• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತೈವಾನ್‌ಗೆ ಅಮೆರಿಕ ರಾಯಭಾರಿ ಭೇಟಿ ನೀಡಿದರೆ, ಭಾರಿ ಬೆಲೆ ತೆರಬೇಕಾದೀತು: ಚೀನಾ

|

ನ್ಯೂಯಾರ್ಕ್,ಜನವರಿ 08: ತೈವಾನ್‌ಗೆ ಅಮೆರಿಕ ರಾಯಭಾರಿ ಭೇಟಿ ನೀಡಿದರೆ ಭಾರಿ ಬೆಲೆ ತೆರಬೇಕಾದೀತು ಎಂದು ಚೀನಾ ಎಚ್ಚರಿಕೆ ನೀಡಿದೆ.

ಕ್ರಾಫ್ಟ್ ತೈವಾನ್ ನ ಅಧಿಕಾರಿಗಳು ಇನ್ನಿತರ ಪ್ರಜಾಪ್ರಭುತ್ವ ಸಮುದಾಯದ ಸದಸ್ಯರನ್ನು ಭೇಟಿಯಾಗಲಿದ್ದಾರೆ ಎಂದು ಅಮೆರಿಕನ್ ಯುಎಸ್ ಮಿಷನ್ ಗುರುವಾರ ಹೇಳಿತ್ತು. ಅವರ ಭೇಟಿ ಉಭಯ ದೇಶಗಳ ನಡುವಣ ಸ್ನೇಹವರ್ಧನೆಯ ಸೂಚಕ ಎಂದು ತೈವಾನ್ ಅಧ್ಯಕ್ಷರ ವಕ್ತಾರ ಕ್ಸವೀಯರ್ ಚಾಂಗ್ ಕೂಡಾ ಕ್ರಾಫ್ಟ್ ಭೇಟಿ ನೀಡುವುದನ್ನು ಸ್ವಾಗತಿಸಿದ್ದರು.

ಅಮೆರಿಕದಲ್ಲಿ ನಡೆದ ಹಿಂಸಾಚಾರ 'ಸುಂದರ ದೃಶ್ಯ' ಎಂದು ಚೀನಾ ಲೇವಡಿ

ವಿಶ್ವಸಂಸ್ಥೆಯಲ್ಲಿನ ಅಮೆರಿಕಾದ ರಾಯಭಾರಿ ಕೆಲಿ ಕ್ರಾಫ್ಟ್ ಮುಂದಿನ ವಾರ ತೈವಾನ್ ಗೆ ಭೇಟಿ ನೀಡುವ ಯೋಚನೆ ಮಾಡಿದರೆ ಅಮೆರಿಕ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಚೀನಾ ಗುರುವಾರ ಎಚ್ಚರಿಕೆ ನೀಡಿದೆ.

ಪ್ರಜಾಪ್ರಭುತ್ವ ಮತ್ತು ಸ್ವಯಂ ಆಡಳಿತ ಹೊಂದಿರುವ ತೈವಾನ್ ಚೀನಾದಿಂದ ನಿರಂತರವಾಗಿ ಬೆದರಿಕೆಗೊಳಪಟ್ಟಿದೆ. ಈ ದ್ವೀಪ ಪ್ರದೇಶ ತನ್ನದು ಎಂದು ಹೇಳಿಕೊಳ್ಳುತ್ತಿರುವ ಚೀನಾ, ಒಂದಲ್ಲಾ ಒಂದು ದಿನ ಅಗತ್ಯಬಿದ್ದರೆ ಸೇನೆಯಿಂದ ಅದನ್ನು ತನ್ನ ವಶಕ್ಕೆ ಪಡೆದುಕೊಳ್ಳುವುದಾಗಿ ಶಪಥ ಮಾಡಿದೆ.

ತೈವಾನ್‌ನ ಯಾವುದೇ ರಾಜತಾಂತ್ರಿಕ ಮಾನ್ಯತೆಯನ್ನು ವಿರೋಧಿಸುವ ಚೀನಾ, ವಿಶ್ವ ವೇದಿಕೆಯಲ್ಲಿ ಅದನ್ನು ಪ್ರತ್ಯೇಕವಾಗಿಡಲು ಮುಂದಾಗಿದೆ.

ವ್ಯಾಪಾರ, ಭದ್ರತೆ ಮತ್ತು ಮಾನವ ಹಕ್ಕುಗಳಂತಹ ವಿಚಾರಗಳಲ್ಲಿ ಚೀನಾದೊಂದಿಗೆ ಸಂಘರ್ಷಕ್ಕಿಳಿದಿದ್ದ ನಿರ್ಗಮಿತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕಳೆದ ವರ್ಷ ಬಹುಹಂತದ ಹಿರಿಯ ಅಧಿಕಾರಿಗಳನ್ನು ತೈವಾನ್ ಗೆ ಕಳುಹಿಸಿದ್ದರು.

ಈ ಪುಟಾಣಿಯ ತೊದಲು ನುಡಿ ಕೇಳಿ ಮೂರು ವರ್ಷವಾಯಿತು

ಜೋ ಬಿಡೆನ್ ಅಧಿಕಾರ ಸ್ವೀಕಾರಕ್ಕೂ ಒಂದು ವಾರಕ್ಕೂ ಮುನ್ನ ಅಂದರೆ ಜನವರಿ 13ರಿಂದ 15ರವರೆಗೂ ಕ್ರಾಪ್ಟ್ ತೈವಾನ್ ಭೇಟಿ, ಮುಂಬರುವ ಆಡಳಿತಕ್ಕೆ ಹೊಸ ರಾಜತಾಂತ್ರಿಕ ತಲೆನೋವನ್ನುಂಟು ಮಾಡಿದೆ.

English summary
China On thursday warned the United states would pay a Heavy Price if its United Nations ambassador kellycraft made good on plans to travel to Taiwan next week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X