ತಿಯಲ್ಲಿ ಒಬ್ಬರು ತಿಳಿಸಿದ್ದಾರೆ.

ಸ್ಪರ್ಧಿಗಳು ಪೋಲೆಂಡ್ ನ ರಾಜಧಾನಿಯಲ್ಲಿ ಎಂಟು ದಿನ ಇದ್ದರು. ತಾಲೀಮು, ಫೋಟೋ ಸೆಷನ್ ಹಾಗೂ ಸಮಾರಂಭಗಳಲ್ಲಿ ತೊಡಗಿಕೊಂಡಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+