ಭಾರತದ ಎದುರು ಬೇಡಿಕೊಳ್ಳುತ್ತಿದೆ ಬಾಂಗ್ಲಾದೇಶ: ಯಾವ ಕಾರಣಕ್ಕೆ?
ಭಾರತದ ಜೊತೆಯಲ್ಲಿ ಕಿರಿಕ್ ಮಾಡಿಕೊಳ್ಳಲು ಸಜ್ಜಾದಂತೆ ಕಾಣುತ್ತಿದ್ದ ಬಾಂಗ್ಲಾದೇಶ ಈಗ ಮಂಡಿ ಊರುವ ಪರಿಸ್ಥಿತಿ ಬಂದಿದೆ. ಆಂತರಿಕ ಹಿಂಸಾಚಾರದಲ್ಲಿ ನಲುಗಿ ಹೋದ, ಭಾರತದ ನೆರೆಯ ದೇಶ ಬಾಂಗ್ಲಾ ಇದೀಗ ಭಾರತದ ಜೊತೆಗೆ ಹೊಂದಾಣಿಕೆ ಮಾಡಿಕೊಂಡು, ಜೀವನ ನಡೆಸಲು ಸಿದ್ಧವಾಗಿರುವ ಸೂಚನೆ ನೀಡಿದೆ. ಹಾಗಾದ್ರೆ ಭಾರತದ ವಿಚಾರದಲ್ಲಿ ಬಾಂಗ್ಲಾದೇಶ ಇದೀಗ ನೀಡಿರುವ ಮಹತ್ವದ ಹೇಳಿಕೆ ಏನು? ಇದರಿಂದ ಭಾರತಕ್ಕೆ ಏನು ಲಾಭ ಆಗಲಿದೆ? ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯೋಣ ಬನ್ನಿ.
ಬಾಂಗ್ಲಾದೇಶ ಹಿಂಸಾಚಾರದ ಬೆಂಕಿಯಲ್ಲಿ ನರಳಿದ ನಂತರ ಕೈಯಲ್ಲಿ ಕಾಸು ಇಲ್ಲದೆ ತೀವ್ರ ಪರದಾಟ ಪಡುತ್ತಿದೆ. ಅದರಲ್ಲೂ ಬಾಂಗ್ಲಾದೇಶ ಜನರು ಇಷ್ಟೆಲ್ಲಾ ಹಿಂಸಾಚಾರ ನಡೆಸಿದ್ದ ಕಾರಣಕ್ಕೆ, ಅಲ್ಲಿದ್ದ ಫ್ಯಾಕ್ಟರಿ & ಕಂಪನಿಗಳಿಗೆ ಭಾರಿ ನಷ್ಟ ಆಗಿದೆ. ಅದರಲ್ಲೂ ಬಾಂಗ್ಲಾದ ಬಹುತೇಕ ಪ್ರದೇಶದಲ್ಲಿ ಇದ್ದ ಗಾರ್ಮೆಂಟ್ಸ್ ಫ್ಯಾಕ್ಟರಿಗಳು ಬಾಗಿಲು ಹಾಕಿಕೊಂಡು ಭಾರತಕ್ಕೆ ಓಡಿ ಬಂದಿವೆ. ಪರಿಸ್ಥಿತಿ ಹೀಗಿದ್ದಾಗ ಭಾರತದ ಜೊತೆಗೆ ಸಂಬಂಧ ಸುಧಾರಣೆಗಾಗಿ ಬಾಂಗ್ಲಾ ರಾಜಕೀಯ ನಾಯಕರು ಮನಸ್ಸು ಮಾಡಿದ್ದು, ಭಾರತದ ಬಳಿ ಮಂಡಿಯೂರುವ ಪರಿಸ್ಥಿತಿ ಬಂದಂತಾಗಿದೆ. ಸುಮಾರು ವರ್ಷಗಳಿಂದ ಕಿರಿಕ್ ನಡೆಯುತ್ತಿರುವ ನದಿ ನೀರಿನ ಹಂಚಿಕೆಯ ವಿಚಾರವಾಗಿ ಮಾತುಕತೆಗೆ ಸಿದ್ಧ ಎಂಬ ಸಂದೇಶ ನೀಡಿದ್ದಾರೆ ಬಾಂಗ್ಲಾದೇಶದ ನಾಯಕರು.

ನದಿ ನೀರು ವಿವಾದಕ್ಕೆ ಅಂತ್ಯ?
ಜಗತ್ತಿನ ಅತಿದೊಡ್ಡ ನದಿ ನೀರು ಹಂಚಿಕೆ ವಿವಾದಗಳ ಪೈಕಿ 'ತೀಸ್ತಾ' ನದಿ ನೀರು ಹಂಚಿಕೆ ವಿವಾದ ಕೂಡ ಒಂದಾಗಿದೆ. ಹೀಗಿದ್ದಾಗ ಹಲವು ಬಾರಿ ಭಾರತ & ಬಾಂಗ್ಲಾದೇಶ ನಡುವೆ ಈ ವಿಚಾರಕ್ಕೆ ಹಲವು ವರ್ಷಗಳಿಂದ ಕಿರಿಕ್ ಕೂಡ ನಡೆದಿದೆ. ಆದರೆ ಇದೀಗ ವಿವಾದಕ್ಕೆ ಒಂದು ಅಂತ್ಯ ಹಾಡಲು ಬಾಂಗ್ಲಾದೇಶ ಮುಂದೆ ಬಂದಂತೆ ಕಾಣುತ್ತಿದೆ. ಈ ಕುರಿತು ಅಂದರೆ, ತೀಸ್ತಾ ನದಿ ನೀರು ಹಂಚಿಕೆ ಒಪ್ಪಂದ ಸಂಬಂಧ ಭಾರತದ ಜತೆ ಮಾತುಕತೆ ಮತ್ತೆ ಆರಂಭ ಮಾಡಲು ನಾವು ಸಿದ್ಧತೆ ಎಂದು ಬಾಂಗ್ಲಾ ತಿಳಿಸಿದೆ. ಈ ಕುರಿತು ಬಾಂಗ್ಲಾದೇಶ ಮಧ್ಯಂತರ ಸರ್ಕಾರದ ಜಲಸಂಪನ್ಮೂಲ ಸಲಹೆಗಾರರಾದ ಸಯೀದಾ ರಿಜ್ವಾನಾ ಹಸನ್ ಮಹತ್ವದ ಹೇಳಿಕೆ ನೀಡಿದ್ದಾರೆ
ಭಾರತದ ಬಳಿ ಬಾಂಗ್ಲಾ ಬೇಡಿಕೆ?
ಒಟ್ನಲ್ಲಿ ಹಲವು ದಶಕಗಳಿಂದ ಈ ವಿವಾದ ಹಾಗೇ ಇದ್ದು, ಈಗಲಾದರೂ ವಿವಾದ ಅಂತ್ಯ ಕಾಣುತ್ತಾ? ಎಂಬ ನಿರೀಕ್ಷೆ ಮೂಡಿದೆ. ಯಾಕಂದ್ರೆ ಈ ವಿವಾದ ಬಗೆಹರಿದರೆ ಭಾರತದಲ್ಲು ಹೆಚ್ಚಿನ ಯೋಜನೆಗಳನ್ನ ಕೈಗೊಳ್ಳಬಹುದು. ಹಾಗೇ ಭಾರತದ ರೈತರಿಗೆ ಕೂಡ ಇದರಿಂದಾಗಿ ಅನುಕೂಲ ಕೂಡ ಹೆಚ್ಚಾಗಲಿದೆ. ಹೀಗಾಗಿ ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಈ ಕುರಿತು ಹೇಗೆ ನಿರ್ಧಾರ ಕೈಗೊಳ್ಳಲಿದೆ? ಭಾರತ ಇದೀಗ ಮಾತುಕತೆಗೆ ಗ್ರೀನ್ ಸಿಗ್ನಲ್ ಕೊಡುತ್ತಾ? ಎಂಬ ವಿಚಾರವನ್ನ ಕಾದು ನೋಡಬೇಕಿದೆ.












Click it and Unblock the Notifications