ಬಾರ್ಸಿಲೋನಾ ದಾಳಿ : ಫ್ರೀಜರ್‌ನಲ್ಲಿ ಕೂತು ಜೀವ ಉಳಿಸಿಕೊಂಡ ನಟಿ

By: ವಿಕಾಸ್ ನಂಜಪ್ಪ
Subscribe to Oneindia Kannada

ಲಂಡನ್, ಅ. 19 : ಬಾರ್ಸಿಲೋನಾದಲ್ಲಿ ನಡೆದ ಉಗ್ರರ ದಾಳಿಯ ಸಂದರ್ಭದಲ್ಲಿ ಭಾರತೀಯ ಮೂಲದ ನಟಿ ಫ್ರೀಜರ್‌ನಲ್ಲಿ ಅವಿತುಕೊಂಡು ಜೀವ ಉಳಿಸಿಕೊಂಡಿದ್ದಾರೆ. ಉಗ್ರರ ದಾಳಿಯ ಸಂದರ್ಭ ನಡೆದ ಘಟನೆಯನ್ನು ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ.

ಬಾರ್ಸಿಲೋನಾದಲ್ಲಿ ಉಗ್ರರ ಅಟ್ಟಹಾಸ: 2 ಸಾವು

ಲೈಲಾ ರಾಸ್ (46) ಹತ್ತು ವರ್ಷದ ಪುತ್ರಿಯೊಂದಿಗೆ ಪ್ರವಾಸಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಉಗ್ರರ ದಾಳಿ ನಡೆಸಿದೆ. ಉಗ್ರರಿಂದ ತಪ್ಪಿಸಿಕೊಳ್ಳಲು ಅವರು ರೆಸ್ಟೋರೆಂಟ್ ಫ್ರೀಜರ್‌ನಲ್ಲಿ ಅವಿತು ಕುಳಿತಿದ್ದರು. ಉಗ್ರರ ದಾಳಿಯಲ್ಲಿ 14 ಜನರು ಮೃತಪಟ್ಟಿದ್ದರು.

Barcelona attack : Indian-origin actress hid in freezer of restaurant as scores were killed

'ಉಗ್ರರ ದಾಳಿಗೆ ಸಿಲುಕಿದ್ದೇನೆ, ರೆಸ್ಟೋರೆಂಟ್ ಫ್ರೀಜರ್‌ನಲ್ಲಿ ಅಡಗಿದ್ದೇನೆ. ಎಲ್ಲರ ಸುರಕ್ಷತೆಗೆ ದೇವರಲ್ಲಿ ಪ್ರಾರ್ಥನೆ ಮಾಡುವೆ' ಎಂದು ಅವರು ಟ್ವಿಟ್ ಮಾಡಿದ್ದಾರೆ. 'ಗುಂಡಿನ ಸದ್ದು ಕೇಳುತ್ತಿದೆ. ಪೊಲೀಸರು ಯಾರಿಗಾಗಿಯೋ ಹುಡುಕುತ್ತಿದ್ದಾರೆ' ಎಂದು ಹೇಳಿದ್ದಾರೆ.

ಬಾರ್ಸಿಲೋನಾ: 2ನೇ ಬಾರಿ ದಾಳಿಗೆ ಯತ್ನಿಸಿದ ನಾಲ್ವರು ಉಗ್ರರು ಉಡೀಸ್

1990ರಲ್ಲಿ ಲೈಲಾ ರಾಸ್ ಭಾರತದ ವಿ ಚಾನೆಲ್‌ನಲ್ಲಿ ನಿರೂಪಕಿಯಾಗಿದ್ದರು. ಇಂಗ್ಲೆಂಡ್ ಮೂಲದ ಸ್ನೂಕರ್ ಆಟಗಾರ ರೋನಿ ಓ ಸುಲ್ಲಿವನ್ ಎಂಬುವವರನ್ನು ವಿವಾಹವಾಗಿದ್ದಾರೆ. ಬ್ರಿಟಿಷ್ ಟೆವಿಷನ್ ನಲ್ಲಿ ಬರುವ 'ಫುಟ್ ಬಾಲರ್ಸ್', 'ವೈವ್ಸ್' ಮುಂತಾದ ಕಾರ್ಯಕ್ರಮಗಳನ್ನು ಅವರು ನಡೆಸಿ ಕೊಡುತ್ತಿದ್ದಾರೆ.

ಬಾರ್ಸಿಲೋನಾದ ಲಾಸ್ ರಾಂಬ್ಲಾಸ್ ಪ್ರದೇಶದಲ್ಲಿ ಪಾದಚಾರಿಗಳ ಮೇಲೆ ವ್ಯಾನ್ ನುಗ್ಗಿಸಿದ್ದ ಉಗ್ರರು 14 ಜನರನ್ನು ಬಲಿ ತೆಗೆದುಕೊಂಡಿದ್ದರು. ನೂರಕ್ಕೂ ಅಧಿಕ ಜನರು ಈ ದಾಳಿಯಲ್ಲಿ ಗಾಯಗೊಂಡಿದ್ದರು. ನಾಲ್ವರು ಉಗ್ರರು ಪೊಲೀಸರ ಗುಂಡಿಗೆ ಬಲಿಯಾಗಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A television actress of Indian origin had a lucky escape during the Barcelona terror attack when she hid in the freezer of a restaurant. Laila Rouass (46) who was on a holiday in the city with her 10-year-old daughter Inez Khan. Rouass, who is married to British snooker player Ronnie O'Sullivan, began her television career in India as a VJ on Channel V during the 1990s.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ